ಕರ್ನಾಟಕ ಬಜೆಟ್ 2014-15 ಮುಖ್ಯಾಂಶ

ಬೆಂಗಳೂರು, ಫೆ.14: ಕರ್ನಾಟಕ ರಾಜ್ಯದಲ್ಲಿ ಒಂದೇ ವರ್ಷದ ಅವಧಿಯಲ್ಲಿ ಮೂರನೇ ಬಾರಿ ಬಜೆಟ್ ಮಂಡನೆಯಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲೇ ರಾಜ್ಯ ಬಜೆಟ್ ಮಂಡನೆಯಾಗಿದ್ದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಫೆಬ್ರವರಿ 14ರ ಶುಕ್ರವಾರದಂದು ಬಜೆಟ್ ಮಂಡನೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಎರಡು ಬಜೆಟ್ ಗಳನ್ನು ಶುಕ್ರವಾರ(ಜು.12, ಫೆ.14) ರಂದೇ ಮಂಡಿಸಿದ್ದು ವಿಶೇಷ. ಯೋಜನಾ ಗಾತ್ರ 1.21 ಲಕ್ಷ ಕೋಟಿ ಯಾಗಿತ್ತು. ಸರಿಸುಮಾರು ಒಂದು ವರ್ಷದ ಆಸುಪಾಸಿನಲ್ಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡನೇ ಬಜೆಟನ್ನು ಇಂದು ಮಂಡನೆ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಮುಖ್ಯಮಂತ್ರಿಯಾಗಿ 2 ಬಾರಿ ಸೇರಿದಂತೆ ಒಟ್ಟು 9 ಬಾರಿ ಬಜೆಟ್ ಮಂಡನೆ ಮಾಡಿ ಅಪರೂಪದ ದಾಖಲೆ ಬರೆದಿದ್ದಾರೆ. ಸಿದ್ದರಾಮಯ್ಯ ಅವರು 12.30ಕ್ಕೆ ಬಜೆಟ್ ಮಂಡನೆ ವಿವರಗಳನ್ನು ಕ್ಷಣ ಕ್ಷಣಕ್ಕೆ ಈ ಪುಟದಲ್ಲಿ ನೀಡಲಾಗುತ್ತದೆ ತಪ್ಪದೇ ಓದುತ್ತೀರಿ...


Karnataka State Budget 2014-15 Live Updates

ಅಂತಿಮ ಮುಖ್ಯಾಂಶ; ಜಿಲ್ಲಾ ಕೇಂದ್ರಗಳಲ್ಲಿ ಜನತಾ ಸಿನಿಮಾ ಹಾಲ್ ಸ್ಥಾಪನೆ.
* ವೃದ್ಧಾಶ್ರಮಗಳಲ್ಲಿ ಮನರಂಜನೆಗಾಗಿ 1.5 ಕೋಟಿ ರು ವೆಚ್ಚದ ಯೋಜನೆ.
* ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರಕ್ಕೆ 5,986 ಕೋಟಿ ರು.
* ಗ್ರಾಮೀಣ ಆಭಿವೃದ್ಧಿ ಕ್ಷೇತ್ರಕ್ಕೆ 9,361 ಕೋಟಿ ರು.
* ಕಂದಾಯ ಇಲಾಖೆಗೆ 4, 293 ಕೋಟಿ ರು.
* ಜಲ ಸಂಪನ್ಮೂಲ ಕ್ಷೇತ್ರಕ್ಕೆ 11,349 ಕೋಟಿ ರು.
* ಕೃಷಿ ತೋಟಗಾರಿಕೆ ಇಲಾಖೆಗೆ 5,397 ಕೋಟಿ ರು.
* ಇಂಧನ ಕ್ಷೇತ್ರಕ್ಕೆ 11, 693 ಕೋಟಿ ರು.
*
ಶಿಕ್ಷಣ ಕ್ಷೇತ್ರಕ್ಕೆ 21, 305 ಕೋಟಿ ರು.
* ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ 6,023 ಕೋಟಿ ರು.
* ಸಮಾಜ ಕಲ್ಯಾಣ ಇಲಾಖೆಗೆ 6,475 ಕೋಟಿ ರು.
* ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 975 ಕೋಟಿ ರು.
* ಲೋಕೋಪಯೋಗಿ ಇಲಾಖೆಗೆ 6,634 ಕೋಟಿ ರು.
* ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 1,979 ಕೋಟಿ ರು.
* ಬಿಬಿಎಂಪಿ 1527 ಕೋಟಿ ರು.

2.25: ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 66.6 ಕೋಟಿ ರು
* ಕಾಗದದ ರೇಷನ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್.
* ಹೊಸ ಉದ್ದಿಮೆಗಳ ಸ್ಥಾಪನೆಗೆ 75 ಕೋಟಿ ರು.
* 36 ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 101 ಕೋಟಿ ರು ನಿರ್ಮಾಣ.

2.20: ಕನಕದಾಸ ಕಾವ್ಯ ಭಾಷಾಂತರಕ್ಕೆ 1 ಕೋಟಿ ರು.
* ಕನ್ನಡ ಸಾಹಿತ್ಯ ಪರಿಷತ್ ಶತಮನೋತ್ಸವ ಭವನಕ್ಕೆ 5 ಕೋಟಿ ರು.
* ವಿಧುರಾಶ್ವಥ ಸ್ವಾತಂತ್ರ್ಯ ಯೋಧರ ಸ್ಮಾರಕಕ್ಕೆ 1 ಕೋಟಿ ರು.
* ಬಿಬಿಎಂಪಿಗೆ ಒಟ್ಟಾರೆ 1527 ಕೋಟಿ ರು ಅನುದಾನ.

2.15: ಬೆಂಗಳೂರು ಹಜ್ ಭವನಕ್ಕೆ 17 ಕೋಟಿ ರು.
* ನಗರದ ಬೀದಿ ದೀಪ ನಿರ್ವಹಣೆಗೆ 10 ಕೋಟಿ ರು.
* ಮೈಸೂರಿನ ಇರ್ವಿನ್ ರಸ್ತೆ ಅಭಿವೃದ್ಧಿಗೆ 100 ಕೋಟಿ ರು.
* 22 ಹೊಸ ಐಟಿಐ ಕಾಲೇಜುಗಳ ಸ್ಥಾಪನೆ.

2.05: ಮಾಜಿ ಪೈಲ್ವಾನರಿಗೆ ಮಾಸಾಶನ 1500-3000 ರು.ಗೆ ಹೆಚ್ಚಳ.
* 25 ಹಳೆಯ ಗರಡಿ ಮನೆ ಪುನರುಜ್ಜೀವನಕ್ಕೆ ತಲಾ 2 ಲಕ್ಷ ರು.
* 10 ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ 25 ಕೋಟಿ ರು.
* ವಿಕಲಚೇತನರಿಗೆ ವಾಹನ ಖರೀದಿಗೆ 7 ಕೋಟಿ ರು.
* ಕೊಳಚೆ ರಹಿತ ನಗರ ಉದ್ದೇಶ 39 ನಗರಗಳ ಆಯ್ಕೆ.

1.55: ಹೊಸ ಪಾರ್ಕಿಂಗ್ ನೀತಿ ಅನುಷ್ಠಾನಕ್ಕೆ 10 ಕೋಟಿ ರು.
* ಬಿಬಿಎಂಪಿ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು.
* ವಿದ್ಯಾಸಿರಿ ಯೋಜನೆಗೆ 75 ಕೋಟಿ ರು ಮೀಸಲು.
* ಜಕ್ಕೂರು ವಿಮಾನ ನಿಲ್ದಾಣಕ್ಕೆ 2 ಕೋಟಿ ರು ಅನುದಾನ.
* ಗೌರಿಬಿದನೂರಿನ ಹೊಸೂರಿನಲ್ಲಿ ಎಚ್ಚೆನ್ ನೆನಪಿನ ಸ್ಮಾರಕಕ್ಕೆ 1 ಕೋಟಿ ರು.

