ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಸಿದ್ದರಾಮಯ್ಯ ಅವರು ಬುಧವಾರ (ಮಾರ್ಚ್ 15) 12ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ರಾಜಧಾನಿ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.[ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ]

ಬಿಬಿಎಂಪಿ ಸಾಲದ ಹೊರೆ, ಮೂಲ ಸೌಕರ್ಯ ಅಭಿವೃದ್ಧಿ, ಕಸ ವಿಲೇವಾರಿ, ನಮ್ಮಮೆಟ್ರೋ, ಟ್ರಾಫಿಕ್ ಜಾಮ್ ಸಮಸ್ಯೆ, ಜಲಮಂಡಳಿ ನೀರು ಪೂರೈಕೆ ಹೀಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನಿರೀಕ್ಷಿಸಲಾಗಿತ್ತು. ಬಿಬಿಎಂಪಿ, ಬಿಡಿಎ, ಬಿಎಂಆರ್ ಸಿಎಲ್, ಬಿಡಬ್ಲೂಎಸ್ಎಸ್ ಸಂಸ್ಥೆಗೆ ಎಷ್ಟು ಸಿಕ್ಕಿದೆ. ಮುಂದೆ ಓದಿ..[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]

* ಬೆಂಗಳೂರಿನ ಅಭಿವೃದ್ಧಿಗಾಗಿ ಒಟ್ಟಾರೆ 7300 ಕೋಟಿ ರು[ಬಜೆಟ್ 2017: 58,000 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ]

* 690 ಕೋಟಿ ರು ವೆಚ್ಚದಲ್ಲಿ ಆಯ್ದ 43 ರಸ್ತೆಗಳ ಅಭಿವೃದ್ಧಿ
* ಸಂಚಾರ ದಟ್ಟಣೆ ಇರುವ ಕಡೆ 12 ಕಾರಿಡಾರ್ ನಿರ್ಮಾಣಕ್ಕೆ 150 ಕೋಟಿ ರು
* ಪಾದಚಾರಿ ಮಾರ್ಗ ಅಭಿವೃದ್ಧಿಗೆ 200 ಕೋಟಿ ರು[ಬಜೆಟ್ LIVE: ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]
* ಬೃಹತ್ ಚರಂಡಿ ಅಭಿವೃದ್ಧಿಗಾಗಿ 300 ಕೋಟಿ ರು
* ಸ್ಕೈವಾಕ್ ಗಳ ನಿರ್ಮಾಣಕ್ಕೆ 80 ಕೋಟಿ ರು.[ಬಜೆಟ್ 2017: ರಾಮನಗರ, ದಾವಣಗೆರೆ, ಕೋಲಾರಗಳಲ್ಲಿ ಹೈಟೆಕ್ ಆಸ್ಪತ್ರೆ]
* ರಸ್ತೆ ಉಬ್ಬು,ಲೈನ್ ಮಾರ್ಕಿಂಗ್ ಜಂಕ್ಷನ್ ಅಭಿವೃದ್ಧಿಗೆ 200 ಕೋಟಿ ರು
* ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ
* ಕೋನದಾಸಪುರದ 166 ಎಕರೆ ವಿಸ್ತೀರ್ಣದ ನೂತನ ಟೌನ್ ಶಿಪ್
* ಬೆಳ್ಳಂದೂರು, ವರ್ತೂರು ಕೆರೆಗಳ ಅಭಿವೃದ್ಧಿ
* ಕೊಳಚೆ ಪ್ರದೇಶದ 30 /20 ನಿವೇಶನದ ನಿವಾಸಿಗಳಿಗೆ 10 ಸಾವಿರ ಲೀಟರ್ ಉಚಿತ ನೀರು

* ಹೆಬ್ಬಾಳ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಾಣ
* ಮೇಲ್ಸೇತುವೆ ಅಗಲೀಕರಣಕ್ಕೆ 88 ಕೋಟಿ ರು
* ಸಬ್ ಅರ್ಬನ್ ರೈಲ್ವೆಗೆ 345 ಕೋಟಿ ರು.[ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೇನಿದೆ?]

