ಉತ್ತರಪ್ರದೇಶದಲ್ಲಿ ಖಲಿಸ್ತಾನ ಪರ ಉಗ್ರನ ಬಂಧನ

ಲಕ್ನೋ,ಫೆಬ್ರವರಿ 09: ಉತ್ತರ ಪ್ರದೇಶದಲ್ಲಿ ಖಲಿಸ್ತಾನ ಪರ ಉಗ್ರನನ್ನು ಬಂಧಿಸಲಾಗಿದೆ.

ಲಕ್ನೋನ ವಿಕಾಸ್ ನಗರ ಪ್ರದೇಶದ ಜಗ್ದೇವ್ ಸಿಂಗ್ ಅಲಿಯಾಸ್ ಜಗ್ಗನನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಜಗ್ದೇವ್ ಸಿಂಗ್‌ಗೆ ಪರಂಜೀತ್ ಮತ್ತು ಮುಲ್ತಾನಿ ಸಿಂಗ್ ಹಣ ನೀಡಿದ್ದರು, ಇದರಿಂದ ಜಗ್ದೇವ್ ಮತ್ತು ಆತನ ಸ್ನೇಹಿತ ಜಗ್‌ರೂಪ್ ಮಧ್ಯಪ್ರದೇಶದಿಂದ ಗನ್ ಮತ್ತು ಸಿಡಿಮದ್ದನ್ನು ಖರೀದಿಸಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ.

ಪಂಜಾಬ್ ಪೊಲೀಸರು ಭಾನುವಾರ ಜಗ್‌ರೂಪ್ ನನ್ನು ಬಂಧಿಸಿದ್ದರು. ಸದ್ಯ ಪರಂಜೀತ್ ಸಿಂಗ್ ಬ್ರಿಟನ್‌ನಲ್ಲಿದ್ದಾನೆ, ಮುಲ್ತಾನಿ ಸಿಂಗ್ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾನೆ. ಇವರಿಬ್ಬರಿಗೂ ದೇಶ ವಿರೋಧಿ ಕೆಲಸದಲ್ಲಿ ಭಾಗಿಯಾಗಿದ್ದು, ಪಂಜಾಬ್‌ನಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದಾರೆ,ಅಷ್ಟೇ ಅಲ್ಲದೆ ರಾಜ್ಯದಲ್ಲಿ ಧಾರ್ಮಿಕ ಅಸಹಿಷ್ಣುತೆ ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Accomplice of Pro-Khalistan Terrorists Arrested In UP

ಖಲಿಸ್ತಾನ ಪರ ಭಯೋತ್ಪಾದಕರಾದ ಪರಂಜೀತ್ ಸಿಂಗ್ ಪಮ್ಮಾ ಮತ್ತು ಮುಲ್ತಾನಿ ಸಿಂಗ್ ಅವರೊಂದಿಗೆ ಜಗ್ದೇವ್ ಸಂಬಂಧ ಹೊಂದಿದ್ದಾನೆ ಎಂಬ ಆರೋಪದಲ್ಲಿ ಜಗ್ದೇವ್‌ನನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+