ಗೌಡಳ್ಳಿಯಲ್ಲಿ ಕೊಳೆತ ಸ್ಥಿತಿಯಲ್ಲಿ ತಾಯಿ, ಮಗಳ ಶವ ಪತ್ತೆ
ಕಾರವಾರ, ಆಗಸ್ಟ್.02: ಶಿರಸಿ ತಾಲೂಕಿನ ಗೌಡಳ್ಳಿ ಬಳಿಯ ವರ್ಣ ಪ್ರೊಡಕ್ಷನ್ ಹತ್ತಿರದ ಶೆಡ್ ಒಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ತಾಯಿ ಹಾಗೂ ಮಗಳ ಶವವು ಬುಧವಾರ ಪತ್ತೆಯಾಗಿದೆ.
ಅಂದಾಜು 30 ವರ್ಷದ ಮಹಿಳೆ ಹಾಗೂ ಸುಮಾರು 4 ವರ್ಷದ ಬಾಲಕಿಯ ಶವ ಇದಾಗಿದೆ.
ಇಬ್ಬರ ದೇಹವೂ ಸಂಪೂರ್ಣ ಕೊಳೆತ ಕಾರಣ ಗುರುತು ಪತ್ತೆಯಾಗಿಲ್ಲ. ಸಾವಿಗೆ ಕಾರಣ ಏನೆಂಬುದು ಈವರೆಗೂ ತಿಳಿದು ಬಂದಿಲ್ಲ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರಬಹುದೇ? ಎಂಬ ಅನುಮಾನ ವ್ಯಕ್ತವಾಗಿದೆ.

ಶವವನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಠಾಣೆಯ ಪಿ.ಎಸ್.ಐ. ಶಿವಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications