5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಬುಲಂದ್‌ಶಹೆರ್, ಮಾರ್ಚ್ 03: ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಘಟನೆ ಸಂಭವಿಸಿದ್ದು, ಬಾಲಕಿ ಮನೆಯ ಪಕ್ಕದಲ್ಲಿ ಶವವನ್ನು ಸುಟ್ಟು ಹೊಂಡದಲ್ಲಿ ಹೂತಿಡಲಾಗಿತ್ತು.

ಹಿಮಾಚಲ ಪ್ರದೇಶದ ಶಿಮ್ಲಾ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, 22 ವರ್ಷದ ವ್ಯಕ್ತಿ ಹರೇಂದ್ರ ಆರೋಪಿಯಾಗಿದ್ದಾರೆ. ಆತ ದೆಹಲಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.

Body Of Missing UP Girl, 12, Found In Pit, Accused Arrested In Shimla

ಬಾಲಕಿಯನ್ನು ಹತ್ಯೆ ಮಾಡಲಾಗಿತ್ತು, ಲೈಂಗಿಕ ದೌರ್ಜನ್ಯದ ಕುರಿತು ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಹೇಳಿದ್ದಾರೆ.

ಫೆಬ್ರವರಿ 25 ರ ಸಂಜೆ ಬಾಲಕಿ ತನ್ನ ಕುಟುಂಬದೊಂದಿಗೆ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಬಾಯಾರಿಕೆಯಾಗಿದೆ ಎಂದು ನೀರಿಗಾಗಿ ಮನೆಗೆ ಹೋಗುತ್ತೇನೆ ಎಂದು ತಿಳಿಸಿ ಹೋಗಿದ್ದಳು.

ಆದರೆ ಪೋಷಕರು ಮನೆಗೆ ಬಂದು ನೋಡುವಾಗ ಆಕೆ ಮನೆಯಲ್ಲಿರಲಿಲ್ಲ, ಆಕೆಯ ಸಹೋದರಿಯರು ಎಷ್ಟೇ ಕರೆದರೂ ಆಕೆ ಧ್ವನಿ ಎಲ್ಲೂ ಕೇಳಿಸಲಿಲ್ಲ, ಒಂದು ದಿನ ಕಾದು ಕುಟುಂಬದವರು ಬಾಲಕಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರ ಜತೆಗೆ ಕುಟುಂಬದವರು ಸೇರಿ ಹುಡುಕಿದಾಗ ಮನೆಯ ಹತ್ತಿರದಲ್ಲೇ ಹೊಂಡವೊಂದು ಕಾಣಿಸಿತ್ತು, ಬಳಿಕ ಅದನ್ನು ಅಗೆದು ನೋಡಿದಾಗ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+