* ಟೆಂಡರ್ ಶ್ಯೂರ್ ಅಡಿಯಲ್ಲಿ 250 ಕೋಟಿ ರು ವೆಚ್ಚದಲ್ಲಿ 25 ಕಿ.ಮೀ ಅಭಿವೃದ್ಧಿ
* ಬಿಬಿಎಂಪಿ ವ್ಯಾಪಿಯ 43 ಪ್ರಮುಖ ರಸ್ತೆ 690 ಕೋಟಿ ರು ಮೇಲ್ದರ್ಜೆಗೆ.[ಕಾರವಾರದಲ್ಲಿ 1,500 ಕೋಟಿ ರು. ವೆಚ್ಛದಲ್ಲಿ ಹೊಸ ಬಂದರು]
* ಬೆಂಗಳೂರಿಗೆ ಹೊಸದಾಗಿ 12 ಎಲಿವೇಟೆಡ್ ರಸ್ತೆಗಳು
* ಬೆಂಗಳೂರಿನಲ್ಲಿ 198 ನಮ್ಮ ಕ್ಯಾಂಟೀನ್ ತೆರೆಯಲಾಗುತ್ತದೆ.[ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಮಂಜೂರು]
* ಪರಿಸರ ಸಂಶೋಧನೆಗಾಗಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಸ್ಥಾಪನೆ ಹಾಗೂ ಬೆಂಗಳೂರು ಸಮೀಪದ ಚಿಕ್ಕಮಣ್ಣುಗುಡ್ಡ ಸಂಶೋಧನೆ
* ಬೆಂಗಳೂರಿನ ಇಂದಿರಾನಗರದಲ್ಲಿ 35 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ಎಂ ಡೊಕ್ರೈನಾಲಜಿಯ ಹೊಸ ಆಸ್ಪತ್ರೆ ನಿರ್ಮಾಣ.
* 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮಿಂಟೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಭಿವೃದ್ಧಿ
* ಬೆಂಗಳೂರಿನ ಕ್ಷಯರೋಗ ಆಸ್ಪತ್ರೆ ಆವರಣದಲ್ಲಿ 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಚರ್ಮರೋಗ ಸಂಸ್ಥೆ ಸ್ಥಾಪನೆ.
* ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಎಲ್ಲಾ ಕಛೇರಿಗಳನ್ನು ಹಾಗೂ ಒಂದು ಸಭಾಂಗಣವನ್ನು ಒಳಗೊಂಡ ಮೌಲಾನಾ ಅಬುಲ್ ಕಲಾಂ ಆಜಾದ್ ಭವನ, ಉರ್ದು
ಕನ್ವೆನ್ಷನ್ ಹಾಲ್ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.
* ವಕ್ಫ್ ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ಪ್ರಾರಂಭ.
* ಬೆಂಗಳೂರು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ದುಡಿಯುವ ಮಹಿಳೆಯರಿಗಾಗಿ ತಲಾ 2 ಕೋಟಿ ರೂ. ವೆಚ್ಚದಲ್ಲಿ 10 ಉದ್ಯೋಗಸ್ಥ ಮಹಿಳಾ ವಸತಿ ನಿಲಯ ಪ್ರಾರಂಭ.
* ವಿವಿಧ ವಸತಿ ಯೋಜನೆಗಳಡಿ, 7 ಲಕ್ಷ ಮನೆಗಳ ಮಂಜೂರಾತಿ. ಅವುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ, ಬೆಂಗಳೂರಿನಲ್ಲಿ 1 ಲಕ್ಷ ಮನೆಗಳ ನಿರ್ಮಾಣ.

* ತಡೆರಹಿತ ವಾಹನಗಳ ಸಂಚಾರಕ್ಕಾಗಿ ಆಯ್ದ 9 ವಾಹನ ದಟ್ಟಣೆ ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್‌ಗಳ ನಿರ್ಮಾಣಕ್ಕೆ 421 ಕೋಟಿ ರೂ.
* ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ ಬಿಬಿಎಂಪಿಗೆ 150 ಕೋಟಿ ರೂ.
* ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೃಹತ್ ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರೂ.

ನಮ್ಮ ಮೆಟ್ರೋ:
ಕಾಮಗಾರಿಯ ರೀಚ್-4ರ ವಿಸ್ತರಣೆ (ಪುಟ್ಟೇನಹಳ್ಳಿಯಿಂದ ಅಂಜನಾಪುರ) ಮತ್ತು ರೀಚ್-2ರ
ವಿಸ್ತರಣೆಯು (ಮೈಸೂರು ರಸ್ತೆಯಿಂದ ಕೆಂಗೇರಿ) ಕಾಮಗಾರಿಗಳು ಪ್ರಗತಿಯಲ್ಲಿ.
* ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-20 ಅಡಿ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಜಂಕ್ಷನ್ (17 ಕಿ.ಮೀ.ಉದ್ದ) ವರೆಗಿನ ಹೆಚ್ಚುವರಿ ಮಾರ್ಗಕ್ಕೆ ವಿನೂತನ
ವಿಧಾನಗಳಿಂದ ಅನುದಾನ, 4200 ಕೋಟಿ ರೂ. ಘಟಕ ವೆಚ್ಚದಲ್ಲಿ ಯೋಜನೆಗೆ ಚಾಲನೆ.

