ಮಲಗಿದ್ದಾಗ ಮೂವರು ಸಹೋದರಿಯರ ಮೇಲೆ ಆ್ಯಸಿಡ್ ದಾಳಿ
ಲಕ್ನೋ, ಅಕ್ಟೋಬರ್ 13: ಉತ್ತರ ಪ್ರದೇಶ ಅಪರಾಧ ಪ್ರಕರಣಗಳಿಗೆ ಹೆಸರುವಾಸಿಯಾಗುತ್ತಿದೆ. ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಮೂವರು ಸಹೋದರಿಯರ ಮೇಲೆ ವ್ಯಕ್ತಿಯೊಬ್ಬರ ಆ್ಯಸಿಡ್ ಎರಚಿರುವ ಘಟನೆ ವರದಿಯಾಗಿದೆ.ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರ ಮನೆ ಇದ್ದಿದ್ದು ಎರಡನೇ ಮಹಡಿಯಲ್ಲಿ, 8,12,17 ವರ್ಷದ ಸಹೋದರಿಯರು ಕಿಟಕಿಯನ್ನು ತೆರೆದು ಮಲಗಿದ್ದರು. ಅಲ್ಲಿಂದಲೇ ಆ್ಯಸಿಡ್ ಎರಚಲಾಗಿದೆ.
ಹಿರಿಯ ಸಹೋದರಿಗೆ ಮುಖ, ಎದೆಯಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನಿಬ್ಬರಿಗೆ ಅಷ್ಟೇನು ತೊಂದರೆಯಾಗಿಲ್ಲ.

ಗೋಂಡಾ ಆಸ್ಪತ್ರೆಗೆ ಮೂವರನ್ನು ದಾಖಲಿಸಲಾಗಿದೆ. ಪರಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದೆ. ಆತ ಆ್ಯಸಿಡ್ ದಾಳಿ ನಡೆಸಲು ಎರಡು ಮಹಡಿಗಳನ್ನೇರಿ ಬಂದಿದ್ದ, ಆತ ಮನೆಯವರಿಗೆ ಪರಿಚಿತನಿರಬೇಕು, ಹಾಗೂ ಆ ಸಹೋದರಿಯರಿಗೆ ಕೂಡ ಎಂದು ಅಂದಾಜಿಸಲಾಗಿದೆ. ಕಾರಣವೇನೆಂಬುದು ತಿಳಿದುಬಂದಿಲ್ಲ.












Click it and Unblock the Notifications