Get Updates
Get notified of breaking news, exclusive insights, and must-see stories!

ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ: ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ

ಉತ್ತರ ಕನ್ನಡ, ಜನವರಿ 08: ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ವಿತರಿಸಲಾಗುವ ಯುಡಿಐಡಿ ಕಾರ್ಡ್‌ಗಳ ವಿತರಣೆಯಲ್ಲಿ ಶೇ.97.23 ಪ್ರಗತಿ ಸಾಧಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಡಿಸೆಂಬರ್‌ವರೆಗೆ 25,766 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 5,704 ಅರ್ಜಿಗಳು ಮರು ಅರ್ಜಿ ಸಲ್ಲಿಕೆ ಮತ್ತಿತರ ಕಾರಣಗಳಿಂದ ತಿರಸ್ಕೃತಗೊಂಡಿದ್ದವು. ಬಾಕಿ ಉಳಿದ 20,062 ಅರ್ಜಿಗಳಲ್ಲಿ 19,507 ಅರ್ಜಿಗಳನ್ನು ಪರಿಶೀಲಿಸಿ ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಲಾಗಿದ್ದು, 17,581 ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಲಾಗಿದೆ. ಹಾಗೂ 1,926 ಕಾರ್ಡ್‌ಗಳು ಮುದ್ರಣಕ್ಕೆ ನೀಡಲಾಗಿದೆ. ಬಾಕಿ ಉಳಿದ 555 ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಮೂಲಕ ಶೇ.100 ಸಾಧನೆ ಮಾಡುವ ಗುರಿ ಹೊಂದಲಾಗಿದೆ.

Uttara Kannada District Got Second In The State In Distribution Of UDID Cards

ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜುನಲ್ಲಿ ಸ್ವೀಕಾರವಾದ ಅರ್ಹ 11,410 ಅರ್ಜಿಗಳಲ್ಲಿ 11,145 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.97.68, ಅಂಕೋಲ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 413 ಅರ್ಜಿಗಳಲ್ಲಿ 407 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.98.55, ಕುಮುಟಾ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 474 ಅರ್ಜಿಗಳಲ್ಲಿ 457 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.96.41, ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 866 ಅರ್ಜಿಗಳಲ್ಲಿ 831 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.95.96,

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 951 ಅರ್ಜಿಗಳಲ್ಲಿ 905 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.95.16, ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,926 ಅರ್ಜಿಗಳಲ್ಲಿ 1,920 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.99.69, ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 542 ಅರ್ಜಿಗಳಲ್ಲಿ 515 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.95.02, ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 218 ಅರ್ಜಿಗಳಲ್ಲಿ 175 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.80.28,

ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,048 ಅರ್ಜಿಗಳಲ್ಲಿ 1,003 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.95.71, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,653 ಅರ್ಜಿಗಳಲ್ಲಿ 1,598 ಯುಡಿಐಡಿ ಕಾರ್ಡ್‌ಗಳನ್ನು ಸೃಜಿಸಿದ್ದು ಶೇ.96.67, ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 561 ಅರ್ಜಿಗಳಲ್ಲಿ 551 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.98.22 ಪ್ರಗತಿಯಾಗಿದ್ದು ಒಟ್ಟು ಜಿಲ್ಲೆಯಲ್ಲಿ ಶೇ.97.23 ಸಾಧನೆ ಆಗಿದೆ.

ಈ ಯುಡಿಐಡಿ ಗುರುತಿನ ಚೀಟಿ ಯೋಜನೆಯು ವಿಶೇಷ ಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಶೇಷ ಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ.

ಈ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ದೇಶದ ವಿಶೇಷಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುವುದಲ್ಲದೆ ಈ ಯೋಜನೆಯ ಉದ್ದೇಶವು ಸರ್ಕಾರದ ಸೌಲಭ್ಯಗಳು ಅವರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಮಾಡುವುದಾಗಿದೆ. ವಿಕಲಚೇತನರಿಗೆ ಸಂಬಂಧಿಸಿದಂತೆ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡುವುದರಲ್ಲಿ ಕೂಡಾ ಇದು ಸಹಕಾರಿಯಾಗಿದೆ.

ವಿಶೇಷಚೇತನರ ಈ ವಿಶಿಷ್ಠ ಗುರುತಿನ ಚೀಟಿಯು ಅವರ ಜೀವನದಲ್ಲಿ ಆಧಾರ್ ಕಾರ್ಡ್‌ಷ್ಟೇ ಪ್ರಮುಖವಾದ ದಾಖಲೆಯಾಗಿದೆ. ವಿಶೇಷಚೇತನ ವ್ಯಕ್ತಿಯ ವಿಕಲತೆಗೆ ಸಂಬಂಧಿಸಿದಂತೆ ಮುಖ್ಯ ದಾಖಲೆಯನ್ನು ಇದು ಹೊಂದಿರುವುದರಿಂದ ದೇಶವ್ಯಾಪಿ ಮಾನ್ಯತೆ ಇದೆ. ಈ UDID ಕಾರ್ಡ್‌ಅನ್ನು ಅಂಗವೈಕಲ್ಯತೆಯ ಪುರಾವೆಯಾಗಿ ಭಾರತದಾದ್ಯಂತ ಪರಿಗಣಿಸಲಾಗುತ್ತದೆ.

ಈ ಹಿಂದೆ ರಾಜ್ಯದಲ್ಲಿ 15ನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸುವ ಮೂಲಕ ವಿಶೇಷ ಚೇತನರನ್ನು ಪರೀಕ್ಷಿಸಿ ಹಾಗೂ ಅವರ ಅಂಗವಿಕಲತೆಯ ಪ್ರಮಾಣವನ್ನು ಗುರುತಿಸಿ, ಸಮೀಪದ ತಾಲೂಕು ಆಸ್ಪತ್ರೆಗಳಲ್ಲಿ ಯುಡಿಐಡಿ ಕಾರ್ಡ್‌ಗಳ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದ ನಂತರ ನೋಂದಣಿಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸುವುದರ ಮೂಲಕ ಪ್ರಸ್ತತ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಪರಸ್ಪರ ಸಮನ್ವಯದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಅತ್ಯಂತ ಶೀಘ್ರದಲ್ಲಿ ಶೇ.100 ಸಾಧನೆಯೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವತ್ತ ಜಿಲ್ಲೆಯು ದಾಪುಗಾಲಿಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+