* ಹಂತ-3ರ ಕಾರ್ಯಸಾಧ್ಯತೆ ಅಧ್ಯಯನ ಪೂರ್ಣ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ
ನಿಲ್ದಾಣಕ್ಕೆ ಸೂಕ್ತ ಸಂಪರ್ಕ ಕಲ್ಪಿಸುವ ಮಾರ್ಗ ಶೀಘ್ರವೇ ಅಂತಿಮ.

* ಬೆಂಗಳೂರಿನ ಆಯ್ದ ಕ್ಲಸ್ಟರ್‌ಗಳಲ್ಲಿ ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಪ್ರಾರಂಭ.

ವಸತಿ
* 3,000 ಫ್ಲ್ಯಾಟ್‌ಗಳ ನಿರ್ಮಾಣ ಮತ್ತು ಹಂಚಿಕೆ 2017-18ನೇ ಸಾಲಿನಲ್ಲಿ ಪೂರ್ಣ; ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5,000 ನಿವೇಶನಗಳ ಹಂಚಿಕೆ.
* ಕೋನದಾಸಪುರ ಗ್ರಾಮದ 166 ಎಕರೆ ಭೂಮಿಯಲ್ಲಿ ನವೀನ ಮಾದರಿಯ ಟೌನ್‌ಶಿಪ್ ಅಭಿವೃದ್ಧಿ.

ರಸ್ತೆ
* 350 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆಯ ಮೂಲಕ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ. ಪ್ರಮುಖ ಅರ್‍ಟೀರಿಯಲ್ ರಸ್ತೆ
ನಿರ್ಮಾಣ; ಈ ರಸ್ತೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಯ್ದ 5 ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳ ಅಭಿವೃದ್ಧಿ.

ಕೆರೆ
*42 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 10 ಕೆರೆಗಳ ಸಮಗ್ರ ಅಭಿವೃದ್ಧಿ ಪೂರ್ಣ;
* ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ.
* ಹೊರವರ್ತುಲ ರಸ್ತೆಯ ಹೆಬ್ಬಾಳ ಜಂಕ್ಷನ್ ನಲ್ಲಿ ಕೆಳಸೇತುವೆ ನಿರ್ಮಾಣ ಹಾಗೂ ಮೇಲು ಸೇತುವೆಯ ಅಗಲೀಕರಣ- 88 ಕೋಟಿ ರೂ.
* 44 ಕೋಟಿ ರೂ. ವೆಚ್ಚದ ಹೊರವರ್ತುಲ ರಸ್ತೆ ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಮೇಲು ಸೇತುವೆ ಜೂನ್ 2017ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ.

* ಬಿ.ಎಂ.ಆರ್.ಸಿ.ಎಲ್ ಸಹಯೋಗದೊಂದಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್‌ಗಳ ಅಭಿವೃದ್ಧಿ.

* ಬೆಂಗಳೂರು ನೀರು ಸರಬರಾಜು ಒಳ ಚರಂಡಿ ಮಂಡಳಿ ನೀರಿನ ತಾಂತ್ರಿಕ ಹಾಗೂ ವಾಣಿಜ್ಯ ಸೋರಿಕೆಯನ್ನು 2017-18ರ ಅಂತ್ಯದಲ್ಲಿ ಶೇ.40ಕ್ಕೆ ಇಳಿಸುವ ಗುರಿ.
* ನಗರದ 110 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ- 1,886 ಕೋಟಿ ರೂ.
* ಜೈಕಾ ಸಹಾಯದೊಂದಿಗೆ 5052 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ 5ನೇ ಹಂತ ಹಾಗೂ 110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಗೆ ಚಾಲನೆ;
* 775 ದಶಲಕ್ಷ ಲೀಟರ್ ಕುಡಿಯುವ ನೀರು ಕಾವೇರಿ ನದಿಯಿಂದ ಲಭ್ಯ.
* ನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಸಾಮರ್ಥ್ಯ ಹೆಚ್ಚಿಸಲು ಮೆಗಾಸಿಟಿ ಹಾಗೂ ಅಮೃತ್ ಯೋಜನೆಯಡಿ ಒಟ್ಟು 1338 ಕೋಟಿ ರೂ. ವೆಚ್ಚದಲ್ಲಿ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಆರಂಭ.
* ಕೊಳಚೆ ಪ್ರದೇಶದ 30 X 20 ನಿವೇಶನಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಪ್ರತಿ ತಿಂಗಳು ಉಚಿತವಾಗಿ 10,000 ಲೀಟರ್ ನೀರು ಪೂರೈಕೆ ಹಾಗೂ ಈ ನಿವಾಸಿಗಳ ಬಾಕಿ ಬಿಲ್ಲು ಮನ್ನಾ.
* ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಕ್ಕೆ ಕ್ರಮ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರದಟ್ಟಣೆ ತಗ್ಗಿಸಲು ವಿಮಾನ ನಿಲ್ದಾಣದ 2ನೇ ರನ್‌ವೇ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ; 2ನೇ ಟರ್ಮಿನಲ್ ನಿರ್ಮಾಣ.

