Karuppu ಬ್ಲಾಕ್‌ಬಸ್ಟರ್ ಸಕ್ಸಸ್: ಕ್ಯಾಮೆರಾಮನ್‌ಗೆ ದುಬಾರಿ ಬ್ಯಾಟ್‌ಮ್ಯಾನ್ ಎಡಿಷನ್ ಕಾರ್ ಗಿಫ್ಟ್ ಕೊಟ್ಟ ನಟ ಸೂರ್ಯ
ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಅಭಿನಯದ, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಕರುಪ್ಪು' (Karuppu) ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಚಿತ್ರತಂಡದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಚಿತ್ರದ ಈ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಪ್ರಮುಖ ಕಾರಣರಾದ ತಾಂತ್ರಿಕ ಬಳಗಕ್ಕೆ ನಟ ಸೂರ್ಯ ಅವರು ವಿಶೇಷವಾಗಿ ಧನ್ಯವಾದ ತಿಳಿಸುತ್ತಿದ್ದಾರೆ. ಜೊತೆಗೆ ಈ ಸಿನಿಮಾ ಪ್ರಮುಖ ವ್ಯಕ್ತಿಯೊಬ್ಬರಿಗೆ ದುಬಾರಿ ಕಾರನ್ನು ಸೂರ್ಯ ಗಿಫ್ಟ್ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಚಿತ್ರದ ಅದ್ಭುತ ದೃಶ್ಯ ವೈಭವವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಪ್ರಸಿದ್ಧ ಛಾಯಾಗ್ರಾಹಕ (DOP) ಜಿ.ಕೆ.ವಿಷ್ಣು ಅವರಿಗೆ ನಟ ಸೂರ್ಯ ಬಿಗ್ ಸರ್ಪ್ರೈಸ್ ನೀಡಿದ್ದಾರೆ. 'ಕರುಪ್ಪು' ಚಿತ್ರದ ಯಶಸ್ಸಿನ ನೆನಪಿಗಾಗಿ ಮತ್ತು ಅವರ ಅದ್ಭುತ ಕೆಲಸಕ್ಕೆ ಮೆಚ್ಚುಗೆಯ ಸಂಕೇತವಾಗಿ, ಸೂರ್ಯ ಅವರು ವಿಷ್ಣು ಅವರಿಗೆ ಅತ್ಯಂತ ಸ್ಟೈಲಿಶ್ ಆಗಿರುವ ಹೊಚ್ಚ ಹೊಸ ಮಹೀಂದ್ರಾ BE 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಸಿನಿಮಾ ಮಾರುಕಟ್ಟೆಯಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ಈ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದ ವಿಷ್ಣು ಅವರ ಸಂತಸದ ಕ್ಷಣಗಳ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಚಿತ್ರರಂಗದ ಪ್ರಮುಖರು ಹಾಗೂ ಅಭಿಮಾನಿಗಳು ಸೂರ್ಯ ಅವರ ಈ ಉದಾರ ಗುಣಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಕಾರಿನ ಬೆಲೆ & ಫೀಚರ್ಸ್
ನಟ ಸೂರ್ಯ ಅವರು ತಮ್ಮ ಸಿನಿಮಾದ ಛಾಯಾಗ್ರಾಹಕರಿಗೆ ಗಿಫ್ಟ್ ನೀಡಿರುವ ಮಹೀಂದ್ರಾ BE 6 ಬ್ಯಾಟ್‌ಮ್ಯಾನ್ ಎಡಿಷನ್ ಅತ್ಯಂತ ವಿಶಿಷ್ಟವಾದ ಎಲೆಕ್ಟ್ರಿಕ್ ಕಾರಾಗಿದೆ. ಮಹೀಂದ್ರಾ ಸಂಸ್ಥೆಯು 'ವಾರ್ನರ್ ಬ್ರದರ್ಸ್' ಕಂಪನಿಯ ಜೊತೆಗೂಡಿ, ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಪ್ರಸಿದ್ಧ 'ದಿ ಡಾರ್ಕ್ ನೈಟ್' ಬ್ಯಾಟ್‌ಮ್ಯಾನ್ ಸಿನಿಮಾದ ಥೀಮ್ ಆಧಾರದ ಮೇಲೆ ಈ ಲಿಮಿಟೆಡ್ ಎಡಿಷನ್ ಕಾರನ್ನು ವಿನ್ಯಾಸಗೊಳಿಸಿದೆ.
ಆರಂಭದಲ್ಲಿ ಈ ಕಾರನ್ನು ಕೇವಲ 300 ಯುನಿಟ್‌ಗಳಷ್ಟೇ ತಯಾರಿಸಲು ಯೋಜಿಸಲಾಗಿತ್ತು. ಆದರೆ ಬ್ಯಾಟ್‌ಮ್ಯಾನ್ ಅಭಿಮಾನಿಗಳಿಂದ ಭಾರಿ ಬೇಡಿಕೆ ಬಂದಿದ್ದರಿಂದ ಇದರ ಉತ್ಪಾದನೆಯನ್ನು 999 ಯುನಿಟ್‌ಗಳಿಗೆ ಹೆಚ್ಚಿಸಲಾಗಿದೆ. ಪ್ರತಿ ಕಾರಿನ ಡ್ಯಾಶ್‌ಬೋರ್ಡ್ ಮೇಲೂ 001ರಿಂದ 999ರವರೆಗಿನ ವಿಶಿಷ್ಟ ಸಂಖ್ಯೆಯ ಬ್ಯಾಡ್ಜ್ ಇರಲಿದೆ. ಇದು BE 6 ಸರಣಿಯಲ್ಲೇ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಮಾದರಿಯಾಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ ಸರಿಸುಮಾರು ₹30 ಲಕ್ಷ ಎನ್ನಲಾಗಿದೆ.
