ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು

|
Google Oneindia Kannada News

.

ಬೆಂಗಳೂರು ,ಮಾರ್ಚ್ 13 : ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2015-16ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಒಟ್ಟು ಹತ್ತನೇ ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

Karnataka budget 2015-16 : Highlights

ಈ ಸಾಲಿನ ಬಜೆಟ್ ಮುಖ್ಯಾಂಶಗಳು ಇಂತಿವೆ.

* ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯಗಳಿಗೆ ತಜ್ಞರ ಅಧ್ಯಕ್ಷತೆಯಲ್ಲಿ ವಿಷನ್‌ ಗ್ರೂಪ್‌ ರಚನೆ.

* ನೀರಿನ ಸಮರ್ಥ ಬಳಕೆ ಮತ್ತು ಮಣ್ಣಿನಲ್ಲಿ ಲಘು ಪೋಷಕಾಂಶಗಳನ್ನು ಅಳವಡಿಕೆ ಉತ್ತೇಜನಕ್ಕೆ 'ಲಘು ನೀರಾವರಿ ನೀತಿ' ಜಾರಿಗೆ.

* ಐಸಿಆರ್‌ಐಎಸ್‌ಎಟಿ, ಐಸಿಎಆರ್‌ಡಿಎ ಮತ್ತು ಸಿಐಎಂಎಂವವೈಟಿ ಮುಂತಾದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ತಜ್ಞರ ನೆರವಿನೊಂದಿಗೆ 'ಉತ್ಕೃಷ್ಟ ಜ್ಞಾನ ಕೇಂದ್ರ'ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

* ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಪ್ರಾರಂಭದಲ್ಲಿ ಕೃಷಿ ವಿವಿ ತಜ್ಞರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸಂವಾದ ನಡೆಸುವ 'ಕೃಷಿ ಅಭಿಯಾನ' ಕಾರ್ಯಕ್ರಮ ಜಾರಿಗೆ ತರಲಾಗುವುದು.

* ಹಾವೇರಿ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ

* ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಯಾಂಪಸ್‌

* ರೈತರಿಗೆ ಅಲ್ಪಾವಧಿ ಸಾಲ ನೀಡಲು ರೂ 10 ಸಾವಿರ ಕೋಟಿ

* ಕೆಆರ್‌ಎಸ್‌ ಜಲಾಶಯದ ವೃಂದಾವನ ವಿಶ್ವದರ್ಜೆಗೆ ಏರಿಕೆ

* 5 ರೈತ ಉತ್ಪಾದಕ ಸಂಘ ರಚನೆ

* ಪಶು ಭಾಗ್ಯ ಎಂಬ ಹೊಸ ಯೋಜನೆ. ಹಸು, ಹಂದಿ, ಕೋಳಿ ಸಾಕಲು ಸಹಾಯ ಧನ.

* ಸಹಕಾರಿ ಬ್ಯಾಂಕುಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ 50 ಸಾವಿರದವರೆಗೆ ಸಾಲ

* ಅಂಗನವಾಡಿ ಕಾರ್ಯಕರ್ತೆಯರಿಗೆ ರೂ 250 ಸಹಾಯಧನ ಏರಿಕೆ

* ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ 110 ಕೋಟಿ

* ತಾಲೂಕಿಗೊಂದು 'ಹಸಿರು ಗ್ರಾಮ ' ಸ್ಥಾಪನೆ

*ಸಿಗರೇಟು, ಬೀಡಿ, ಗುಟುಕಾ ಮೇಲಿನ ಮೌಲ್ಯರ್ಧಿತ ತೆರಿಗೆ ಶೇ 17 ರಿಂದ ಶೇ 20ಕ್ಕೆ ಏರಿಕೆ.

* ಪೆಟ್ರೋಲ್‌ ಡೀಸೆಲ್‌ ಮೇಲಿನ ತೆರಿಗೆ 1 ರಷ್ಟು ಹೆಚ್ಚಳ

* 3 ವರ್ಷಗಳಲ್ಲಿ 1886 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ

* ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ 25 ಸ್ಕೈವಾಕರ್‌ಗಳ ನಿರ್ಮಾಣ

* ಯಶಸ್ವಿನಿ ಯೋಜನೆಗೆ 110 ಕೋಟಿ, ತೋಟಗಾರಿಕೆ ಇಲಾಖೆಗೆ 75 ಕೋಟಿ, ರೈತರಿಗೆ ಅಲ್ಪಾವಧಿ ಸಾಲ ನೀಡಲು 10 ಸಾವಿರ ಕೋಟಿ

