ಮೂವರು ಪುತ್ರಿಯರನ್ನು ಸಜೀವ ದಹನ ಮಾಡಿದ ಇವನೆಂಥ ತಂದೆ!

ಲಕ್ನೋ, ನವೆಂಬರ್ 14: ತನ್ನ ಮಕ್ಕಳನ್ನು ತಾನೇ ಕೊಲೆ ಮಾಡಲು ಅದು ಹೇಗಾದರು ಮನಸ್ಸು ಬಂತು ಆ ಪಾಪಿ ತಂದೆಗೆ?, ಕುಡಿದ ಮತ್ತಿನಲ್ಲಿ ಮಕ್ಕಳು ಎನ್ನುವುದು ಕೂಡ ಗೊತ್ತಾಗಲಿಲ್ಲವೇ? ಹಾಗಾದರೆ ಆತ ಅದೆಷ್ಟು ಕ್ರೂರಿಯಾಗಿರಬಹುದು?.

ತವರುಮನೆಗೆ ಹೋಗಿದ್ದ ತಾಯಿ ಬಂದು ನೋಡಿದರೆ ಪುಟ್ಟ ಮಕ್ಕಳೆಲ್ಲಿದ್ದಾರೆ? ಎಲ್ಲರೂ ಸುಟ್ಟು ಕರಕಲಾಗಿದ್ದಾರೆ. ಮಕ್ಕಳಿಗೆ ಜನ್ಮ ನೀಡಿದ್ದು ಆ ಪುಟ್ಟ ಪುಟ್ಟ ಹೆಜ್ಜೆಗಳನ್ನು ನೋಡುತ್ತಾ ತೊದಲು ಮಾತುಗಳನ್ನು ಕೇಳುತ್ತಾ ಬಡತನವಿದ್ದರೂ ಸಂತೋಷಕ್ಕೇನು ಕಡಿಮೆ ಇರಲಿಲ್ಲ, ಆದರೆ ತಾಯಿಗಿರುವ ಭಾವನೆ ತಂದೆಗೆ ಬರದೇ ಹೋಯಿತು.

ಮೂವರು ಹೆಣ್ಣುಮಕ್ಕಳನ್ನು ಹೊಡೆದು ಜೀವಂತವಿರುವಾಗಲೇ ಬೆಂಕಿ ಇಟ್ಟು ತಂದೆಯೇ ಹತ್ಯೆಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಲಿತ್ ಪುರ್ ಜಿಲ್ಲೆಯ ವೀರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Drunken father kills three daughters in UP

ಮೂವರು ಹೆಣ್ಣು ಮಕ್ಕಳು 4 ಮತ್ತು 10 ವರ್ಷದ ಒಳಗಿನವರಾಗಿದ್ದು, ಅವರಿಗೆ ಸುತ್ತಿಗೆಯಿಂದ ಹೊಡೆದು, ತಲೆಯನ್ನು ಜಜ್ಜಿ ಬಳಿಕ ಸುಡುವ ಮೂಲಕ ವಿಕೃತಿ ಮೆರೆದಿದ್ದಾನೆ.ಮಕ್ಕಳ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದ ಬಳಿಕ ಜೀವಂತವಾಗಿದ್ದಂತೆಯೇ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹತ್ತಿಸಿದ್ದಾನೆ.

ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಕೃತ್ಯ ಎಸಗುವಾಗ ಮಕ್ಕಳ ತಂದೆ ಪದ್ಯಪಾನ ಮಾಡಿದ್ದನು ಅಂತ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+