ಮುಖ್ಯ ಕಾರ್ಯದರ್ಶಿಯಾಗಿ ಸುಭಾಷ್ ಚಂದ್ರ ಅಧಿಕಾರ ಸ್ವೀಕಾರ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 01: ವಿಧಾನಸೌಧದ ಪ್ರದಾನ ಕಾರ್ಯದರ್ಶಿ ಕಚೇರಿಯಲ್ಲಿ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಸುಭಾಷ್ ಚಂದ್ರ ಕುಂಟಿಯಾ ಅವರು ಶನಿವಾರ (ಅಕ್ಟೋಬರ್ 01) ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಅಧಿಕಾರ ಹಸ್ತಾಂತರಿಸಿದರು

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಸ್ಎಸ್ ಅಧಿಕಾರಿ ಸುಭಾಷ್ ಚಂದ್ರ ಕುಂಟಿಯ ಅವರನ್ನು ನೇಮಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

Subhash Chandra Khuntia Chief Secretary to Government of Karnataka

ಸಿಎಸ್ ಅರವಿಂಧ್ ಜಾಧವ್ ಅವರಿಂದ ತೆರವಾದ ಸ್ಥಾನಕ್ಕೆ ಸುಭಾಷ್ ಅವರನ್ನು ನೇಮಿಸಲಾಗಿದೆ.

ಅರವಿಂದ್ ಜಾಧವ್ ಅವರ ಅಧಿಕಾರ ಅವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಸಚಿವ ಸಂಪುಟದ ಸಭೆ ಬಳಿಕ ಸುಭಾಷ್ ಅವರ ನೇಮಕ ಅದೇಶ ಹೊರಡಿಸಲಾಗಿದೆ.

Subhash Chandra Khuntia Chief Secretary to Government of Karnataka

ಅಕ್ಟೋಬರ್ 01, 2016ರಿಂದ ಸುಭಾಷ್ ಅವರ ಅಧಿಕಾರ ಅವಧಿ ಆರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior IAS officer Subhash Chandra Khuntia takes charge as Chief Secretary to Government w.e.f 01/10/2016.
Please Wait while comments are loading...