* 2014-15 ರಲ್ಲಿ ಶೇ 5 ರಿಂದ ಶೇ 7ಕ್ಕೆ ಪ್ರಗತಿ

* ಡಾ. ಯು.ಆರ್‌. ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ

* ವಕ್ಫ್‌ ಆಸ್ತಿ ಅತಿಕ್ರಮಣ ತೆರವಿಗೆ 'ವಿಶೇಷ ಕ್ರಿಯಾ ಪಡೆ'

* ಉದ್ದೇಶಿತ ಕೊಳವೆ ಬಾವಿ ವಿಫಲವಾದರೆ ಸಾಲ ಮನ್ನಾ

*ಅಂತರಜಾತಿ ವಿವಾಹಕ್ಕೆ - ಲಕ್ಷ ಪ್ರೋತ್ಸಾಹಧನ

* ಶಾಲೆಗಳಲ್ಲಿ 'ಇ- ಲರ್ನಿಂಗ್‌' ಸೌಲಭ್ಯ

* ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ, 3 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 750 ಹಾಲು ಉತ್ಪಾದಕರ ಸಂಘ ಸ್ಥಾಪನೆ
ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆಗೆ 2 ಸಾವಿರ ಕೋಟಿ

*ಕುರಿ ಸುರಕ್ಷಾ ಯೋಜನೆಯಡಿ 5 ಸಾವಿರ ಪರಿಹಾರ

*ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸೆ ಘಟಕ

* ರೈತರಿಗೆ ಮೌಲ್ಯಧಾರಿತ ಸೇವೆ ಒದಗಿಸಲು 'ಆನ್‌ಲೈನ್‌ ಮಾರಾಟ ವ್ಯವಸ್ಥೆ' ಸುಧಾರಣೆ

*ವಿಜಯಪುರ, ಮೈಸೂರು ನಗರ ಅಭಿವೃದ್ಧಿಗೆ ತಲಾ 10 ಕೋಟಿ, ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗೆ 406 ಕೋಟಿ ರೂ. ಮಂಗಳೂರು ಮತ್ತು ಗದಗದಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣ.

*ಕೆಮ್ಮಣ್ಣು ಗುಂಡಿ ಗಿರಿಧಾಮದಲ್ಲಿ ಕೇಬಲ್ ಕಾರ್. ವಿದೇಶಿ ಪ್ರವಾಸಿಗರಿಗೆ ಏರ್ ಚಾರ್ಟರ್ ಫ್ಲೈಟ್. ಆನ್ ಲೈನ್ ಮೂಲಕ ಭೂಪರಿವರ್ತನೆ ಮಾಡಲು ಕ್ರಮ.

*ಕರ್ನಾಟಕ ಟೂರಿಸಂ ವಿಶನ್ ಗ್ರೂಪ್ ಶಿಫಾರಸಿಗೆ 50 ಕೋಟಿ ರೂ. ಬೆಂಗಳೂರಿನ ಹಲಸೂರು ಕೆರೆಯಲ್ಲಿ ಫ್ಲೋಟಿನ್ ಹೋಟೆಲ್. ನಳಂದಾ ಬೌದ್ಧ ಅಧ್ಯಯನ ಕೇಂದ್ರಕ್ಕೆ 5 ಕೋಟಿ ರೂಪಾಯಿ.

*ಬಯಲುಸೀಮೆ ಅಭಿವೃದ್ಧಿ ಮಂಡಳಿಗೆ 35 ಕೋಟಿ ರೂ. ಊಟಿ, ವಿಜಯಪುರ, ಜೋಗದಲ್ಲಿ ಕಾರ್ವಾನ್ ಯೋಜನೆ. ಕಲಬುರಗಿ ಮಹಾನಗರ ಪಾಲಿಕೆ ಅಭಿವೃದ್ಧಿಗೆ 50 ಕೋಟಿ ರೂ.

*ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ಅನುದಾನ. ಹಿಂದುಳಿದ ವರ್ಗ ಅಭಿವೃದ್ಧಿಗೆ 1963 ಕೋಟಿ ರೂ. ಕಣಜ ಅಭಿವೃದ್ದಿಗೆ 2 ಕೋಟಿ ಅನುದಾನ. ಬೆಂಗಳೂರಿನ ವಿವಿಧೆಡೆ ಕನ್ನಡ ಕಲಿಕಾ ಕೇಂದ್ರಗಳ
ಆರಂಭ.

