ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್, ಕಲಬುರಗಿ,ವಿಜಯಪುರ: ವಿಶ್ವಪಾರಂಪರಿಕ ಪಟ್ಟಿಗೆ ಶಿಫಾರಸು

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಕೆಲವು ಜಿಲ್ಲೆಗಳನ್ನು ಶಾಶ್ವತವಾಗಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಸಂಬಂಧ ಕೈಗೊಂಡಿರುವ ಅಧ್ಯಯನ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜೂನ್ ನಲ್ಲಿ ವರದಿ ಸಲ್ಲಿಸಲು ರಾಜ್ಯ ಪುರಾತತ್ವ ಇಲಾಖೆ ನಿರ್ಧರಿಸಿದೆ.

ಮಹಾಮಸ್ತಕಾಭಿಷೇಕ ಮತ್ತು ಹಾಸನದ 7 ಸುಂದರ ಪ್ರವಾಸಿ ತಾಣಮಹಾಮಸ್ತಕಾಭಿಷೇಕ ಮತ್ತು ಹಾಸನದ 7 ಸುಂದರ ಪ್ರವಾಸಿ ತಾಣ

ರಾಜ್ಯದ ಬೀದರ್, ಕಲಬುರಗಿ, ವಿಜಯಪುರ ಹಾಗೂ ತೆಲಂಗಾಣದ ಗೋಲ್ಕಂಡ ಜಿಲ್ಲೆಗಳನ್ನು ಶಾಶ್ವತವಾಗಿ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವ ಸಂಬಂಧ ಪಟ್ಟಿ ಸಿದ್ಧವಾಗಿದೆ.ಈ ತಾಣಗಳು 2014ರಲ್ಲಿ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿದ್ದವು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಇದೀಗ ಶಾಶ್ವತ ಪಟ್ಟಿಗೆ ಸೇರಿಸಲು ಯುನೆಸ್ಕೋದ ನಿಯಮಾವಳಿಗಳ ಪ್ರಕಾರ ಅಧ್ಯಯನ ನಡೆಸಲಾಗುತ್ತಿದೆ. ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್ ವರ್ಕ್ ತಂಡವು ಅಧ್ಯಯನದ ಜವಾಬ್ದಾರಿ ಹೊತ್ತಿದೆ. ಅದರಂತೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲು ಬೇಕಿರುವ ಮಾನದಂಡಗಳ ಪ್ರಕಾರ ಅಧ್ಯಯನ ನಡೆಸಲಾಗುತ್ತಿದೆ.

vijayapura, Bidar and Kalburagi may get world heritage district status soon

ಜಿಲ್ಲೆಯಲ್ಲಿರುವ ಸ್ಮಾರಕಗಳ ಪಟ್ಟಿ, ಅವುಗಳ ಸ್ಥಿತಿ-ಗತಿ ಇತ್ಯಾದಿಗಳನ್ನು ಅಧ್ಯಯನ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುವಂತೆಯೂ ಈಗಾಗಲೇ ಕೆಲವು ಸಭೆ ನಡೆಸಿ ತಿಳಿಸಲಾಗಿದೆ. ಶೀಘ್ರದಲ್ಲೇ ಅಧ್ಯಯನ ಅಂತಿಮ ಹಂತ ತಲುಪಿದೆ.

ಅದನ್ನು ಯಥಾವತ್ತಾಗಿ 2018ರ ಜೂನ್ ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಲ್ಲಿಸಲಾಗುವುದು. ಇಲಾಖೆ ಪರಿಶೀಲಿಸಿ ಯಾವುದೇ ಲೋಪ-ದೋಷಗಳಿದ್ದರೆ ಅದನ್ನು ಸರಿಪಡಿಸಿ, ಡಿಸೆಂಬರ್ ಇಲ್ಲವೇ ಮುಂದಿನ ವರ್ಷ ಜನವರಿಯಲ್ಲಿ ಎಎಸ್ಐ ಮುಖೇನ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

English summary
Bijapur, Bidar and Kalburgi may get world heritage district status soon. Archeological Survey of India has recommended these three districts and Golconda district of Telangana were recommended to UNESCO for permanent status as world heritage sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X