Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಇನ್ಮುಂದೆ ವಾರಕ್ಕೆ 5 ದಿನ ಕೆಲಸ: ನಿತ್ಯ ಕೆಲಸದ ಅವಧಿ ಹೆಚ್ಚಳ, ಕಾರ್ಮಿಕ ಇಲಾಖೆ ಅಪ್ಡೇಟ್ಸ್‌ ಇಲ್ಲಿದೆ !

ಕರ್ನಾಟಕದಲ್ಲಿ ಉದ್ಯೋಗಿಗಳ ಕೆಲಸದ ಅವಧಿಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ಸ್ ಬಂದಿದೆ. ಕರ್ನಾಟಕದ ಉದ್ಯೋಗಿಗಳ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಇದರಲ್ಲಿ ಕಹಿ ಮತ್ತು ಸಿಹಿ ಸುದ್ದಿ ಏಕಕಾಲಕ್ಕೆ ಸಿಕ್ಕಿದೆ. ಕಳೆದ ಐದಾರು ತಿಂಗಳಿನಿಂದಲೂ ದೇಶದಲ್ಲಿ ಕೆಲಸದ ಅವಧಿಯ ಬಗ್ಗೆ ಚರ್ಚೆಗಳು ನಡೆಯುತ್ತಲ್ಲೇ ಇವೆ. ಆದರೆ, ಸರ್ಕಾರವೇ ಮುಂದೆ ಬಂದು ಕೆಲಸದ ಅವಧಿಯ ಬಗ್ಗೆ ಮಾತನಾಡಿದ್ದು ಕಡಿಮೆ. ಈಚೆಗೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಐಟಿ ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಕರ್ನಾಟಕ ಸರ್ಕಾರವೇ ಮುಂದೆ ಬಂದಿದ್ದು. ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಅದು ಏನು ಎನ್ನುವ ವಿವರ ಇಲ್ಲಿದೆ.

ಈಚೆಗೆ ನೆರೆಯ ಆಂಧ್ರಪ್ರದೇಶ ಸರ್ಕಾರವು ಕೆಲಸದ ಅವಧಿಯನ್ನು ದಿನಕ್ಕೆ 8ರಿಂದ 10 ಗಂಟೆಗಳಿಗೆ ಹೆಚ್ಚಳವಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಹೌದು ಎಲ್ಲಾ ಉದ್ಯೋಗಿಗಳ ಕೆಲಸದ ಅವಧಿಯನ್ನು ನಿತ್ಯ 10 ಗಂಟೆಗೆ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಮುಖ್ಯ ಉದ್ದೇಶ ಪ್ರೊಡೆಕ್ಟಿವಿಟಿ (ಉತ್ಪಾದನೆ) ಹೆಚ್ಚಳ ಮಾಡುವುದು ಹಾಗೂ ಉದ್ಯಮಿಗಳು & ಬಂಡವಾಳದಾರರನ್ನು ಆಕರ್ಷಿಸುವುದು ಎಂದು ಹೇಳಲಾಗಿದೆ. ಆದರೆ, ಸರ್ಕಾರದ ಈ ಪ್ರಸ್ತಾವನೆಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕೆಲಸದ ಅವಧಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದರೂ ಅದರೊಂದಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಡುವುದಕ್ಕೂ ಕರ್ನಾಟಕ ಸರ್ಕಾರ ಮುಂದಾಗಿದೆ.

working hours in Karnataka will be 10 hours for 5 days a week here are updates from Labour Department

