Get Updates
Get notified of breaking news, exclusive insights, and must-see stories!

ಪಶ್ಚಿಮ ಬಂಗಾಳ: ಬಿಜೆಪಿ ಯುವ ಮೋರ್ಚಾ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ, ಅಕ್ಟೋಬರ್ 18: ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಪಶ್ಚಿಮಬಂಗಾಳದ ಉತ್ತರ ದಿನಾಜ್​ಪುರ ಜಿಲ್ಲೆಯ ಇಟಾಹಾರ್​​ನ ಬಿಜೆಪಿ ಯುವ ನಾಯಕನ ಹತ್ಯೆಯಾಗಿದೆ. ಮಿಥುನ್​ ಘೋಷ್​ ಮೃತ ಯುವ ನಾಯಕ.

ಈ ಘಟನೆ ಭಾನುವಾರ ರಾತ್ರಿ 11 ಗಂಟೆ ಹೊತ್ತಿಗೆ ನಡೆದಿದೆ. ರಾಜ್​ಗ್ರಾಮ ಹಳ್ಳಿಯಲ್ಲಿರುವ ತಮ್ಮ ಮನೆ ಎದುರು ಮಿಥುನ್ ಘೋಷ್​​ ನಿಂತಿದ್ದರು. ಮೋಟಾರ್​ ಬೈಕ್​ನಲ್ಲಿ ಅಲ್ಲಗೆ ಬಂದ ಕೆಲವರು ಮಿಥುನ್ ಹೊಟ್ಟೆಗೆ ಗುಂಡು ಹೊಡೆದಿದ್ದಾರೆ. ತುಂಬ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮಿಥುನ್​ ಘೋಷ್​​ರನ್ನು ಕೂಡಲೇ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

West Bengal: BJP Youth Wing Leader Shot Dead

ರಾಜ್​ಗ್ರಾಮ ಹಳ್ಳಿಯಲ್ಲಿರುವ ಇವರ ಮನೆಯ ಮುಂದೆಯೇ ದುಷ್ಕರ್ಮಿಗಳು ಮಿಥುನ್​ಗೆ ಗುಂಡಿಕ್ಕಿ ಕೊಂದಿದ್ದಾರೆ. ಈ ಕೃತ್ಯ ಟಿಎಂಸಿ ಕಾರ್ಯಕರ್ತರದ್ದೇ ಆಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ಮಿಥುನ್​ ಘೋಷ್ ಅವರು ಬಿಜೆಪಿ ಯುವ ಮೋರ್ಚಾದ ಉತ್ತರ ದಿನಾಜ್​​ಪುರ ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಇಟಾಹಾರ್​ನಲ್ಲಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಇದರಲ್ಲಿ ಖಂಡಿತ ಟಿಎಂಸಿ ಕೈವಾಡವಿದೆ. ಅವರು ತಮ್ಮ ಯಜಮಾನನ ಅಣತಿಗೆ ಅನುಸಾರವಾಗಿ ಇಂಥ ಕೃತ್ಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಹಾಗೇ, ಮಿಥುನ್​ ಘೋಷ್ ಸದಾ ನೆನಪಿರುತ್ತಾರೆ ಎಂದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಇಟಾಹಾರ್​ ಶಾಸಕ ಮೊಹಾರಾಫ್​ ಹುಸ್ಸೇನ್​, ನಮ್ಮ ತೃಣಮೂಲ ಕಾಂಗ್ರೆಸ್​ಗೂ, ಮಿಥುನ್​ ಘೋಷ್​​ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಬೇರೆ ಯಾರಾದರೂ, ಇನ್ಯಾವುದೇ ದ್ವೇಷದ ಕಾರಣಕ್ಕೆ ಈ ಹತ್ಯೆ ಮಾಡಿಬಹುದು. ಪೊಲೀಸರ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಈ ದುರ್ಘಟನೆ ಬೆನ್ನಲ್ಲೇ ಬಿಜೆಪಿ ಟಿಎಂಸಿ ವಿರುದ್ಧ ಆರೋಪ ಮಾಡಿದೆ. ಆದರೆ ಟಿಎಂಸಿ ತಾವೇನೂ ಮಾಡಿಲ್ಲ. ಬಿಜೆಪಿ ವೃಥಾ ಆರೋಪ ಮಾಡುತ್ತಿದೆ ಎಂದು ಹೇಳಿದೆ. ಇನ್ನು ಮಿಥುನ್​ ಘೋಷ್​ಗೆ ಈಗಾಗಲೇ ಹಲವು ಬಾರಿ ಜೀವ ಬೆದರಿಕೆ ಹಾಕಲಾಗಿತ್ತು.

ಕೆಲವು ಬಾರಿ ಅವರ ಮೇಲೆ ಹಲ್ಲೆ ಪ್ರಯತ್ನವೂ ಆಗಿತ್ತು. ಪೊಲೀಸರಿಗೆ ಈ ಬಗ್ಗೆ ದೂರು ಕೂಡ ನೀಡಿದ್ದೆವು. ಆದರೆ ಪೊಲಿಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಉತ್ತರ ದಿನಾಜ್​​ಪುರ ಬಿಜೆಪಿ ಅಧ್ಯಕ್ಷ ವಸುದೇವ್​ ಸರ್ಕಾರ್​ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+