ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಹಣಕಾಸು ಖಾತೆಯನ್ನು ಹೊಂದಿರುವ ಮಂತ್ರಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.

ಮುಖ್ಯಮಂತ್ರಿಯಾಗಿ 4ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ಸಿದ್ದರಾಮಯ್ಯ ಅವರು ಚುನಾವಣೆ ಮುಂದಿಟ್ಟುಕೊಂಡು ಜನಪ್ರಿಯ ಬಜೆಟ್ ಮಂಡಿಸುವ ನಿರೀಕ್ಷೆಯಿತ್ತು..ಬಜೆಟ್ ಲೈವ್ ಅಪ್ಡೇಟ್ಸ್ ಇಲ್ಲಿ ಓದಿ...[ಬಜೆಟ್ 2017: ಯಾವುದರ ಬೆಲೆ ಹೆಚ್ಚಳ? ಯಾವುದು ಇಳಿಕೆ]

1.05:ಬೆಂಗಳೂರಿನ ಅಭಿವೃದ್ಧಿಗಾಗಿ ಒಟ್ಟಾರೆ 7300 ಕೋಟಿ ರು
* ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ.[ಒತ್ತಡದ ಮಧ್ಯೆ ಸಿದ್ಧರಾಮಯ್ಯ 12ನೇ ಬಜೆಟ್ ಮಂಡನೆ]
* ಕೋನದಾಸಪುರದ 166 ಎಕರೆ ವಿಸ್ತೀರ್ಣದ ನೂತನ ಟೌನ್ ಶಿಪ್[ಬೆಂಗಳೂರಿಗೆ ಸಿಕ್ಕಿದ್ದೇನು?]
12.55:ಎಸ್ಸಿ, ಎಸ್ಟಿ ವಿಧವೆಯರನ್ನು ವಿವಾಹವಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ
12.52:20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಕಾಲೇಜು, 2 ಮಾದರಿ ಶಾಲೆ ಆರಂಭ.
*ಮಂಗಳೂರಿನಲ್ಲಿ ಹಜ್ ಭವನ ಸ್ಥಾಪನೆಗೆ 10 ಕೋಟಿ ಮೀಸಲು.[ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ]
*ಶಬರಿಮಲೆಗೆ ಭೇಟಿ ನೀಡುವ ಕರ್ನಾಟಕದ ಭಕ್ತರಿಗೆ ನೆರವಿಗೆ ಉಪಕಚೇರಿ ಸ್ಥಾಪನೆ. ಇದರಿಂದ 50 ಲಕ್ಷ ಭಕ್ತರಿಗೆ ಸಹಾಯ
*ಮೈಲಾರ ಲಿಂಗೇಶ್ವರ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.[ಬಜೆಟ್ 2017: ಬಳ್ಳಾರಿ ಜಿಲ್ಲೆಯಲ್ಲಿ ಕುರಿ ಸಂವರ್ಧನಾ ಕೇಂದ್ರ]
*ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 175 ಕೋಟಿ ರೂ. ಮೀಸಲು
12.51:ಬೆಂಗಳೂರಿನ ಆಯ್ದ ಬಡಾವಣೆಗಳಲ್ಲಿ ಬಾಡಿಗೆ ಸೈಕಲ್ ಒದಗಿಸುವ ಯೋಜನೆ.
*50ಕೋಟಿ ರೂ. ವೆಚ್ಚದಲ್ಲಿ 1ಸಾವಿರ ಶೌಚಾಲಯ ನಿರ್ಮಾಣ.[ಹಾಸನ, ಚಾಮರಾಜ ನಗರ, ಯಾದಗಿರಿಯಲ್ಲಿ ಡಿಪ್ಲೊಮಾ ಕಾಲೇಜು]
*ಗ್ರಾಮ ಪಂಚಾಯತಿಗಳ ಮಾರ್ಚ್ 2015ರೊಳಗಿನ ವಿದ್ಯುತ್ ಬಿಲ್ ಮನ್ನಾ
12.50: 'ಭಾಗ್ಯಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ ಯೂನಿಟ್​ಗಳನ್ನು 18 ರಿಂದ 40 ಯೂನಿಟ್​ಗೆ ಹೆಚ್ಚಳ.[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]
12.45: ವೃದ್ದಾಪ್ಯ ವೇತನ 500 ರುಗಳಿಗೆ ಏರಿಕೆ,
* ಜಿ. ಪಂ ಸದಸ್ಯರ ಗೌರವಧನ 5 ಸಾವಿರ ರುಗೆ ಏರಿಕೆ.
[ಬೆಂಗಳೂರಿನ ಅಂಬೇಡ್ಕರ್ ಆರ್ಥಿಕ ಸಂಶೋಧನಾ ಕೇಂದ್ರ]
* ತಾಲೂಕು ಪಂಚಾಯಿತಿ ಗೌರವಧನ 1 ಸಾವಿರ ರು ಗೆ ಏರಿಕೆ.
[ಕರ್ನಾಟಕ ಬಜೆಟ್ ನ ಪ್ರಮುಖಾಂಶಗಳು]
12.40: ಗರ್ಭಿಣಿಯರು, ಬಾಣಂತಿಯರಿಗೆ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆಗೆ 302 ಕೋಟಿರು
12.35:6 ಹೊಸ ವೈದ್ಯಕೀಯ ಕಾಲೇಜುಗಳ ಘೋಷಣೆ

* ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತರಿಗೆ 5 ಕೋಟಿ ರು
* ಒಲಿಂಪಿಕ್ಸ್ ರಜತ ಪದಕ ವಿಜೇತರಿಗೆ 3 ಕೋಟಿ ರು
* ಒಲಿಂಪಿಕ್ಸ್ ಕಂಚು ಪದಕ ವಿಜೇತರಿಗೆ 2 ಕೋಟಿ ರು

[ಬಜೆಟ್ 2017: ರಾಮನಗರ, ದಾವಣಗೆರೆ, ಕೋಲಾರಗಳಲ್ಲಿ ಹೈಟೆಕ್ ಆಸ್ಪತ್ರೆ]
12.25:
ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ 345 ಕೋಟಿ ರು
* ಖಾಸಗಿ ಸಂಸ್ಥೆ ನಿವೃತ್ತಿ ವಯಸ್ಸು 58 ರಿಂದ 60ಕ್ಕೇರಿಕೆ
* ರಾಯಚೂರಿನಲ್ಲಿ ಹೊಸ ವಿಶ್ವವಿದ್ಯಾಲಯ, ರಾಜ್ಯದಲ್ಲಿ ಮೂರು ಹೊಸ ಪಾಲಿಟೆಕ್ನಿಕ್
* ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಟೀ ಪಾರ್ಕ್.[ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಮಂಜೂರು]
12.20: ಪರಿಸರ ಸಂಶೋಧನೆಗಾಗಿ ಪೂರ್ಣತೇಜಸ್ವಿ ಪ್ರತಿಷ್ಠಾನಾ ಸ್ಥಾಪನೆ
* ತೇಜಸ್ವಿ ಪ್ರತಿಷ್ಠಾನಕ್ಕೆ 5 ಕೋಟಿ ರು ಅನುದಾನ
* 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್.[ಕಾರವಾರದಲ್ಲಿ 1,500 ಕೋಟಿ ರು. ವೆಚ್ಛದಲ್ಲಿ ಹೊಸ ಬಂದರು]

