ವೈರಲ್ ವಿಡಿಯೋ: ರೂಪಾಲಿ ನಾಯ್ಕ ಮೈ ಮೇಲೆ ದೇವರು ಬಂದಿತ್ತಂತೆ ?

ಕಾರವಾರ, ಮೇ 16 : ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರ ಮೈಮೇಲೆ ದೇವರು ಬಂದ ಘಟನೆ ಮಂಗಳವಾರ ಸಂಜೆ ಅಂಕೋಲಾದಲ್ಲಿ ನಡೆದಿದೆ.

ಕಾರವಾರ- ಅಂಕೋಲಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾಲಿ 59,776 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕುಮಟಾದ ಮತ ಎಣಿಕೆ ಕೇಂದ್ರದಿಂದ ಇದೇ ಸಂತೋಷದಲ್ಲಿ ಅವರು ಕಾರವಾರಕ್ಕೆ ಬರುವ ವೇಳೆ ಅಂಕೋಲಾದ ಶಾಂತಾದುರ್ಗಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಅವರ ಮೈಮೇಲೆ ದೇವರು ಬಂದಂತೆ ಭಾವೋದ್ವೇಗದಿಂದ "ಅಮ್ಮ..... ಅಮ್ಮ.... ಅಮ್ಮ...." ಎಂದು ಕೂಗಿಕೊಂಡಿದ್ದಾರೆ. ಇದಾದ ನಂತರ ಕೆಲ ನಿಮಿಷಗಳ ಬಳಿಕ ಸಮಾಧಾನಗೊಂಡರು. ಸಮಾಧಾನವಾದ ಬಳಿಕ ಅವರನ್ನು ಕಾರ್ಯಕರ್ತರು ಪೋಷಿಸಿದ್ದಾರೆ.

Roopali Naik from Karwar-Ankola constituency Drowned in devotion.

ಆದರೆ ಅವರ ಕಾರ್ಯಕರ್ತರು "ದೇವಸ್ಥಾನದಲ್ಲಿ ಏನೂ ‌ನಡೆದಿಲ್ಲ. ರೂಪಾಲಿ ನಾಯ್ಕ ಅವರು ದೇವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸ್ವಲ್ಪ ಭಕ್ತಿ ಪರಾಕಾಷ್ಠೆಯಿಂದ ಹಾಗೆ ಕೂಗಿದ್ದಾರಷ್ಟೆ. ಜತೆಗೆ ದೇವಸ್ಥಾನದಲ್ಲಿ ನೂಕುನುಗ್ಗಲು ಇದ್ದಿದ್ದರಿಂದ ಅವರು ಸುಸ್ತಾಗಿದ್ದರು" ಎಂದು ಸಮಾಜಾಯಿಷಿ ನೀಡಿದ್ದಾರೆ.

ಆದರೆ, ಅವರು ಭಾವೋದ್ವೇಗದಿಂದ ಕೂಗಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏನೇ ಆಗಲಿ, ಮೊನ್ನೆಯಷ್ಟೇ ಗೆಲುವು ಸಾಧಿಸಿ, ಎಲ್ಲೆಡೆ ಹೆಸರು ಗಳಿಸಿಕೊಳ್ಳುತ್ತಿದ್ದ ರೂಪಾಲಿ ನಾಯ್ಕ ಅವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಗೆ ಆಹಾರವಾಗಿದ್ದಂತು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+