*2015ನೇ ವರ್ಷವನ್ನು ದೇವರಾಜು ಅರಸು ಶತಮಾನೋತ್ಸವ ವರ್ಷವಾಗಿ ಆಚರಣೆ. ಬಾಲಕಿಯರ ಹಾಸ್ಟೆಲ್ ಗಳಲ್ಲಿ ಸಿಸಿ ಟಿವಿ ಅಳವಡಿಕೆ. ಪಿಎಚ್ ಡಿ ವಿದ್ಯಾರ್ಥಿಗಳಿಗೆ ಮಾಸಿಕ 5 ಸಾವಿರ ಪ್ರೋತ್ಸಾಹ ಧನ.

*ವಾರ್ತಾ ಇಲಾಖೆಗೆ 93 ಕೋಟಿ ರೂ. ಅನುದಾನ ನೀಡಲಾಗಿದೆ. ಸಾಲುಮರದ ತಿಮ್ಮಕ್ಕನ ಸಾಲು ನೆರಳು ಯೋಜನೆ ಜಾರಿ. 3 ಸಾವಿರ ಕಿ.ಮೀ. ರಸ್ತೆ ಅಕ್ಕಪಕ್ಕ ಗಿಡ ನೆಡಲಾಗುವುದು.

*ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ 3 ಕೋಟಿ ರೂ. ಮೀಸಲು. ಕನ್ನಡ ಚಿತ್ರರಂಗದ ಪರಿಚಯಕ್ಕೆ ಗಾನಯಾನ ಕಾರ್ಯಕ್ರಮ. ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ಚಿತ್ರನಗರ.

*ಲಂಬಾಣಿ ತಾಂಡಾಗಳ ವಲಸೆ ತಪ್ಪಿಸಲು ಕ್ರಮ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಂಜಾರ್ ಭಾಷಾಭಿವೃದ್ಧಿ ಕೇಂದ್ರ.

*ಸರಳ ವಿವಾಹವಾಗುವ ದಂಪತಿಗಳಿಗೆ 50 ಸಾವಿರ ನಗದು. ಅಂತರ್ಜಾತಿ ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹ ಧನ.

*ಸರಳ ವಿವಾಹವಾಗುವ ದಂಪತಿಗಳಿಗೆ 50 ಸಾವಿರ ನಗದು. ಅಂತರ್ಜಾತಿ ವಿವಾಹವಾಗುವ ಯುವತಿಯರಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹ ಧನ.

*ಪ್ರತಿನಿತ್ಯ ಬೆಂಗಳೂರು ನಗರಿಗರಿಗೆ 500ದಶಲಕ್ಷ ಲೀಟರ್ ನೀರು ವಿತರಣೆ. ಕನ್ನಡ ಕಲಿಯುವ ಆಸಕ್ತಿ ಇರುವವರಿಗೆ ವಿಶೇಷ ಯೋಜನೆ.

*ನಿರ್ಮಲಾ ಮಾರುಕಟ್ಟೆ ಯೋಜನೆ ಜಾರಿ. ಭಾನುವಾರದ ಮಾರುಕಟ್ಟೆಗಳ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ. ಪಿಪಿಪಿ ಅಡಿಯಲ್ಲಿ 25 ಸ್ಕೈವಾಕ್ ನಿರ್ಮಾಣ.

*ಅಸ್ರ್ರಶ್ಯ ನಿವಾರಣೆಗೆ ಹೊಸ ಯೋಜನೆ. ರಾಜ್ಯದ ವಿವಿಧ ಕೆರೆಗಳಲ್ಲಿ 2 ಕೋಟಿ ಮೀನು ಮರಿ ಬಿತ್ತನರ. ಮತ್ಸಾಶ್ರಯ ಯೋಜನೆಯಡಿ 2855 ಮನೆ ವಿತರಣೆ. ಮುರುಘಾಮಠದಲ್ಲಿ 325 ಅಡಿ ಎತ್ತರದ ಕಂಚಿನ ಪ್ರತಿಮೆ.

*ಕನ್ನಡ ಸಾಹಿತ್ಯ ಪರಿಷತ್ ಗೆ 100 ವರ್ಷದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವನ್ನು ಕನ್ನಡ ವರ್ಷ ಎಂದು ಘೋಷಣೆ. ಮೇ 1ರಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನ.

*ಬಾದಾಮಿ ಪಟ್ಟಣ ಅಭಿವೃದ್ಧಿಗೆ ನಾಲ್ಕು ವರ್ಷಗಳ ಗಡುವು. ಶಾಲೆಗಾಗಿ ನಾವು ನೀವು ಯೋಜನೆ ಪರಿಣಾಮಕಾರಿ ಅನುಷ್ಠಾನ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, 2 ಜೊತೆ ಸಾಕ್ಸ್ ನೀಡಲು 120 ಕೋಟಿ ರೂಪಾಯಿ ಮೀಸಲು

*ಅಂಗನವಾಡಿ ಸಹಾಯಕಿಯರ ಪ್ರೋತ್ಸಾಹ ಧನ 250 ರೂ. ಹೆಚ್ಚಳ, 13 ಪುರಸಭೆಗಳನ್ನು ನಗರಸಭೆಯನ್ನಾಗಿ ಮಾರ್ಪಾಡು.

