ಆಸ್ಪತ್ರೆಯ ಎದುರು ಫುಟ್‌ಪಾತ್‌ನಲ್ಲಿ ಕುಳಿತ 69 ಕೊರೊನಾ ಸೋಂಕಿತರು

ಇಟವಾ, ಏಪ್ರಿಲ್ 25: ಕೊವಿಡ್ 19 ರೋಗಿಗಳು ಆಸ್ಪತ್ರೆ ಗೇಟ್ ಎದುರಿರುವ ಫುಟ್‌ಪಾತ್‌ನಲ್ಲಿ ಕುಳಿತುಕೊಂಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲಜಿನ ಗೇಟ್ ಮುಚ್ಚಲಾಗಿತ್ತು. 69 ಕೊರೊನಾ ಸೋಂಕಿತರು ಗೇಟ್ ಬಳಿ ಇರುವ ಫುಟ್‌ಪಾತ್‌ ಮೇಲೆ ಕುಳಿತಿದ್ದಾರೆ.

ರೋಗಿಗಳಿಗೆ ಪ್ರತ್ಯೇಕ ವಾರ್ಡ್ ನೀಡಲು ಆಸ್ಪತ್ರೆ ನಿರಾಕರಿಸಿದೆ. ಆಗ್ರಾದ ಸಫಾಯಿ ಆಸ್ಪತ್ರೆಯಿಂದ ಇಲ್ಲಿಗೆ ರೋಗಿಗಳನ್ನು ಕರೆತರಲಾಗಿತ್ತು. 116 ಕಿ.ಮೀ ದೂರದಿಂದ ಬಸ್‌ ಮೂಲಕ ರೋಗಿಗಳು ಬಂದಿದ್ದರು.

69 COVID 19 Patients Wait On Footpath Outside UP Hospital

ರೋಗಿಗಳು ಕೇವಲ ಮಾಸ್ಕ್‌ಗಳನ್ನು ಮಾತ್ರ ಧರಿಸಿದ್ದಾರೆ. ಸ್ವಲ್ಪ ದೂರದಲ್ಲಿ ಪೊಲೀಸರು ಕುಳಿತುಕೊಂಡಿದ್ದಾರೆ.ಈ ಕೊರೊನಾ ರೋಗಿಗಳನ್ನು ಪಶ್ಚಿಮ ಉತ್ತರ ಪ್ರದೇಶದ ನಗರದಿಂದ ಇಲ್ಲಿಗೆ ವರ್ಗಾಯಿಸಲಾಗಿದೆ.

ಆಗ್ರಾದಿಂದ 116 ಕಿಮೀ ದೂರದಲ್ಲಿರುವ ಈ ಆಸ್ಪತ್ರೆಗೆ ಸರ್ಕಾರಿ ಬಸ್ ನಲ್ಲಿ ರೋಗಿಗಳು ಆಗಮಿಸಿದ್ದು, ರಸ್ತೆಯಲ್ಲಿ ಕೊರೊನಾ ಸೋಂಕಿತರು ಕಾದು ಕುಳಿತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ರೋಗಿಗಳು ಕೇವಲ ಮಾಸ್ಕ್ ಮಾತ್ರ ಧರಿಸಿದ್ದು ಬೇರೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.

ಬುಧವಾರ ಅವರನ್ನು ಕರೆ ತರಲು ತಿಳಿಸಿದ್ದೆವು ಆದರೆ ಬಂದಿರಲ್ಲ, ಗುರುವಾರ ಏಕಾಏಕಿ ಬಂದಿದ್ದಾರೆ, ಅವರು ಬರುವ ಅರ್ಧ ಗಂಟೆ ಮೊದಲು ನಮಗೆ ಈ ವಿಚಾರ ತಿಳಿದಿದೆ. ಏಕಾಏಕಿ 69 ಮಂದಿಗೆ ಹಾಸಿಗೆಗಳು, ವಾರ್ಡ್‌ಗಳನ್ನು ಒದಗಿಸುವುದು ಕಷ್ಟವಾಗಿತ್ತು ಎಂದು ರಾಜ್‌ಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+