ಕರ್ನಾಟಕ ಸರ್ಕಾರವು ಕಾರ್ಮಿಕರ ಉದ್ಯೋಗ ಸಮಯವನ್ನು 9ರಿಂದ 10 ಗಂಟೆಗೆ ಹೆಚ್ಚಳ ಮಾಡುವುದು ಹಾಗೂ 10 ಜನಕ್ಕಿಂತ ಕಡಿಮೆ ಉದ್ಯೋಗಿಗಳು ಇರುವ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಹೊಸ ಕಾಯ್ದೆ ವ್ಯಾಪ್ತಿಯಿಂದ ಪ್ರತ್ಯೇಕಿಸುವ (ಹೊರಗಿರಿಸುವ) ಚಿಂತನೆಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹೊಂದಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಇದೀಗ ಎರಡು ಕಾನೂನುಗಳ ತಿದ್ದುಪಡಿಗೆ ಸರ್ಕಾರ ಮುಂದಾಗಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದೀಗ ಇರುವ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಅನ್ವಯ, ಉದ್ಯೋಗಿಗಳ ಕೆಲಸದ ಸಮಯವು ಒಂದು ದಿನಕ್ಕೆ 9 ಗಂಟೆಗಿಂತಲೂ ಹೆಚ್ಚಾಗಿ ಇರಬಾರದು. ಅಲ್ಲದೇ ಗರಿಷ್ಠ ಹೆಚ್ಚುವರಿ ಅವಧಿ (OT)ಯು 10 ಗಂಟೆಗಿಂತಲೂ ಹೆಚ್ಚಾಗಿ ಇರಬಾರದು ಎಂದಿದೆ. ಆದರೆ ಇದೀಗ ಹೊಸ ಬದಲಾವಣೆಯ ಪ್ರಕಾರ, ದಿನಕ್ಕೆ ಗರಿಷ್ಠ 10 ಗಂಟೆ ಹಾಗೂ ಹೆಚ್ಚುವರಿ ಕೆಲಸದ ಸಮಯವನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ವಾರಕ್ಕೆ 5 ದಿನ ಕೆಲಸ: ಇನ್ನು ಕೆಲಸದ ಅವಧಿಯನ್ನು ಹೆಚ್ಚಳ ಮಾಡುವುದರೊಂದಿಗೆ ಒಂದು ಗುಡ್‌ನ್ಯೂಸ್‌ ನೀಡುವ ಚಿಂತನೆಯೂ ಇದೆ ಎಂದು ಹೇಳಲಾಗುತ್ತಿದೆ. ವಾರದಲ್ಲಿ ಕೆಲಸದ ಅವಧಿ ಹೆಚ್ಚಳವಾಗುವುದರಿಂದ ವಾರಕ್ಕೆ ಎರಡು ದಿನ ರಜೆ ಸಿಗಲಿದೆ. ವಾರದ ರಜೆ ಇನ್ಮುಂದೆ ಶನಿವಾರ ಹಾಗೂ ಭಾನುವಾರ ಇರಲಿದೆ ಎಂದು ಹೇಳಲಾಗಿದೆ. ಈ ನಿಯಮಗಳನ್ನು ಚರ್ಚಿಸಲು ಸಭೆ ನಡೆಸಲಾಗುತ್ತಿದೆ.

ಯಾವ ರಾಜ್ಯಗಳಲ್ಲಿ ಈ ರೀತಿ ಇದೆ: ಇನ್ನು ಈಗಾಗಲೇ ಆಂಧ್ರ ಪ್ರದೇಶದಲ್ಲಿ 9 ರಿಂದ 10 ಗಂಟೆಗೆ ಕೆಲಸದ ಅವಧಿಯನ್ನು ಈಚೆಗೆ ಹೆಚ್ಚಳ ಮಾಡಲು ಮುಂದಾಗಿದೆ. ಇದರೊಂದಿಗೆ ಈಗಾಗಲೇ ನೆರೆಯ ಮಹಾರಾಷ್ಟ್ರ, ಛತ್ತೀಸಗಡ, ಗುಜರಾತ್, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಈ ನಿಯಮ ಜಾರಿಯಲ್ಲಿದೆ ಎಂದು ಹೇಳಲಾಗಿದೆ. ಇದೀಗ ಕರ್ನಾಟಕ ಸರ್ಕಾರವು ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+