*ಚನ್ನಗಿರಿ, ಮಾಯಾಕೊಂಡ ಕ್ಷೇತ್ರಗಳಲ್ಲಿ 77 ಕೆರೆ ತುಂಬಿಸಲು ಕ್ರಮ. ಪರಿಶಿಷ್ಟ ಪುರುಷರು ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ.

*ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್. ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆ. ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರ ಸ್ಥಾಪನೆ.

*ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ. ಅತಿಕ್ರಮಣಗೊಂಡ ವಕ್ಫ್ ಆಸ್ತಿ ತೆರವಿಗೆ ಕ್ರಮ. 20 ಸಾವಿರ ಜನರಿಗೆ ವಸತಿ ವಿತರಣೆ. ನಗರೋತ್ಥಾನ ಯೋಜನೆಯಡಿ 1 ಸಾವಿರ ಕೋಟಿ ರೂ. ಮೀಸಲು.

*15 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 1 ಸಾವಿರದಿಂದ 31ಕ್ಕೆ ಇಳಿದಿದೆ.

*ಬಡತನ ರೇಖೆಯಿಂದ ಮೇಲ್ಪಟ್ಟ ಕುಟುಂಬಗಳಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆ. ಮೂಲಸೌಕರ್ಯಕ್ಕೆ ಅನುದಾನ ನೀಡಲು ನಿರ್ಧಾರ.

*ಸರ್ಕಾರಿ ಶಾಲೆಯ ಮೂಲಸೌಕರ್ಯಕ್ಕೆ 110 ಕೋಟಿ ರೂ. ತಾಲೂಕಿಗೊಂದು ಹಸಿರು ಗ್ರಾಮ ಯೋಜನೆ ಜಾರಿ. ಮಡಿವಾಳ ಕೆರೆ ಜೀವವೈವಿಧ್ಯ ಉದ್ಯಾನವನ ಅಭಿವೃದ್ಧಿ.

*ಆಸಿಡ್ ದಾಳಿಗೆ ಒಳಗಾದ ಮಹಿಳೆಗೆ ಆರ್ಥಿಕ ಸಹಾಯ. ಹಸಿರು ಶಾಲಾವನಕ್ಕಾಗಿ 2.5 ಕೋಟಿ ರೂಪಾಯಿ ಮೀಸಲು. ಹಸಿರು ಗ್ರಾಮ ಯೋಜನೆಗೆ 3 ಕೋಟಿ ರೂ. ಮೀಸಲು

*ಮೈಸೂರು ವಿವಿಯಲ್ಲಿ ಡಾ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಪೀಠ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಸ್ವಚ್ಚತೆ ಕಾಪಾಡಲು ಕ್ರಮ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.

*ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಅನುದಾನ ಏರಿಕೆ. ಕೆಆರ್ಎಸ್ ಬೃಂದಾವನ ಉದ್ಯಾನವನ ವಿಶ್ವದರ್ಜೆಗೆ ಏರಿಸಲಾಗುವುದು.

*ಶಿಂಷಾ ಅಣೆಕಟ್ಟಿನ ಬಲದಂಡೆ ಕಾಲುವೆಗಳ ಅಭಿವೃದ್ಧಿ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಹನಿ ನೀರಾವರಿ ಯೋಜನೆ ಜಾರಿ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನುಷ್ಢಾನಕ್ಕೆ ಬದ್ಧ.

*ರೈತರಿಗೆ ಅಲ್ಪಾವಧಿ ಕೃಷಿ ಸಾಲ ನೀಡಲು 10 ಸಾವಿರ ಕೋಟಿ ರೂಪಾಯಿ ಮೀಸಲು. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.

*ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ವಿಭಜನೆ. ಮಂಡ್ಯ, ಮುಧೋಳದಲ್ಲಿ ಬೆಲ್ಲದ ಸಾವಯವ ಪಾರ್ಕ್. ಯಶಸ್ವಿನಿ ಯೋಜನೆಗೆ 110 ಕೋಟಿ ಅನುದಾನ.

*ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಆಯ್ಕೆ. ಮೀನುಗಾರಿಕೆ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಮತ್ಸ್ಯ ಮೇಳ.

*ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಆಯ್ಕೆ. ಮೀನುಗಾರಿಕೆ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಮತ್ಸ್ಯ ಮೇಳ.