1.50: 18 ತಿಂಗಳಲ್ಲಿ ಶಿರಾಡಿ ಘಾಟ್ ಶಾಶ್ವತ ದುರಸ್ತಿ.
* ನ್ಯಾಯಬೆಲೆ ಅಂಗಡಿಗಳಲ್ಲಿ ಚಹಾ ಪುಡಿ ಮಾರಾಟ.

1.45 : ಒಲಿಂಪಿಕ್ ಚಿನ್ನ ಪದಕ ವಿಜೇತರಿಗೆ 1 ಕೋಟಿ ರು, ಬೆಳ್ಳಿ ವಿಜೇತರಿಗೆ 50 ಲಕ್ಷ, ಕಂಚು 25 ಲಕ್ಷ ರು .
* ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತರಿಂದ 25 ಲಕ್ಷ ರು , ಬೆಳ್ಳಿ 15 ಲಕ್ಷ, ಕಂಚು 8 ಲಕ್ಷ ರು ಪ್ರೋತ್ಸಾಹ ಧನ.
* ರಾಷ್ಟ್ರೀಯ ಕ್ರೀಡಾ ವಿಜೇತರಿಗೂ ಬಹುಮಾನ, ಚಿನ್ನ 2 ಕೊಟಿ, ಬೆಳ್ಳಿ 1 ಕಂಚು 50 ಸಾವಿರ ರು.
* ಪತ್ರಿಕೋದ್ಯಮ, ಇಂಜಿನಿಯರ್, ಮೆಡಿಕಲ್ ಪಿಎಚ್ ಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್.
* ಲ್ಯಾಪ್ ಟಾಪ್ ವಿತರಣೆಗೆ 4 ಕೋಟಿ ರು ವೆಚ್ಚ.
* ಮೈಸೂರು ನಗರ ಅಭಿವೃದ್ಧಿಗೆ 100 ಕೋಟಿ ರು.

1.35: ಬೆಂಗಳೂರಿನ ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ ಜಂಕ್ಷನ್ ತನಕ ಎಲಿವೇಟೆಡ್ ಕಾರಿಡಾರ್.
* ಕೆಂಪೇಗೌಡ ಲೇಔಟ್ 5000 ನಿವೇಶನಕ್ಕಾಗಿ ಮಾರ್ಚ್ ನಿಂದ ಅರ್ಜಿ ಆಹ್ವಾನ.
* ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಣೆಗೆ 100 ಕೋಟಿ ರು ಮೀಸಲು.
* ‘ಕರ್ನಾಟಕ ಖಾದಿ ಬ್ರಾಂಡಿಂಗ್' ಯೋಜನೆ ಅನುಷ್ಠಾನಕ್ಕೆ ಯೋಜನೆ.
* ಕಾರ್ಕಳ, ಉಡುಪಿ, ಶೃಂಗೇರಿಗಳಲ್ಲಿ ತೆಂಗಿನ ನಾರಿನ ಅಭಿವೃದ್ಧಿ ನಿಗಮ.
* ಕೋಲಾರ ಮತ್ತು ಯಾದಗಿರಿಯಲ್ಲಿ ರೈಲ್ವೆ ಬೋಗಿ ಕಾರ್ಖಾನೆಗೆ ಸೌಲಭ್ಯ

1.30: ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸುಮಾರು 5,800 ಕೋಟಿ ರು ನಿಗದಿ.
* 1995ರೊಳಗೆ ಸಾಲ ಪಡೆದ ರೇಷ್ಮೆ ಬೆಳೆಗಾರರ ಸಾಲ ಮನ್ನಾ.
* ಹಿಪ್ಪುನೇರಳೆ ಕೆಜಿ 10 ರು ನಿಂದ 30 ರು ಪ್ರೋತ್ಸಾಹ ಧನ ಹೆಚ್ಚಳ.
* ಪಿಲಿಕುಳದಲ್ಲಿ ಓಷನೇರಿಯಂ ನಿರ್ಮಾಣ.

