ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರದ ಎತ್ತರ, ಅಗಲ, ವಿನ್ಯಾಸ ಹಾಗೂ ವಿಶೇಷತೆಗಳು

|
Google Oneindia Kannada News

ಲಕ್ನೌ, ಆಗಸ್ಟ್ 04: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾರ್ಯಕ್ಕೆ ಪ್ರಧಾನಿ ಮೋದಿ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.30 ನಿಮಷಕ್ಕೆ ನಿಗದಿಯಾಗಿರುವ ಶುಭ ಲಗ್ನದಲ್ಲಿ ಮೋದಿ ರಾಮನ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ.

Recommended Video

ಅಯೋಧ್ಯೆಯ ಬಗ್ಗೆ ಮಾತನಾಡಿದ ಬಾಬಾ ರಾಮ್ ದೇವ್ | Oneindia Kannada

ಭಾರಿ ವಿವಾದ ಸೃಷ್ಟಿಸಿದ್ದ ರಾಮ ಮಂದಿರ ಬಹಳ ವಿಶೇಷತೆಗಳಿಂದ ನಿರ್ಮಾಣವಾಗುತ್ತಿದೆ. ರಾಮ ದೇವಾಲಯಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳು ಆಗಿವೆ. ಕೊವಿಡ್ ಭೀತಿಯಲ್ಲೂ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡಲಾಗುತ್ತಿದ್ದು, ಕೆಲವೇ ಕೆಲವು ಅತಿಥಿಗಳು ಮಾತ್ರ ಭೂಮಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

'ರಾಮ ಮಂದಿರ ನಿರ್ಮಿಸಿದ್ರೆ ಸಾಲದು, ರಾಮರಾಜ್ಯ ನಿರ್ಮಿಸುವುದು ನಮ್ಮ ಗುರಿ''ರಾಮ ಮಂದಿರ ನಿರ್ಮಿಸಿದ್ರೆ ಸಾಲದು, ರಾಮರಾಜ್ಯ ನಿರ್ಮಿಸುವುದು ನಮ್ಮ ಗುರಿ'

ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಹಲವು ಪುಣ್ಯಕ್ಷೇತ್ರದಿಂದ ತೀರ್ಥ ಮತ್ತು ಮಣ್ಣು ಸಹ ಕಳುಹಿಸಕೊಡಲಾಗಿದೆ. ಹಾಗಾದ್ರೆ, ರಾಮ ಮಂದಿರ ಎತ್ತರ, ಅಗಲ, ನಿರ್ಮಾಣ ವೆಚ್ಚ ಹಾಗೂ ಇನ್ನಿತರ ವಿಶೇಷತೆಗಳ ಕುರಿತು ಮಾಹಿತಿ ಇಲ್ಲಿದೆ.

Ayodhya Ram Mandir: Design, Construction Cost, Height, Area, Completion Time

- ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ದೇವಾಲಯವು 161 ಅಡಿ ಎತ್ತರ ಇರಲಿದೆ.

- 1988ರಲ್ಲಿ ಸಿದ್ಧಪಡಿಸಿದ ಮೂಲ ವಿನ್ಯಾಸದಲ್ಲಿ ರಾಮ ಮಂದಿರದ ಎತ್ತರ 141 ಅಡಿ ಎಂದು ಉಲ್ಲೇಖಿಸಲಾಗಿತ್ತು.

- ರಾಮ ಮಂದಿರ ವಿನ್ಯಾಸ 30 ವರ್ಷದ ಹಿಂದೆ 1988ರಲ್ಲಿ ಸಿದ್ದಪಡಿಸಲಾಗಿತ್ತು.

- ಪರಿಷ್ಕೃತ ವಿನ್ಯಾಸದ ಪ್ರಕಾರ ದೇವಾಲಯದ ಎತ್ತರವನ್ನು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ.

- ಹಿಂದಿನ ವಿನ್ಯಾಸದ ಆಧಾರದ ಮೇಲೆ ಕೆತ್ತಿದ ಎಲ್ಲಾ ಕಂಬಗಳು ಮತ್ತು ಕಲ್ಲುಗಳನ್ನು ಇನ್ನೂ ಬಳಸಲಾಗುವುದು. ಮತ್ತು ಎರಡು ಮಂಟಪಗಳನ್ನು ಸೇರಿಸಲಾಗಿದೆ.

- ರಾಮ ಮಂದಿರದ ಸ್ತಂಭಗಳ ಸಂಖ್ಯೆ 212 ರಿಂದ 360ಕ್ಕೆ ಏರಿದೆ.

- ದೇವಾಲಯ ಒಟ್ಟು 3 ಅಂತಸ್ತು (ಮಹಡಿ) ಹೊಂದಿರುತ್ತದೆ.

- ಮೆಟ್ಟಿಲುಗಳ ಅಗಲ 16 ಅಡಿ ಇರುತ್ತದೆ.

- ಶಿಲ್ಪಾ ಶಾಸ್ತ್ರ ವಿವರಣೆಯನ್ನು ಗಮನದಲ್ಲಿಟ್ಟುಕೊಂಡು ನಗರ ಶೈಲಿಯ ದೇವಾಲಯವನ್ನು ವಿನ್ಯಾಸಗೊಳಿಸಲಾಗಿದೆ.

- 4 ಸಣ್ಣ ದೇವಾಲಯಗಳು ಮುಖ್ಯ ರಚನೆಯನ್ನು ಸುತ್ತುವರೆಯಲಿದೆ.

- ಸುಮಾರು 30 ವರ್ಷಗಳಿಂದ ಸಂಗ್ರಹಿಸಿದ 2 ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳಿಂದ ದೇವಾಲಯದ ಅಡಿಪಾಯ ನಿರ್ಮಿಸಲಾಗುತ್ತದೆ.

- ರಾಜಸ್ಥಾನದ ಬನ್ಷಿ ಪರ್ವತಗಳಿಂದ ಕಲ್ಲುಗಳನ್ನು ಬಳಸಲಾಗುವುದು.

- ದೇವಾಲಯದ ನಿರ್ಮಾಣಕ್ಕೆ 3.5 ವರ್ಷಗಳು ಬೇಕಾಗುತ್ತದೆ.

- ರಾಮ ಮಂದಿರ ನಿರ್ಮಾಣದ ಅಂದಾಜು ವೆಚ್ಚ 300 ಕೋಟಿ ರೂ.

- ದೇವಾಲಯದ ಸುತ್ತಮುತ್ತಲಿನ 20 ಎಕರೆ ಪ್ರದೇಶದ ಅಭಿವೃದ್ಧಿಗೆ 1,000 ಕೋಟಿ ರೂ ಅಗತ್ಯ.

- ದೇವಾಲಯದ ಒಳ ಗರ್ಭಗೃಹದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

- ಸೀತಾ ರಸೋಯಿ, ರಂಗ್‌ಮಂಡಪಂ ಮತ್ತು ಇತರ ಸ್ಥಳಗಳಲ್ಲೂ ಬದಲಾವಣೆ ಆಗಿಲ್ಲ.

English summary
Ayodhya Ram Mandir: Design, Construction cost, height, area, completion time. check out full details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X