*ರೇಷ್ಮೆ ಬೆಳೆಗೆ ಪ್ರೋತ್ಸಾಹಿಸಲು ರೈತ ಉತ್ಪದನಾ ಕೇಂದ್ರ ಸ್ಥಾಪಿಸಲು ನಿರ್ಧಾರ. ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3 ಕೇಂದ್ರ ಸ್ಥಾಪನೆ ಕೃಷಿ ಉದ್ದೇಶಿತ ಕೊಳವೆಬಾವಿ ವಿಫಲವಾದ್ರೆ ಸಾಲಮನ್ನಾ.

*ತೆಂಗು ಉತ್ಪಾದಕರ ಅಭಿವೃದ್ಧಿಗೆ ಯೋಜನೆ. ಹಾವೇರಿ ತಾಲೂಕಿನ ದೇವಿ ಹೊಸೂರಿನಲ್ಲಿ ತೋಟಗಾರಿಕಾ ಕಾಲೇಜು. ಶಿವಮೊಗ್ಗದಲ್ಲಿ ಕೃಷಿ, ತೋಟಗಾರಿಕಾ ವಿಜ್ಞಾನಗಳ ಹೊಸ ಕ್ಯಾಂಪಸ್

*ಹಿಂದುಳಿದವರ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುತ್ತೇವೆ. ರಾಜ್ಯದಲ್ಲಿ ಪಶು ಭಾಗ್ಯ ಯೋಜನೆ ಜಾರಿ. ನೀರಾ ಇಳಿಸಲು ಸರ್ಕಾರದ ಅನುಮತಿ. ರಾಜ್ಯ ಬಜೆಟ್ ನಲ್ಲಿ ಹೊಸ ಯೋಜನೆಗಳ ಘೋಷಣೆ.

*56 ಹೋಬಳಿಗಳಲ್ಲಿ ಸಾವಯವ ಯೋಜನೆ ಜಾರಿ. 130 ಲಕ್ಷ ಟನ್ ಆಹಾರ ಧಾನ್ಯ ಉತ್ಪನ್ನ ಗುರಿ ಹೊಂದಲಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ.

*ರಾಜ್ಯದ 25 ಜಿಲ್ಲೆಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿ. ಶೇ.8.9ರಲ್ಲಿ ಪ್ರಸಕ್ತ ಸಾಲಿನ ಸೇವಾ ವಲಯದ ಬೆಳವಣಿಗೆ.

*ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸಂಗ್ರಹಾಲಯ. ದಲಿತ ನಾಯಕರ ಸ್ಮಾರಕ ನಿರ್ಮಾಣಕ್ಕೆ 3 ಕೋಟಿ. ಜೋಗ ಜಲಪಾತದಲ್ಲಿ ನೀರಿನ ಮರು ಬಳಕೆ. 4 ಗಿರಿಧಾಮದಲ್ಲಿ ಕೇಬಲ್ ಕಾರು ಯೋಜನೆ.

*ಸಾರಿಗೆ ಇಲಾಖೆಗೆ 1,208 ಕೋಟಿ ರೂ. ಶಿರಾಡಿ ಘಾಟ್ ರಸ್ತೆ ಅಭಿವೃದ್ದಿ 18 ತಿಂಗಳಲ್ಲಿ ಪೂರ್ಣ. ಗ್ರಾಮೀಣ ನೈರ್ಮಲ್ಯಕ್ಕೆ 500 ಕೋಟಿ ರೂ.ಪಶ್ಚಿಮ ಘಟ್ಟಗಳಲ್ಲಿ 50 ಟ್ರಕ್ಕಿಂಗ್ ಪಥ ಸ್ಥಾಪನೆ.

*ಮಾಹಿತಿ ತಂತ್ರಜ್ಞಾನ ಇಲಾಖೆಗೆ 202 ಕೋಟಿ, ಕಾನೂನು ಪದವೀಧರರಿಗೆ 2 ಸಾವಿರ ರೂಪಾಯಿ ಸ್ಟೈಫಂಡ್ ಹೆಚ್ಚಳ. ಪ್ರತಿ ಕಂದಾಯ ವಿಭಾಗಕ್ಕೊಂದು ಸಂಚಾರಿ ನ್ಯಾಯಾಲಯ.

*ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಐಸಿಯು, ಸಾಂಕ್ರಾಮಿಕ ರೋಗ ಪತ್ತೆಗೆ 5 ಕಡೆ ಲ್ಯಾಬೋರೇಟರಿ, ಹುಬ್ಬಳ್ಳಿ ಧಾರವಾಡದಲ್ಲಿ ಐಟಿ ಸಂಸ್ಥೆ ಸ್ಥಾಪನೆಗೆ 12 ಕೋಟಿ ವಂತಿಗೆ ಸಂಗ್ರಹ.

