ಟ್ರಾಫಿಕ್ ಪೊಲೀಸರಿಗೆ ಹೆದರಿ ತಂದೆಯೊಬ್ಬ ಮಗನಿಗೆ ಏನು ಮಾಡಿದ್ರು ಗೊತ್ತಾ?

ಆಗ್ರಾ, ಸೆಪ್ಟೆಂಬರ್ 11: ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ, ಜನರು ಏನೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ ಗೊತ್ತಾ.

ಕೆಲವರು ಹೆಲ್ಮೆಟ್ ಮೇಲೆ ದಾಖಲೆಗಳನ್ನು ಅಂಟಿಸಿಕೊಂಡು ತಿರುಗುತ್ತಿದ್ದಾರೆ. ಇನ್ನು ಕೆಲವರು ಹೆಲ್ಮೆಟ್ ಹಾಕಿಕೊಂಡೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.

ಹೀಗೆ ಟ್ರಾಫಿಕ್ ನಿಯಮವನ್ನು ಇಷ್ಟು ವರ್ಷಗಳ ಬಳಿಕ ಈಗ ಜನರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅವರು ತಮಾಷೆಗಾದರೂ ಹೆಲ್ಮೆಟ್ ಧರಿಸಲಿ, ಸೀಟ್ ಬೆಲ್ಟ್ ಹಾಕಲಿ ಆದರೆ ಅದರಿಂದ ಒಳಿತೇ ಆಗುತ್ತಿದೆ.

Due To Heavy Fine Under New Traffic Rules Father locks Son At Home

ತಂದೆಯೊಬ್ಬ ಮಗ ಬೈಕ್ ಚಲಾಯಿಸಿದರೆ ಎಲ್ಲಿ ಹೆಚ್ಚು ದಂಡ ಕಟ್ಟಬೇಕಾಗಬಹುದೋ ಎನ್ನುವ ಆತಂಕದಲ್ಲಿ ಮನೆಯಲ್ಲೇ ಮಗನನ್ನು ಕೂಡಿ ಹಾಕಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ನಿತ್ಯ ಬೈಕ್ ತೆಗದುಕೊಂಡು ಮಗ ಸ್ನೇಹಿತರ ಜೊತೆ ಊರೂರು ಸುತ್ತುತ್ತಿದ್ದ, ಒಂದೊಮ್ಮೆ ಮಗ ಸಿಕ್ಕಿ ಹಾಕಿಕೊಂಡರೆ ಹೆಚ್ಚಿನ ದಂಡ ಪಾವತಿಸಬೇಕಾಗುವುದು ಎಂಬ ಭಯದಲ್ಲಿ ಮನೆಯಲ್ಲಿಯೇ ಕೂಡಿ ಹಾಕಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ತಂದೆಯನ್ನು ಜಲಾಮ್ ಸಿಂಗ್ ಎಂದು ಗುರುತಿಸಲಾಗಿದೆ. ವಡೋದರಾದಲ್ಲಿ ವ್ಯಕ್ತಿಯೊಬ್ಬರು ಪದೇ ಪದೇ ದಾಖಲೆಗಳನ್ನು ತೋರಿಸಬೇಕಾದೀತು ಎಂದು ಹೆಲ್ಮೆಟ್ ಗೆ ದಾಖಲೆಗಳನ್ನು ಅಂಟಿಸಿಕೊಂಡು ಹೋಗಿದ್ದು ವರದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+