1.28: ಗೊಲ್ಲ ಮತ್ತು ಅಲೆಮಾರಿ ಸಮುದಾಯಕ್ಕೆ 50 ಕೋಟಿ ರು.
* 7 ಜಿಲ್ಲೆ 50 ತಾಲೂಕುಗಳಲ್ಲಿ ಅರಸು ಭವನ ನಿರ್ಮಾಣ.

1.25: ದೇವನಹಳ್ಳಿಯಲ್ಲಿ ವಿಶೇಷ ಆರ್ಥಿಕ ವಲಯದಡಿಯಲ್ಲಿ ಆಭರಣ ಪಾರ್ಕ್.
* ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಅನುದಾನ.
* ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ 100 ಹೊಸ ಹಾಸ್ಟೆಲ್.
* ಮೀನುಗಾರರಿಗೆ ಉಚಿತ ಸಿಮ್ ಕಾರ್ಡ್ , ಹವಾಮಾನ ಮಾಹಿತಿ.
* ಭಿಕ್ಷುಕರ ಕಾಲೋನಿಯ 164 ಎಕರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ.

1.20: ನಮ್ಮ ಮೆಟ್ರೋ ಎರಡನೇ ಹಂತಕ್ಕಾಗಿ 24,000 ಕೋಟಿ ರು ನೀಡಿಕೆ.
* ರಸ್ತೆ ವಿಸ್ತರಣೆ, ರಿಪೇರಿಗೆ 300 ಕೋಟಿ ರು ಅನುದಾನ.
* ಸೌರಶಕ್ತಿ ಪಂಪ್ ಸೆಟ್ ಬಳಕೆ ಸಬ್ಸಿಡಿ ಶೇ 75ಕ್ಕೆ ಏರಿಕೆ.
* ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 3 ಲಕ್ಷ ರು ತನಕ ಸಾಲ.

1.18: ಹೈದರಾಬಾದ್ -ಕರ್ನಾಟಕ ಭಾಗ ಅಭಿವೃದ್ಧಿಗೆ 1,037 ಕೋಟಿ ವಿಶೇಷ ಅನುದಾನ.
* ವರ್ಚುಯಲ್ ದೂರಶಿಕ್ಷಣ ವಿವಿ ಸ್ಥಾಪನೆ.
* 1.15 ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯತಿ.
* ವಿಜ್ಜಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ 2 ಶ್ರೇಷ್ಠ ಸಂಶೋಧನಾ ಕೇಂದ್ರಗಳ ಸ್ಥಾಪನೆ.
* ವೇಮನ ಕವಿ ಸಾಹಿತ್ಯ ಅಂತರ್ಜಾಲಕ್ಕೆ ಅಳವಡಿಕೆ 1 ಕೋಟಿ ರು.
* ಶಾಲೆಗಳಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿಕೆ.

 Karnataka State Budget 2014-15 Live Updates

1.15: ಅಪಘಾತಕ್ಕೊಳಗಾದ ನಿರ್ಗತಿಕರಿಗೆ ಸಿಎಂ ಸಾಂತ್ವನ ಪರಿಹಾರ ಯೋಜನೆ.
* ಹಿಮೋಫೆಲಿಯಾ ಸೇರಿದಂತೆ ಮಾರಕ ರೋಗಗಳಿಗೆ ಸೂಪರ್ ಸ್ಪೆಷ್ಪಾಲಿಟೀ ಆಸ್ಪತ್ರೆಯಲ್ಲಿ ಚಿಕಿತ್ಸೆ.
* ಅಪೌಷ್ಟಿಕತೆ ನಿವಾರಣೆಗೆ ಪುಷ್ಟಿ ಬಿಸ್ಕತ್ತು ನೀಡಿಕೆ.
* ಬೆಂಗಳೂರಿನಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣ.