*ಶ್ರವಣಬೆಳಗೊಳದಲ್ಲಿ ಜೈನಶಾಸನ ಅಧ್ಯಯನ ಕೇಂದ್ರಕ್ಕೆ 1 ಕೋಟಿ ರೂ., ರಂಗಭೂಮಿ ಉತ್ತೇಜನಕ್ಕಾಗಿ ರಂಗಾಯಣಕ್ಕೆ 4 ಕೋಟಿ ರೂ. ಹಂತಹಂತವಾಗಿ ಇಡೀ ಬೆಂಗಳೂರಿಗೆ ವೈ ಫೈ.

*ಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ. ತಲಾ 1 ಕೋಟಿ ರೂಪಾಯಿಯಲ್ಲಿ ಡಾ.ಶಿವರಾಮ ಕಾರಂತ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮಂಜೇಶ್ವರ ಗೋವಿಂದ ಪೈ ನಿವಾಸ, ದ.ರಾ.ಬೇಂದ್ರೆ, ಶಿವರುದ್ರಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸ್ಮಾರಕ ನಿರ್ಮಾಣ. ಕೊಂಕಣಿ ಅಧ್ಯಯನ ಪೀಠಕ್ಕೆ 2 ಕೋಟಿ ರೂ.

*ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ. ಹಿರಿಮೆ ಗರಿಮೆ ಯೋಜನೆಯಡಿ ಹಳೇ ಶಿಕ್ಷಣ ಸಂಸ್ಥೆಗಳ ಉತ್ತೇಜನ.

*ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ಪೂರೈಕೆ. ಮಹಿಳೆಯರಿಗೆ ಶೇ.30ರಿಂದ ಶೇ.33ಕ್ಕೆ ಏರಿಕೆ.

*ಬೋವಿ ಸಮುದಾಯದ ಅಭಿವೃದ್ದಿಗೆ ನಿಗಮ ಸ್ಥಾಪನೆ. ಎಲ್ಲಾ ವಿವಿಗಳಲ್ಲಿ ಹೊರ ವಿವಿ ವಿದ್ಯಾರ್ಥಿಗಳಿಗಾಗಿ ಶೇ.15ರಷ್ಟು ಸೀಟು. ಉನ್ನತ ಶಿಕ್ಷಣ ಇಲಾಖೆಗೆ 3,896 ಕೋಟಿ.

*ನಂಜಯ್ಯನಮಠ ವರದಿ ಆಧಾರದ ಮೇಲೆ ರಾಜ್ಯದಲ್ಲಿ 439 ಹೊಸ ಗ್ರಾಮ ಪಂಚಾಯತ್ ಗಳ ರಚನೆ. ಜ್ಞಾನಪ್ರಸಾರ ಯೋಜನೆಯಡಿ ಉಪನ್ಯಾಸಕರ ಕೊರತೆ ನೀಗಿಸಲು ಕ್ರಮ. 100 ವರ್ಷ ಪೂರೈಸಿದ ಮೈಸೂರು ವಿವಿಗೆ ಶತಮಾನೋತ್ಸವ ಆಚರಿಸಲು 50 ಕೋಟಿ ರೂ.

*ಕರಾವಳಿಯಲ್ಲಿ ಚಂಡಮಾರುತ ಉಪಶಮನ ಯೋಜನೆಗೆ 120.60 ಕೋಟಿ ರೂ. ಅನುದಾನ. ಯಲಹಂಕದಲ್ಲಿ 350ಮೆಗಾ ವ್ಯಾಟ್ ವಾಯುವಿದ್ಯುತ್ ಘಟಕ ಸ್ಥಾಪನೆ. ಗ್ರಾಮೀಣಾ ಗೌರವ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣ.

*ನೀರಿನ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಸ್ಥಾಪನೆ. ಗದಗನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ. ಗ್ರಾಮೀಣಾಭಿವೃದ್ದಿ ಇಲಾಖೆಗೆ 9,728 ಕೋಟಿ ರೂ.ಅನುದಾನ. ಶುದ್ಧ ನೀರಿನ ಘಟಕ ಸ್ಥಾಪನೆಗೆ 200 ಕೋಟಿ ರೂ.

*100 ಹಿಂದುಳಿದ ವರ್ಗದ ನೂರು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು. ವಸತಿ ಇಲಾಖೆಗೆ 3,819 ಕೋಟಿ ರೂ. ಮೀಸಲು.