* ಬೆಂಗಳೂರನ್ನು ಭಾರತದ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿಸುವ ಗುರಿ.

* ದಾಬಸಪೇಟೆಯಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಸ್ಥಾಪನೆಗೆ ಬೆಂಗಳೂರಿನ ಕಾಸಿಯಾ ಸಂಸ್ಥೆಗೆ 5 ಕೋಟಿ ರೂ. ವಿಶೇಷ ಅನುದಾನ.

* 30 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಗ್ಯಾಲರಿ ಕಟ್ಟಡ ಕಾಮಗಾರಿಗೆ ಚಾಲನೆ.

* ಬೆಂಗಳೂರಿನ ಐಐಐಟಿ ಸಂಸ್ಥೆಯಲ್ಲಿ ಯಾಂತ್ರಿಕ ಬುದ್ಧಿಶಕ್ತಿ ಮತ್ತು ರೋಬೋಟಿಕ್ಸ್ ಕೇಂದ್ರ ಸ್ಥಾಪನೆಗೆ ಕ್ರಮ. - 5 ಕೋಟಿ ರೂ.

* ಬೆಂಗಳೂರು ಕೇಂದ್ರ ಕಾರಾಗೃಹದ 3ನೇ ಹಂತದ ಮಹಿಳಾ ಮತ್ತು ಸಜಾಬಂಧಿಗಳ ಕಾರಾಗೃಹದ ಕಾಮಗಾರಿಗೆ ಚಾಲನೆ.

* ಬೆಂಗಳೂರಿನಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಲು, 01/04/2018 ರಿಂದ ಜಾರಿಗೆ ಬರುವಂತೆ ಎರಡು ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರದ್ದುಗೊಳಿಸಿ ಅದರ ಬದಲು
ನಾಲ್ಕು ಸ್ಟ್ರೋಕ್ ಎಲ್‌ಪಿಜಿಯ 10,000 ಆಟೋ ರಿಕ್ಷಾಗಳಿಗೆ ಪ್ರತಿ ಆಟೋ ರಿಕ್ಷಾಗೆ 30,000 ರೂ.ಗಳ ಸಹಾಯ ಧನ- 30 ಕೋಟಿ ರೂ.

* ಬಿ.ಎಂ.ಟಿ.ಸಿ.ಯಿಂದ 3,000 ಹೊಸ ಬಸ್ಸುಗಳ ಸೇರ್ಪಡೆಗೆ ಕ್ರಮ;
ಬಸ್‌ಗಳ ಖರೀದಿಗೆ ಬಿಎಂಟಿಸಿ ಪಡೆಯುವ ಸಾಲ ಮತ್ತು ಬಡ್ಡಿಯ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಬಸ್ ಖರೀದಿ ಪ್ರಕ್ರಿಯೆಗೆ ಬೆಂಬಲ.

* ಮಹಿಳಾ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ. ಮೊಬೈಲ್ ಅಪ್ಲಿಕೇಷನ್ ಹೊಸದಾಗಿ ಎಸ್‌ಒಎಸ್ಬ ಟನ್ ಮತ್ತು ಟ್ರಾಕಿಂಗ್ ಸೌಲಭ್ಯ ಅಳವಡಿಕೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah presented the State budget for 2017-18 on Wednesday, March 1, 2017. What did Bengaluru (Bangalore) get. Here are the details.
Please Wait while comments are loading...