ಜಿ7 ಶೃಂಗಸಭೆ: ಕೋವಿಡ್ 19 ಮೂಲದ ಆಧಾರ ಸಹಿತ ತನಿಖೆಗೆ ಒತ್ತಾಯ

ಲಂಡನ್, ಜೂನ್ 14: ಜಿ-7 ಶೃಂಗಸಭೆಯಲ್ಲಿ ಕೊರೊನಾ ಸೋಂಕಿನ ಮೂಲದ ಪತ್ತೆ ಬಗ್ಗೆಯೂ ಮಾತುಕತೆ ನಡೆದಿದೆ.

ಕೊರೊನಾ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೊನಾ ಮೂಲದ ಪತ್ತೆಗೂ ಒತ್ತಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೊರೊನಾ ಮೂಲ ಪತ್ತೆಗೆ ಈಗಾಗಲೇ ಬ್ರಿಟನ್ ಹಾಗೂ ಅಮೆರಿಕ ಅನುಮತಿ ನೀಡಾಗಿದೆ. ಶೃಂಗಸಭೆಯ ಬಳಿಕ ಜಂಟಿ ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಅಮೆರಿಕ ಅಧ್ಯಕ್ಷ ಜೋ ಬೈಡನ್, ಸಾಂಕ್ರಾಮಿಕದಿಂದ ಹೊರಬರಲು ಮನುಷ್ಯರ ಪರಿಸ್ಥಿತಿಯನ್ನು ಸುಧಾರಣೆಯನ್ನು ಬುಡಮೇಲಾಗಿದೆ. ಭವಿಷ್ಯಕ್ಕೆ ಸಿದ್ಧತೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂಬ ಆರೋಪದ ತಜ್ಞರ ಆಯಾಮದಿಂದಲೂ ತನಿಖೆ ನಡೆಯಬೇಕೆಂದು ಜಿ-7 ನಾಯಕರು ಹೇಳಿದ್ದಾರೆ.

G7 Summit

ಸಮಯೋಚಿತ, ಪಾರದರ್ಶಕ, ತಜ್ಞರ ನೇತೃತ್ವದ ಮತ್ತು ವಿಜ್ಞಾನ ಆಧಾರಿತ, ಡಬ್ಲ್ಯುಹೆಚ್ಒ ಮೇಲ್ವಿಚಾರಣೆಯಲ್ಲಿ ಕೋವಿಡ್-19 ಸೋಂಕು ಮೂಲದ ಪತ್ತೆ ಮಾಡಬೇಕಿದೆ ಎಂದು ಜಿ-7 ನಾಯಕರು ಕರೆ ನೀಡಿದ್ದಾರೆ.

ಈ ಪೈಕಿ ಕೊರೊನ ಮೂಲವನ್ನು ಪತ್ತೆ ಮಾಡುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಕೊರೊನಾ ವುಹಾನ್ ನಿಂದ ಮೊದಲು ವರದಿಯಾಗಿ 1.5 ವರ್ಷಗಳೇ ಕಳೆದರೂ ಸಹ ಕೋವಿಡ್-19 ಮೂಲ ರಹಸ್ಯಾವಗಿಯೇ ಉಳಿದಿದೆ.

2005 ರ ಆರೋಗ್ಯ ನಿಯಮಗಳ ಪಾಲನೆಯೆಡೆಗೆ ಇರುವ ನಮ್ಮ ಬದ್ಧತೆ, ನಮ್ಮ ಉತ್ತರದಾಯಿತ್ವದ ಸಾಮರ್ಥ್ಯ, ಪಾರದರ್ಶಕತೆ ಹೆಚ್ಚಿಸಿಕೊಳ್ಳುವುದಕ್ಕೆ ಜಿ-7 ನಾಯಕರು ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+