ರಸ್ತೆಯಲ್ಲಿ ಬಿದ್ದಿದ್ದ ಹೆಣದ ಮೇಲೆ ನೂರಾರು ವಾಹನಗಳ ಸಂಚಾರ

ಅಮ್ರೋಹಾ, ಫೆಬ್ರವರಿ 25: ಅಪಘಾತದಲ್ಲಿ ಸತ್ತುಬಿದ್ದಿದ್ದ ವ್ಯಕ್ತಿಯ ದೇಹದ ಮೇಲೆ ನೂರಾರು ವಾಹನಗಳು ಹರಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿ ಸುಮಾರು 11-12 ತಾಸುಗಳು ಕಳೆದಿತ್ತು.ಆದರೂ ಯಾರ ಕಣ್ಣಿಗೂ ವ್ಯಕ್ತಿಯ ಮೃತದೇಹ ಕಾಣಿಸಿಯೇ ಇರಲಿಲ್ಲ. ನೂರಾರು ವಾಹನಗಳು ಹೆಣದ ಮೇಲೆ ಹರಿದ ಪರಿಣಾಮ ದೇಹ ಛಿದ್ರಛಿದ್ರವಾಗಿತ್ತು.

ದೆಹಲಿ-ಲಖನೌ ಹೆದ್ದಾರಿಯನ್ನು ದಾಟುತ್ತಿದ್ದ ಪಾದಚಾರಿಯೊಬ್ಬನಿಗೆ ವೇಗದಿಂದ ಬಂದಿರುವ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿಗೆ ಹೊಡೆದ ಕಾರು ನಿಲ್ಲಿಸದೆ ಹಾಗೇ ಮುಂದೆ ಹೋಗಿದೆ.

Man Knocked Dead On Delhi Lucknow Highway

ಸುತ್ತ ಮುತ್ತದ ಪ್ರದೇಶದಲ್ಲಿ ಹಲವು ಪೊಲೀಸ್​ ಗಾಡಿಗಳು ಓಡಾಡಿವೆಯಾದರೂ, ಪೊಲೀಸರಿಗೂ ಸಹ ಅಪಘಾತವಾಗಿರುವುದು ತಿಳಿಯದ ಕಾರಣ ಸತತ 12 ಗಂಟೆಗಳ ಕಾಲ ಮೃತ ದೇಹವು ರಸ್ತೆಯಲ್ಲಿ ವಾಹನಗಳ ಅಡಿಯಲ್ಲಿ ಸಿಲುಕಿದೆ.

ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮೃತ ದೇಹವಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲಿ ಉಳಿದಿದ್ದ ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೃತ ದೇಹ ಎಷ್ಟರ ಮಟ್ಟಿಗೆ ಜಜ್ಜಿಹೋಗಿತ್ತೆಂದರೆ ಅದು ಹೆಣ್ಣಿನ ದೇಹವೋ ಅಥವಾ ಗಂಡಿನ ದೇಹವೋ ಎನ್ನುವುದೂ ಸಹ ಮರಣೋತ್ತರ ಪರೀಕ್ಷೆಯಿಂದಲೇ ತಿಳಿದುಕೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+