*ಕೃಷಿ ಪಂಪ್ ಸೆಟ್, ಕುಟೀರ ಜ್ಯೋತಿ, ಉಚಿತ ವಿದ್ಯುತ್. ಇಂಧನ ಇಲಾಖೆಗೆ 12,878 ಕೋಟಿ ರೂಪಾಯಿ ಮೀಸಲು. ಶ್ರೀರಂಗಪಟ್ಟಣದ ಹಜರತ್ ಟಿಪ್ಪು ಸ್ಮಾರಕ ಅಭಿವೃದ್ಧಿ, ಪೂರ್ಣವಾಗದ ಶಾದಿಮಹಲ್ ಸಮುದಾಯ
ಭವನಕ್ಕೆ 60 ಕೋಟಿ ಅನುದಾನ ಮೀಸಲು.

*ಕೃಷಿ ಪಂಪ್ ಸೆಟ್, ಕುಟೀರ ಜ್ಯೋತಿಗೆ ಉಚಿತ ವಿದ್ಯುತ್. ಇಂಧನ ಇಲಾಖೆಗೆ 12,878 ಕೋಟಿ ರೂಪಾಯಿ ಮೀಸಲು. ಶ್ರೀರಂಗಪಟ್ಟಣದ ಹಜರತ್ ಟಿಪ್ಪು ಸ್ಮಾರಕ ಅಭಿವೃದ್ಧಿ, ಪೂರ್ಣವಾಗದ ಶಾದಿಮಹಲ್ ಸಮುದಾಯ ಭವನಕ್ಕೆ 60 ಕೋಟಿ ಅನುದಾನ ಮೀಸಲು.

*ಅಲ್ಪಸಂಖ್ಯಾತ ಕಲ್ಯಾಣ ಅಭಿವೃದ್ಧಿಗೆ 1 ಸಾವಿರ ಕೋಟಿ,ೊಂದು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆಗೆ ನಿರ್ಧಾರ. ನಗರಪಾಲಿಕೆ ವ್ಯಾಪ್ತಿಯಲ್ಲಿ ನಗರ ಜ್ಯೋತಿ ಯೋಜನೆ.

*ಸ್ವಯಂ ಚಾಲಿತ ವಿದ್ಯುತ್ ಪ್ರಯೋಗಾಲಯ ಸ್ಥಾಪನೆ. ಉಚಿತ ವಿದ್ಯುತ್ ಗೆ 7,498 ಕೋಟಿ ರೂ. ಮೀಸಲು. ಲೋಕೋಪಯೋಗಿ ಇಲಾಖೆಗೆ 7,463 ಕೋಟಿ ರೂ.

*ಹಿರಿಯ ನಾಗರಿಕರ ವಯಸ್ಸನ್ನು 65ರಿಂದ 60ಕ್ಕೆ ಇಳಿಕೆ. ರಾಜ್ಯದ ಮೂರು ಕಡೆ ಮೆಗಾ ಪಾರ್ಕ್ ನಿರ್ಮಾಣ. ಮೈಸೂರು ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ ಕ್ರಮ.

*ಸೀಮೆಎಣ್ಣೆ ಬತ್ತಿ ಸ್ಟವ್ ಮೇಲಿನ ತೆರಿಗೆ ಶೇ.14.5ರಿಂದ 5.5ಕ್ಕೆ ಇಳಿಕೆ,ಎಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ ತಲಾ 15 ರೂ.ಗಳಿಗೆ 3 ಕೆಜೆ ಅಕ್ಕಿ. 10ರೂಪಾಯಿಯಂತೆ 2ಕೆಜಿ ಗೋಧಿ.

*ಬಾಗಲಕೋಟೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ. ಕೇಬಲ್ ಗಳಿಗೆ ಶೇ.5ರಷ್ಟು ತೆರಿಗೆ ವಿನಾಯ್ತಿ, ಮೊಬೈಲ್ ಚಾರ್ಜರ್ ತೆರಿಗೆ ಇಳಿಕೆ, ಸಿಗರೇಟ್, ತಂಬಾಕು, ಗುಟ್ಕಾ ಮೇಲಿನ ತೆರಿಗೆ ಶೇ.17ರಿಂದ 20ಕ್ಕೆ ಏರಿಕೆ. ಡಿಸೇಲ್, ಪೆಟ್ರೋಲ್ ಮೇಲಿನ ಸೆಸ್ ಶೇ.1ರಷ್ಟು ಏರಿಕೆ.

*ಅಂತ್ಯ ಸಂಸ್ಕಾರ ಸಹಾಯ ನಿಧಿ 1 ಸಾವಿರ ರೂಪಾಯಿಂದ 5 ಸಾವಿರಕ್ಕೆ ಹೆಚ್ಚಳ. ಕೂಡಲ ಸಂಗಮದಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆ. ಭತ್ತ, ಅಕ್ಕಿ, ಗೋಧಿ, ರಾಗಿ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. 500 ರೂ.ಒಳಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ.

