ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರ್ಕಾರದಿಂದ ಸದ್ದಿಲ್ಲದೆ 142 ಕ್ರಿಮಿನಲ್ ಕೇಸ್ ವಾಪಸ್

|
Google Oneindia Kannada News

ಬೆಂಗಳೂರು, ಏ.2: ಮೈತ್ರಿ ಸರ್ಕಾರವು ಸದ್ದಿಲ್ಲದೆ 142 ಕ್ರಿಮಿನಲ್ ಕೇಸುಗಳನ್ನು ಹಿಂತೆಗೆದುಕೊಂಡಿದೆ.

21 ಜಿಲ್ಲೆಗಳಲ್ಲಿ ದಾಖಲಾಗಿರುವ ಕೋಮು ಸಂಘರ್ಷ ಸೇರಿದಂತೆ ವಿವಿಧ ಸ್ವರೂಪದ ಒಟ್ಟು 142 ಪ್ರಕರಣಗಳನ್ನು ಬೇಷರತ್ತಾಗಿ ರದ್ದುಪಡಿಸಿದೆ. ಇದರಲ್ಲಿ ಗಂಭೀರ ಸ್ವರೂಪದ ಪ್ರಕರಣಗಳೂ ಸೇರಿದ್ದು ವಾಪಸ್ ಪಡೆಯಲು ಯಾವುದೇ ನಿರ್ದಿಷ್ಟ ಕಾರಣಗಳನ್ನೂ ನೀಡಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳೂರು ತಾಲೂಕಿನ ಉಳಾಯಿಬೆಟ್ಟಿನಲ್ಲಿ ಕೋಮುವಾದಿಗಳು ನಡೆಸಿದ ಮಾರಕ ದಾಳಿ, ದರೋಡೆ, ಹಲ್ಲೆ ಕೊಲೆ ಪ್ರಯತ್ನವೂ ಕೂಡ ಸೇರಿದೆ.ಸಾಮಾನ್ಯವಾಗಿ ಎರಡೂ ಪಕ್ಷದವರ ಒಪ್ಪಿಗೆ ಇದ್ದಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ವಜಾ ಮಾಡಲಾಗುತ್ತದೆ. ಆದರೆ ಇಂತಹ ಯಾವುದೇ ಬೆಳವಣಿಗೆ ಇಲ್ಲದಿದ್ದರೂ ರಾಜ್ಯ ಸರ್ಕಾರ ಸ್ವಯಂ ನಿರ್ಧಾರ ತೆಗೆದುಕೊಂಡಿದೆ.

State government withdraws 142 criminal cases

ಹೆಚ್ಚಿನವು ಸೆಷನ್ಸ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ವಿಚಾರಣೆಯ ವಿವಿಧ ಹಂತಗಳಲ್ಲಿದ್ದವು. 2018 ಅಕ್ಟೋಬರ್ ನಿಂದ ಈ ವರ್ಷದ ಜನವರಿವರೆಗೆ ವಿವಿಧ ಹಂತಗಳಲ್ಲಿ ಸರ್ಕಾರ ಇವುಗಳನ್ನು ವಾಪಸ್ ಪಡೆದಿರುವುದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಾಸಿಕ್ಯೂಶನ್ ಇಲಾಖೆ ನಿರ್ದೇಶಕರು ನೀಡಿರುವ ದಾಖಲೆಗಳ ಮೂಲಕ ಬಹಿರಂಗಗೊಂಡಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ.

English summary
Coalition government withdraws 142 criminal cases belonging to one community in Mangaluru. This becomes the core political issues for parliament election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X