12.15:ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ವಿತರಿಸುವ ಅಕ್ಕಿ ಪ್ರಮಾಣವನ್ನು 5 ಕೆ.ಜಿಯಿಂದ 7 ಕೆ.ಜಿ ಗೆ ಏರಿಕೆ ಮಾಡಲಾಗಿದೆ.[ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೇನಿದೆ?]
12.10: ಕಾರವಾರ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಏರ್ ಸ್ಟ್ರಿಪ್ ಸ್ಥಾಪನೆ
* ಸರ್ಕಾರಿ ನೌಕರರಿಗೆ ಏಳನೆ ವೇತನ ಆಯೋಗ ಜಾರಿಗೆ ಸಮಿತಿ
* ಲೈಂಗಿಕ ದೌರ್ಜನ್ಯಕೊಳಗಾದವರಿಗೆ ವಿಶೇಷ ಚಿಕಿತ್ಸಾ ಕೇಂದ್ರ
* 10 ಸಾವಿರ ಕೋಟಿ ಟಗರು ಉತ್ಪಾದನಾ ಘಟಕೆಕ್ಕೆ.[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]
* ಗದಗದಲ್ಲಿ ಈರುಳ್ಳಿ ಮಾರುಕಟ್ಟೆಗೆ 10 ಕೋಟಿ ರು
* ರಾಜ್ಯದ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರು ಅನುದಾನ.[ಬಜೆಟ್ 2017: 58,000 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ]

12.05: ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1500 ಕೋಟಿ.[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]

* ಜಿಲ್ಲಾ ಸ್ತ್ರೀಶಕ್ತಿ ಕೂಟದಿಂದ ಸಂಚಾರಿ ಕ್ಯಾಂಟೀನ್ ಆರಂಭ
* ಆಶಾದೀಪ ಯೋಜನೆ ಅಡಿ ಎಸ್ ಟಿ ಎಸ್ಟಿಗಳಿಗೆ ಉದ್ಯೋಗ
* ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ವೈ ಫೈ[ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ]
* ಬರಪೀಡಿತಪ್ರದೇಶಗಳಲ್ಲಿ ಮೋಡಬಿತ್ತನೆ (30ಕೋಟಿರು)
12.00:ಬಿಯರ್, ಫೆನ್ನಿ, ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು
* ಮದ್ಯದ ಮೇಲೆ ಹೆಚ್ಚುವರಿ ಸುಂಕ ಹೇರಿಕೆ.[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]
* ಮೈಸೂರಿನ ಹಿಮ್ಮಾವುವಿನಲ್ಲಿ ಚಿತ್ರನಗರಿ ನಿರ್ಮಾಣ
* ಗ್ರಾಮೀಣ ಪ್ರದೇಶಗಳಲ್ಲಿ 2500 ಶುದ್ಧ ನೀರಿನ ಘಟಕ ಸ್ಥಾಪನೆ
* ಬೆಂಗಳೂರು ಒನ್ ರೀತಿಯಲ್ಲಿ ಕರ್ನಾಟಕ ಒನ್ ಸ್ಥಾಪನೆ
11.58:ವಿಶ್ವಕನ್ನಡ ಸಮ್ಮೇಳನಕ್ಕೆ 20 ಕೋಟಿ ರು
ಮಹಾಮಸ್ತಕಾಭಿಶೇಕಕ್ಕೆ 173 ಕೋಟಿ ರು ಅನುದಾನ.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಹೊಸ ಯೋಜನೆಗಳು]11.54 : 25 ಲಕ್ಷ ರೈತರಿಗೆ 13,500 ಕೋಟಿ ಸಾಲ ನೀಡುವ ಗುರಿ
* 3 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ
* ಅಂಗನವಾಡಿಗಳಿಗೆ ಕ್ಷೀರಭಾಗ್ಯ 5 ದಿನ ಹಾಲು ವಿತರಣೆ

11.53:21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆ
* ನೀರಾ ಪೇಯ, ಸಂಸ್ಕರಣ ಘಟಕಕ್ಕೆ ಲೈಸನ್ಸ್, 100 ಕೋಟಿ
11.52: ಕಸಾಯಿಖಾನೆಗೆ ಸಹಾಯಧನ. ಚರ್ಮ, ಉಣ್ಣೆ ಗೋದಾಮುಗಳ ಸ್ಥಾಪನೆ. 2.5 ಕೋಟಿ ವೆಚ್ಚದಲಿ ಉಣ್ಣೆ ಸಂಸ್ಕರಣಾ ಘಟಕ
11.50 : ಅಮ್ಮ ಕ್ಯಾಂಟೀನ್ ಮಾದರಿ ನಮ್ಮ ಕ್ಯಾಂಟೀನ್ ಓಪನ್, ಬೆಂಗಳೂರಿನಲ್ಲಿ 198 ನಮ್ಮ ಕ್ಯಾಂಟೀನ್ ತೆರೆಯಲಾಗುತ್ತದೆ. 5 ರು ಗೆ ತಿಂಡಿ, 10 ರೂಪಾಯಿಗೆ ಊಟ ಸಿಗಲಿದೆ.