*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪೀಠ ಸ್ಥಾಪನೆಗೆ 10 ಕೋಟಿ ರೂ.ಮಲೆನಾಡು ಪ್ರದೇಶಾಭಿವೃದ್ಧಿಗೆ 40 ಕೋಟಿ ರೂ. ಹೈದರಾಬಾದ್ ಪ್ರದೇಶಾಭಿವೃದ್ಧಿ ಮಂಡಳಿಗೆ 1 ಸಾವಿರ ಕೋಟಿ.

*ಪೋಡಿಮುಕ್ತ ಗ್ರಾಮ ನಿರ್ಮಾಣ ಯೋಜನೆ. ಕರಾವಳಿಯಲ್ಲಿ ಚಂಡಮಾರುತ ತಡೆ ಯೋಜನೆ. ಹೊನ್ನಾಳಿಯಲ್ಲಿ ಸಂತ ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿ. 27,700 ಧಾರ್ಮಿಕ ಸಂಸ್ಥೆಗಳ ವಾರ್ಷಿಕ ತಸ್ತೀಕು 36,00 ರೂ. ಹೆಚ್ಚಳ. ದೇವಾಲಯಗಳಲ್ಲಿ ಪ್ಲಾಸ್ಟಿಕ್ ಮುಕ್ತ.

*ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಗೆ 600 ಕೋಟಿ ರೂಪಾಯಿ. 2015-16ನೇ ಸಾಲಿನಲ್ಲಿ 5 ಸಾವಿರ ಸೈಟ್ ಹಂಚಿಕೆ. ಆನ್ ಲೈನ್ ನಲ್ಲಿ ಮ್ಯೂಟೇಶನ್ ಪ್ರಕ್ರಿಯೆ. ಬೃಹತ್ ದೇವಾಲಯ ಪೂರ್ಣಾಭಿವೃದ್ದಿ ಯೋಜನೆ ಜಾರಿ. ಕೊಲ್ಲೂರು, ಕುಕ್ಕೆ, ಮೈಸೂರಿನ ಚಾಮುಂಡಿಬೆಟ್ಟ, ಗಾಣಗಾಪುರದ ದತ್ತಾತ್ರೇಯ ಸೇರಿ ಒಟ್ಟು 6 ದೇವಸ್ಥಾನಗಳು ಯೋಜನೆಯಡಿಯಲ್ಲಿದೆ.

*ಎಸಿ ಮತ್ತು ಡಿಸಿ ಕಚೇರಿಯ ಆದೇಶಗಳು ಇನ್ಮುಂದೆ ಆನ್ ಲೈನ್ ನಲ್ಲೇ ಲಭ್ಯ. 15 ಜಿಲ್ಲಾಧಿಕಾರಿಗಳು, 25 ಉಪವಿಭಾಗಾಧಿಕಾರಿಗಳ ಕಚೇರಿಗಳು, 25 ತಹಶೀಲ್ದಾರ ಕಚೇರಿಗಳಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿ.

*ಆನ್ ಲೈನ್ ನಲ್ಲಿ ವಸತಿ ಮತ್ತು ಅರ್ಹತಾ ಪ್ರಮಾಣ ಪತ್ರ. ಕ್ರೂಸ್ ಟೂರಿಸಂ ಮತ್ತು ಮರೈನ್ ಟೂರಿಸಂ ಯೋಜನೆ. ಫೋನ್ ಡಾಕ್ಟರ್ ಕಾರ್ಯಕ್ರಮ ಜಾರಿ. ಕಾರವಾರ, ಹಂಪಿಯಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಸ್ಥಾಪನೆ.

*ಆನ್ ಲೈನ್ ನಲ್ಲಿ ವಸತಿ ಮತ್ತು ಅರ್ಹತಾ ಪ್ರಮಾಣ ಪತ್ರ. ಕ್ರೂಸ್ ಟೂರಿಸಂ ಮತ್ತು ಮರೈನ್ ಟೂರಿಸಂ ಯೋಜನೆ. ಫೋನ್ ಡಾಕ್ಟರ್ ಕಾರ್ಯಕ್ರಮ ಜಾರಿ. ಕಾರವಾರ, ಹಂಪಿಯಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಸ್ಥಾಪನೆ.

English summary
Karnataka Chief Minister Siddaramaiah, who also hold finance portfolio, presented budget for the year 2015-16 on Friday, 13th March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X