ರಾತ್ರೋರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ

ಕಾರವಾರ, ಮೇ 2 : ಶಿರಸಿ ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿನ್ನೆ (ಮೇ 01) ರಾತ್ರಿ ದಿಢೀರ್ ದಾಳಿ‌ ನಡೆಸಿದ್ದಾರೆ.

ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆದಿದ್ದು, ಆದಾಯ ತೆರಿಗೆಯ ಹುಬ್ಬಳ್ಳಿ ವಿಭಾಗದ 5 ಅಧಿಕಾರಿಗಳಿರುವ ತಂಡ ತಡರಾತ್ರಿಯವರೆಗೂ ದಾಖಲೆಗಳನ್ನು ಪರಿಶೀಲಿಸಿದೆ. ಈವರೆಗೂ ಪರಿಶೀಲನೆ ಮುಂದುವರಿದಿದೆ.

ಭೀಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಆಪ್ತರಾಗಿದ್ದು, ಉದ್ಯಮಿ ಕೂಡ ಆಗಿದ್ದಾರೆ‌. ಮೂರು ಬಾರ್ ಹಾಗೂ ರೆಸ್ಟೋರೆಂಟ್, ಫಾರ್ಮ್ ಹೌಸ್ ಹೊಂದಿದ್ದಾರೆ.

Income Tax department officials raided house of Bhimanna Naik

ಕಾಂಗ್ರೆಸ್ ಅಭ್ಯರ್ಥಿಯಾಗಿ ಏ.23ರಂದು ನಾಮಪತ್ರ ಸಲ್ಲಿಸಿದ್ದರು. ಅಂದು ಅದರೊಟ್ಟಿಗೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಭೀಮಣ್ಣ, ತನಿಖೆ ಹಂತದ ಐದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಏಳನೇ ತರಗತಿ ಓದಿರುವ ಭೀಮಣ್ಣನ ಬಳಿ ನಾಮಪತ್ರ ಸಲ್ಲಿಸುವ ವೇಳೆ ಕೈಯಲ್ಲಿ ಸ್ವಂತ ಹಣ ರೂ 5.08 ಲಕ್ಷ, ಪತ್ನಿ ಗೀತಾಳ ಬಳಿ 1.98ಲಕ್ಷ, ಮಗ ಅಶ್ವಿನ್ ರ ಬಳಿ 81 ಸಾವಿರ ಇತ್ತು.
ಬ್ಯಾಂಕ್ ಖಾತೆಯಲ್ಲಿ ಭೀಮಣ್ಣ ಹೆಸರಿನಲ್ಲಿ 8.83 ಲಕ್ಷ, ಗೀತಾಳ ಹೆಸರಿನಲ್ಲಿ 80 ಸಾವಿರ ಹಾಗೂ ಅಶ್ವಿನ್ ಹೆಸರಿನಲ್ಲಿ 81 ಸಾವಿರ ಇದೆ.

ಇನ್ನು ಭೀಮಣ್ಣ ಸ್ವಂತ ವಿಮೆ ಹೊಂದಿಲ್ಲ. ಗೀತಾ ಹೆಸರಿನಲ್ಲಿ 2.25 ಲಕ್ಷ, ಅಶ್ವಿನ್ ಹೆಸರಿನಲ್ಲಿ 10.50 ಲಕ್ಷ ವಿಮೆ ಇದೆ. ಇನ್ನು ಸ್ವಂತ 10 ಲಕ್ಷ ರೂಪಾಯಿ ಷೇರನ್ನು ಭೀಮಣ್ಣ ಹೊಂದಿದ್ದು, ಗೀತಾ ಹೆಸರಿನಲ್ಲಿ 80 ಸಾವಿರ ಹಾಗೂ 81 ಸಾವಿರದ ಷೇರು ಇದೆ.

Income Tax department officials raided house of Bhimanna Naik

ಭೀಮಣ್ಣ ಅವರ ಬಳಿ ಟೊಯೊಟಾ ಇನ್ನೋವಾ, ಟೊಯೋಟಾ ಫಾರ್ಚುನರ್ ಸ್ವಂತ ವಾಹನ ಇದೆ. ಗೀತಾ ಹೆಸರಿನಲ್ಲಿ ಮಹೇಂದ್ರ ಪಿಕಪ್, ಟ್ರ್ಯಾಕ್ಟರ್, ಅಶ್ವಿನ್ ಬಳಿ ಬಿಎಂಡಬ್ಲ್ಯು ವ್ಯಾಕ್ಸ್ ವೇಗನ್ ಪೋಲೊ, ಮಹೇಂದ್ರ ಪಿಕಪ್ ಬೊಲೆರೊ ಇದೆ.

ಆಭರಣಕ್ಕೆ ಸಂಬಂಧಿಸಿದಂತೆ ಸ್ವಂತ 240 ಗ್ರಾಂ ಬಂಗಾರ, ಗೀತಾ ಬಳಿ 950 ಗ್ರಾಂ ಬಂಗಾರ, 2500 ಗ್ರಾ ಬೆಳ್ಳಿ, ಅಶ್ವಿನ್ ಬಳಿ 240 ಗ್ರಾಂ ಬಂಗಾರ ಇದೆ. ಒಟ್ಟು ಚರಾಸ್ತಿ ಮೌಲ್ಯ ರೂ 5.76 ಕೋಟಿ, ಗೀತಾ ಹೆಸರಿನಲ್ಲಿ 86.68 ಲಕ್ಷ, ಜಂಟಿಯಾಗಿ 1.24 ಕೋಟಿ ಆಸ್ತಿ ಇದೆ. ಒಟ್ಟು ಸ್ಥಿರಾಸ್ತಿ ಮೌಲ್ಯ ಸ್ವಂತ 5.50 ಕೋಟಿ, ಗೀತಾ ಹೆಸರಿನಲ್ಲಿ 16.56 ಕೋಟಿ, ಅಶ್ವಿನ್ ಹೆಸರಿನಲ್ಲಿ 1.25 ಕೋಟಿ ಇದೆ.

Income Tax department officials raided house of Bhimanna Naik

ಭೀಮ ನಾಯ್ಕ ಹೆಸರಿನಲ್ಲಿ 10.79 ಕೋಟಿ, ಗೀತಾ ಹೆಸರಿನಲ್ಲಿ 11.43 ಕೋಟಿ, ಅಶ್ವಿನ್ ಹೆಸರಿನಲ್ಲಿ 83.27 ಲಕ್ಷ ಸಾಲ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+