11.45: ಕೈ ಕೊಟ್ಟ ಮೈಕ್, ಸರಿಯಾಗಿ ಕೇಳಿಸುತ್ತಿಲ್ಲಾ ಎಂದು ಪ್ರಶ್ನಿಸಿ ಮತ್ತೆ ಭಾಷಣ ಮುಂದುವರೆಸಿದ ಸಿದ್ದರಾಮಯ್ಯ

11.42: ಬರ ನಿರ್ವಹಣೆ, ಕೃಷಿಭಾಗ್ಯ ಯೋಜನೆ, ಕೆರೆ ಪುನಶ್ಚೇತನ, ತ್ಯಾಜ್ಯ ನೀರು ಸಂಸ್ಕರಿಸಿ ಪುನರ್ ಬಳಕೆ ಯೋಜನೆ ಜಾರಿಯಲ್ಲಿದೆ. ರೈತರಿಗೆ ಬೆಳೆವಿಮೆ ಫಲ ನೀಡಲಾಗುತ್ತಿದೆ.
11.41: ಯೋಜನೆ ಮತ್ತು ಯೋಜನೇತರ ವೆಚ್ಚಕ್ಕೆ ಕಡಿವಾಣ. ರಂಗನಾಥ್ ವರದಿ ಜಾರಿಗೆ
11.40: ಅಪನಗದೀಕರಣದಿಂದ ಕೇಂದ್ರ ಸರ್ಕಾರ ಸಾಧಿಸಿದ್ದೇನು? ಪೂರ್ವ ತಯಾರಿ ಇಲ್ಲದೆ ಯಾವುದೇ ಯೋಜನೆ ಅನುಷ್ಠಾನ ಕಷ್ಟ ಎಂಬುದರ ಅರಿವು ಇರಬೇಕು.
11.35:2016 ರ ಸಾಧನೆಯ ಹಿನ್ನೋಟ ನೀಡಿದ ಸಿದ್ದರಾಮಯ್ಯ ಅವರು ನಾಲ್ಕು ವರ್ಷ ತುಂಬುತ್ತಿರುವ ನಮ್ಮ ಸರ್ಕಾರ ಅಭಿವೃದ್ಧಿಪಥದಲ್ಲಿದೆ ಎಂದಿದ್ದಾರೆ.
11.32:ಸಿದ್ದರಾಮಯ್ಯ ಅವರಿಂದ 2017-18ರ ಬಜೆಟ್ ಮಂಡನೆ ಆರಂಭ. ರಾಮರಾಜ್ಯ, ಅಂಬೇಡ್ಕರ್, ಗಾಂಧೀಜಿ, ಅಣ್ಣ ಬಸವಣ್ಣ ಅವರ ಆದರ್ಶದ ಮೂಲಕ ಸಾಮಾಜಿಕ ನ್ಯಾಯ ನೀಡುವುದು ನಮ್ಮ ಸರ್ಕಾರದ ಉದ್ದೇಶ.
11.30: ವಂದೇ ಮಾತರಂ ಹಾಡುವ ಮೂಲಕ ಬಜೆಟ್ ಅಧಿವೇಶನ ಆರಂಭ
11.00: ವಿಧಾನಸೌಧದಲ್ಲಿ ನಡೆದ ಪರಿಷತ್ ಸಭೆ ಮುಕ್ತಾಯ. ಸಭೆಯಲ್ಲಿ ಬಜೆಟ್ ಮಂಡನೆಗೆ ಅನುಮೋದನೆ.