ಬ್ಯಾಟ್‌ಮ್ಯಾನ್ ಸ್ಟೈಲ್ ವಿನ್ಯಾಸ
ಕಾರಿನ ವೀಲ್ ಕ್ಯಾಪ್‌ಗಳು, ಮುಂಭಾಗದ ಕ್ವಾರ್ಟರ್ ಪ್ಯಾನೆಲ್‌ಗಳು, ಹಿಂಭಾಗದ ಬಂಪರ್ ಮತ್ತು ಕಿಟಕಿಗಳ ಮೇಲೆ ಬ್ಯಾಟ್‌ಮ್ಯಾನ್‌ನ ಅಧಿಕೃತ ಲೋಗೋವನ್ನು ಅತ್ಯಂತ ಸ್ಟೈಲಿಶ್ ಆಗಿ ಅಳವಡಿಸಲಾಗಿದೆ. ಕಾರಿನ ಪ್ಯಾನೋರೊಮಿಕ್ ಸನ್‌ರೂಫ್ ಮೇಲೆಯೂ ಬ್ಯಾಟ್ ಲೋಗೋ ಮೂಡಿಬರುವಂತೆ ಡಿಸೈನ್ ಮಾಡಲಾಗಿದೆ. ಇದು ಕಂಪ್ಲೀಟ್ ಕಡು ಕಪ್ಪು ಬಣ್ಣದ (Stealth Black) ವಿನ್ಯಾಸವನ್ನು ಹೊಂದಿದ್ದು, ಸಿ-ಶೇಪ್ಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಶಾರ್ಪ್ ಬಾಡಿ ಲೈನ್‌ಗಳೊಂದಿಗೆ ರಸ್ತೆಯಲ್ಲಿ ಸೂಪರ್ ಹೀರೋ ಕಾರಿನಂತೆ ಕಾಣುತ್ತದೆ.
ಕಾರಿನ ಇಂಟೀರಿಯರ್ ಅನ್ನು ಪ್ರೀಮಿಯಂ ಸೂಡೆಡ್ ಮತ್ತು ಲೆದರ್‌ನಿಂದ ಅಲಂಕರಿಸಲಾಗಿದ್ದು, ಹೆಡ್‌ರೆಸ್ಟ್‌ಗಳ ಮೇಲೆ ಬ್ಯಾಟ್‌ಮ್ಯಾನ್ ಲೋಗೋವನ್ನು ಕೆತ್ತಲಾಗಿದೆ. ಸೀಟುಗಳ ಹೊಲಿಗೆಗೆ 'ಗೋಲ್ಡ್ ಸೆಪಿಯಾ' ದಾರ ಬಳಸಲಾಗಿದೆ. ಕಾರಿನ ಸ್ಟೀರಿಂಗ್ ವೀಲ್, ಫೈಟರ್ ಜೆಟ್ ಮಾದರಿಯ ಟಾಗಲ್ ಸ್ವಿಚ್‌ಗಳು ಮತ್ತು ಕಂಟ್ರೋಲರ್‌ಗಳಿಗೆ ಪ್ರೀಮಿಯಂ ಚಿನ್ನದ ಬಣ್ಣದ ಕೋಟಿಂಗ್ ನೀಡಲಾಗಿದೆ. ಇದರ ಕೀ ಫೋಬ್ ಕೂಡ ಬ್ಯಾಟ್‌ಮ್ಯಾನ್ ಥೀಮ್‌ನಲ್ಲೇ ಇರಲಿದೆ.
ಇದು ಕೇವಲ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದರ ಮೋಟಾರ್ 228bhp ಇಂದ 282bhpವರೆಗೆ ಪವರ್ ಉತ್ಪಾದಿಸುತ್ತದೆ. ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಸೂಪರ್ ಕಾರ್ ಗರಿಷ್ಠ 683 ಕಿ.ಮೀವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹೈ-ಕೆಪಾಸಿಟಿ ಡಿಸಿ ಫಾಸ್ಟ್ ಚಾರ್ಜರ್ ಬಳಸಿದರೆ, ಕೇವಲ 20 ನಿಮಿಷಗಳಲ್ಲಿ ಶೇ.20ರಿಂದ ಶೇ.80ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಎರಡು ದೊಡ್ಡ 12.3 ಇಂಚಿನ ಎಚ್‌ಡಿ ಸ್ಕ್ರೀನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬಿಲ್ಟ್-ಇನ್ ಚಾಟ್‌ಜಿಪಿಟಿ, ಅಲೆಕ್ಸಾ ಮತ್ತು ಪ್ರೀಮಿಯಂ ಸರೌಂಡ್ ಸೌಂಡ್ ಸಿಸ್ಟಮ್ ಇರಲಿದೆ.
ಇದು ಭಾರತ್ NCAP ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದ್ದು, 6 ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS (ಸುಧಾರಿತ ಚಾಲನಾ ಸಹಾಯ ವ್ಯವಸ್ಥೆ) ತಂತ್ರಜ್ಞಾನವನ್ನು ಹೊಂದಿದೆ. ಸಿನಿಮಾ ಪ್ರಿಯರಿಗೆ ಮತ್ತು ವಿಶಿಷ್ಟ ಕಾರುಗಳ ಕಲೆಕ್ಷನ್ ಹೊಂದಲು ಇಷ್ಟಪಡುವವರಿಗೆ ಇದು ಅತ್ಯಂತ ಲಕ್ಸುರಿಯಸ್ ಆದ ಇವಿ ಆಯ್ಕೆಯಾಗಿದೆ.













Click it and Unblock the Notifications