ಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆ

ಎಲ್ಲಾ ಒಟ್ಟಾರೆ ಸಮೀಕ್ಷೆಯ ಪ್ರಕಾರ, ಒಂದೋ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಇಲ್ಲಾಂದ್ರೆ ಸರಳ ಬಹುಮತಕ್ಕೆ ಸ್ವಲ್ಪ ಹಿನ್ನಡೆಯಾಗಲಿದೆ.

ಮೇ 23ರಂದು ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ಉತ್ತರ ಸಿಗಲಿದೆ. ಇಂಡಿಯಾ ಟುಡೇ ಮತ್ತು ಏಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಉತ್ತರಪ್ರದೇಶದಲ್ಲಿ ಬಿಜೆಪಿ ಸಾಧನೆ ಏನೂ ಕಮ್ಮಿಯಾಗಿರುವುದಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ, ಎಂಬತ್ತು ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟ 73, ಸಮಾಜವಾದಿ ಪಕ್ಷ ಐದು ಮತ್ತು ಕಾಂಗ್ರೆಸ್ ಎರಡು ಸ್ಥಾನವನ್ನು ಗೆದ್ದಿತ್ತು.

India Today - Axis My India exit poll report 2019: What wlll happen in Uttar Pradesh

ಈ ಬಾರಿಯ ಚುನಾವಣೆಯಲ್ಲಿ ಕಳೆದ ಫಲಿತಾಂಶವನ್ನು, ಬಿಜೆಪಿ ಮೈತ್ರಿಕೂಟ ಪುನಾರಾವರ್ತನೆ ಮಾಡುವ ಸಾಧ್ಯತೆ ಕಮ್ಮಿ ಎನ್ನುವ ಸಮೀಕ್ಷಾ ವರದಿಯಿತ್ತು.

ಇಂಡಿಯಾ ಟುಡೇ ಮತ್ತು ಏಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನೇ ಮಾಡಲಿದೆ, ಆದರೆ ಕಳೆದ ಬಾರಿಯಷ್ಟು ಅಲ್ಲ.

ಸಮಾಜವಾದಿ ಪಕ್ಷ - ಬಹುಜನ ಸಮಾಜ ಪಕ್ಷದ ಮೈತ್ರಿ, ಕಳೆದ ಚುನಾವಣೆಗೆ ಹೋಲಿಸಿದರೆ, ಉತ್ತಮ ಸಾಧನೆಯನ್ನೇ ಮಾಡಲಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಸಾಧನೆ ಇಂಪ್ರೂವ್ ಆಗುವ ಸಾಧ್ಯತೆಯಿಲ್ಲ. ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದ ಫಲಿತಾಂಶ ಹೀಗಿರಲಿದೆ:

ಉತ್ತರಪ್ರದೇಶ
ಒಟ್ಟು ಸ್ಥಾನ: 80
ಎನ್ಡಿಎ ಮೈತ್ರಿಕೂಟ : 62-68
ಎಸ್ಪಿ-ಬಿಎಸ್ಪಿ : 10-16
ಕಾಂಗ್ರೆಸ್ : 1-2
ಇತರರು : 0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+