10.45: ಬಜೆಟ್ ಪ್ರತಿಯೊಂದಿಗೆ ವಿಧಾನಸಭೆಗೆ ಬಂದ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೂ ಮುನ್ನ ಮಂತ್ರಿ ಪರಿಷತ್ ಸಭೆ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 12ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.[ಒತ್ತಡದ ಮಧ್ಯೆ ಸಿದ್ಧರಾಮಯ್ಯ 12ನೇ ಬಜೆಟ್ ಮಂಡನೆ]

CM Siddaramaiah budget

ಬಜೆಟ್ ಮುಖ್ಯಾಂಶಗಳು : 2016 || 2015

ಬಜೆಟ್ ನಿರೀಕ್ಷೆಗಳು: ಸಹಕಾರ ಸಂಘಗಳಿಂದ ರೈತರು ಪಡೆದಿರುವ ಸಾಲ ಮನ್ನಾ, ಏಳನೇ ವೇತನ ಆಯೋಗ ರಚನೆ, ಬಿಪಿಎಲ್, ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುದಾನ, ಹೊಸ ತಾಲೂಕುಗಳ ಘೋಷಣೆ, ಅನ್ನಭಾಗ್ಯದ ಅಕ್ಕಿ ಪ್ರಮಾಣ ಏರಿಕೆ, ದಲಿತ ಕುಟುಂಬಗಳಿಗೆ ಉಚಿತ ವಿದ್ಯುತ್, ಗುಡಿಸಲು ಮುಕ್ತರಾಜ್ಯ ಘೋಷಣೆ. ಪ್ರಾಯೋಗಿಕವಾಗಿ ನಮ್ಮ ಕ್ಯಾಂಟೀನ್ ಯೋಜನೆ ಜಾರಿ.

Karnataka State Budget 2017-18 Live Updates and Highlights | CM Siddaramaiah |

10.00: 176 ತಾಲೂಕುಗಳ ಪೈಕಿ 160 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ, ರೈತರು ಪಡೆದಿರುವ ಸಾಲ (ಸಹಕಾರ ಸಂಘಗಳಿಂದ)ದಲ್ಲಿ ಶೇ 50ರಷ್ಟು ಮನ್ನಾ ಮಾಡುವ ಸಾಧ್ಯತೆ.[ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?]

9.15 : ಮಾರ್ಚ್ 15 ರಿಂದ 28ರ ತನಕ ವಿಧಾನಸಭೆ ಅಧಿವೇಶನ ನಡೆಯಲಿದ್ದು, ವಿಧಾನಸೌಧ ಸುತ್ತಾ ಮುತ್ತಾ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಪ್ರತಿಭಟನೆ, ಪ್ರಚೋದನಾ ಭಾಷಣಕ್ಕೂ ನಿರ್ಬಂಧವಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.

9.00: ಕಳೆದ ಬಾರಿ 1.62 ಲಕ್ಷ ಕೋಟಿ ರು ಮೊತ್ತದ ಆಯವ್ಯಮ ಮಂಡಿಸಲಾಗಿತ್ತು ಈಗ ಮೊಟ್ಟ ಮೊದಲ ಬಾರಿಗೆ 2ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಯಾಗಲಿದೆ. 2018ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆ ನಿರೀಕ್ಷೆ.

ಈ ಬಾರಿ ಕೂಡಾ ಕೃಷಿ, ಮೂಲಸೌಕರ್ಯ, ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಸಿಎಂ ಒತ್ತು ನೀಡಲಿದ್ದಾರೆ.ಮಂತ್ರಿ ಪರಿಷತ್ ಸಭೆಯಲ್ಲಿ ಬಜೆಟ್ ಗೆ ಒಪ್ಪಿಗೆ ಪಡೆದ ಬಳಿಕ ಅಧಿವೇಶನ ಆರಂಭವಾಗಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Budget 2017-18 : Chief Minister and Finance Minister Siddaramaiah presented 2017-18 budget on Wednesday, March 15, 2017. Here are the highlights
Please Wait while comments are loading...