1.10: ಬಿಡಿಎನಿಂದ ಕಡಿಮೆ ವೆಚ್ಚದ 8000 ಫ್ಲಾಟ್ ಗಳ ನಿರ್ಮಾಣ.

1.06: ಅತ್ಯಾಚಾರ ಪ್ರಕರಣ ಇತ್ಯರ್ಥಕ್ಕೆ 10 ತ್ವರಿತ ಗತಿ ಕೋರ್ಟ್ ಸ್ಥಾಪನೆ.
* ಕೆರೆ ಅಭಿವೃದ್ಧಿಗೆ 100 ಕೋಟಿ ರು ಮೀಸಲು.
* ಪುಟ್ ಪಾತ್ ನಿರ್ಮಾಣಕ್ಕಾಗಿ 100 ಕೊಟಿ ರು.

1.05: ಪತ್ರಕರ್ತರ ಕುಟುಂಬದವರಿಗೂ ಆರೋಗ್ಯ ವಿಮೆ.
* ನಿವೃತ್ತ ಪತ್ರಕರ್ತರ ಪಿಂಚಣಿ ಮೊತ್ತ ಹೆಚ್ಚಳ.
* ಮಾಧ್ಯಮ ಕೇಂದ್ರಕ್ಕಾಗಿ 5 ಕೋಟಿ ವಿನಿಯೋಗ.

1.02: ನೋಂದಣಿ ಮಿತಿ 5.5 ಲಕ್ಷ ರು ನಿಂದ 7.5ಲಕ್ಷ ರು ಗೆ ಏರಿಕೆ.
* 500 ಪಶು ವೈದ್ಯರ ನೇಮಕ.

12.55 : ಸುಗಂಧಿತ ಅಡಿಕೆ ತೆರಿಗೆ ಶೇ 14.5 ರಿಂದ 0.5 ಇಳಿಕೆ.
* ಎಥಾನಲ್ ಮೇಲಿನ ತೆರಿಗೆ ವಿನಾಯತಿ.
* ಬಿಯರ್ ಮೇಲಿನ ಅಬಕಾರಿ ಸುಂಕ ಶೇ 122 ರಿಂದ 135ಕ್ಕೆ ಏರಿಕೆ.
* ಹೊರ ರಾಜ್ಯದ ವಾಹನಗಳ ಪ್ರತಿ ಆಸನಕ್ಕೆ 500 ರು ತೆರಿಗೆ.
* ಭತ್ತ, ಗೋಧಿ ಬೆಳೆಕಾಳಿನ ಮೇಲಿನ ತೆರಿಗೆ ವಿನಾಯಿತಿ.
* ಬಾರ್, ರೆಸ್ಟೋರೆಂಟ್ ಗಳಲ್ಲಿನ ಮೌಲ್ಯ ವರ್ಧಿತ ತೆರಿಗೆ ಶೇ 5.5 ರಷ್ಟು.
* ಡಿಸ್ಟಲರಿ ಸನ್ನದು ಶುಲ್ಕ ಶೇ 50 ರಷ್ಟು ಏರಿಕೆ

12.54: ಹಾವೇರಿ ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು.
*
ಕಾರವಾರದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ.
*
ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ.
* ಆನೆ ಹಾವಳಿ ತಡೆಗೆ 212 ಕೋಟಿ ರು ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ.

12.51 : ಕೃಷಿ ಬೆಲೆ ಆಯೋಗ ರಚನೆಗೆ ಆದೇಶ.
* ಮೊಬೈಲ್ ಸಂದೇಶ ಮೂಲಕ ಹವಾಮಾನ ವರದಿ.

12.50: ಸರ್ಕಾರಿ ಪ್ರಾಥಮಿಕ ಶಿಕ್ಷಕರ ನೇಮಕ.
* ಖಾಲಿ ಇರುವ 9405 ಸರ್ಕಾರಿ ಪ್ರಾಥಮಿಕ ಶಿಕ್ಷಕರ ನೇಮಕ.
* ಕಾಲೇಜು ಮೂಲ ಸೌಕರ್ಯ ಅಭಿವೃದ್ಧಿಗೆ 3.27 ಕೋಟಿ ರು.
* ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ 17428 ಕೋಟಿ ರು.
* ಬಸವಾದಿ ಶರಣರ ವಚನ ತಿಳಿಸಲು 1 ಕೋಟಿ ರು.
* 2 ಕೋಟಿ ವೆಚ್ಚದಲ್ಲಿ ಮಾದರಿ ವಿಜ್ಞಾನ ಕಾಲೇಜು ಸ್ಥಾಪನೆ

12.45: 135 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ.
* ಕೃಷಿ ಭಾಗ್ಯ ಯೋಜನೆ 23 ಜಿಲ್ಲೆಗಳಲ್ಲಿ ಜಾರಿಗೆ.

12.44: ಗ್ರಾಮೀಣಾಭಿವೃದ್ಧಿ ಇಲಾಖೆಗೆ 9,631 ಕೋಟಿ ರು.
*
ಶಿಕ್ಷಣ 21,305 ಕೋಟಿ, ಇಂಧನ 11,603 ಕೋಟಿ ರು.
* ಜಲ ಸಂಪನ್ಮೂಲ 11,349 ಕೋಟಿ ರು.
* ಸಮಾಜ ಕಲ್ಯಾಣ 6,475 ಕೋಟಿ,
* ಆರೋಗ್ಯ ಕುಟುಂಬ ಇಲಾಖೆ 6023 ಕೋಟಿ ರು.

12.42 : ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕಾಗಿ 2.5 ಲಕ್ಷ ಮನೆ ನಿರ್ಮಾಣ.
12.41: ಒಕ್ಕಲಿಗರ ಕುರಿತ ಸರ್ವಜ್ಞನ ವಚನವನ್ನು ವಾಚಿಸಿದ ಸಿದ್ದರಾಮಯ್ಯ.
12.40 : 2014-15 ಸಾಲಿನ ಬಜೆಟ್ ಗಾತ್ರ 1,36,249 ಕೋಟಿ ರು.

12.35: ಬಜೆಟ್ ಯೋಜನಾ ಗಾತ್ರ 65,600 ಕೋಟಿ ರು.
ಸಮಯ 12.30 :
ಬಜೆಟ್ ಪ್ರತಿಯನ್ನು ಒಂದು ಬಾರಿ ಪರಾಮರ್ಶಿಸಿಕೊಂಡ ಸಿದ್ದರಾಮಯ್ಯ ಅವರು ವಿಧಾನಸೌಧ ಪ್ರವೇಶಿಸಿದ್ದಾರೆ.

* ರೇಸ್ ಕೋರ್ಸ್ ರಸ್ತೆಯಲ್ಲಿರುವ 'ಶಕ್ತಿ ಭವನ'ದಲ್ಲಿ ಕಳೆದ ಹದಿನೈದು ದಿನಗಳಿಂದ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದ ಅವರು, ಚಿಂತನ-ಮಂಥನ ಪ್ರಕ್ರಿಯೆಯನ್ನು ಬುಧವಾರ ಮಧ್ಯಾಹ್ನ ಅಂತಿಮಗೊಳಿಸಿತ್ತು.
* ಮೂಲಗಳ ಪ್ರಕಾರ ಈ ಬಾರಿ ಮೂಲಸೌಕರ್ಯ, ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಸಿಎಂ ಒತ್ತು ನೀಡಲಿದ್ದಾರೆ.
* ಮುಖ್ಯಮಂತ್ರಿಗಳ ಬಜೆಟ್ ಸಿದ್ಧತೆಯ ಅಂತಿಮ ಕಾರ್ಯದಲ್ಲಿ ಸರ್ಕಾರದ 220 ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದರೆ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ 14ನೇ ಬಾರಿಗೆ ಬಜೆಟ್ ಸಿದ್ಧತೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+