Phil Salt: ಫೈನಲ್‌ ಹೊತ್ತಲ್ಲೇ ಆರ್‌ಸಿಬಿಯಿಂದ ಸ್ಟಾರ್ ಆಟಗಾರ ಔಟ್‌..

RCB Vs GT IPL 2026 Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆಯಲಿರುವ ಐಪಿಎಲ್‌ 2026ರ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್‌ ತಂಡಗಳು ಮುಮುಖಿಯಾಗಲಿವೆ. ಈ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಓಪನರ್ ಫಿಲ್ ಸಾಲ್ಟ್ ಆಡುವ ಸಾಧ್ಯತೆ ಕಡಿಮೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿ ಅಭಿಮಾನಿಗಳಲ್ಲಿ ಫಿಲ್ ಸಾಲ್ಟ್ ಅವರ ಲಭ್ಯತೆಯ ಬಗ್ಗೆ ತೀವ್ರ ಕುತೂಹಲವಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಫಿಲ್ ಸಾಲ್ಟ್ ಫೈನಲ್ ಪಂದ್ಯದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ. ಕಳೆದ ಎರಡು ದಿನಗಳಲ್ಲಿ ಅವರು ಯಾವುದೇ ಅಭ್ಯಾಸ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಕೈಬೆರಳುಗಳಿಗೆ ಯಾವುದೇ ಬ್ಯಾಂಡೇಜ್ ಇರಲಿಲ್ಲವಾದರೂ, ಪೂರ್ಣ ಪ್ರಮಾಣದಲ್ಲಿ ಅಭ್ಯಾಸದಲ್ಲಿ ತೊಡಗಿಕೊಳ್ಳದ ಕಾರಣ ಅವರು ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

Phil Salt Likely to Miss IPL 2026 Final RCB Playing XI vs Gujarat Titans Revealed Know details

ಗಾಯಕ್ಕೆ ಒಳಗಾದ ಫಿಲ್ ಸಾಲ್ಟ್

ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಇತ್ತೀಚೆಗಷ್ಟೇ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಬೆರಳಿನ ಗಾಯಕ್ಕೆ ಒಳಗಾದ ನಂತರ ಅವರು ಆಡಿಲ್ಲ. ಅವರು ಸ್ಕ್ಯಾನಿಂಗ್ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ದೇಶ ಇಂಗ್ಲೆಂಡ್‌ಗೆ ಮರಳಿದ್ದರಿಂದ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಜೇಕಬ್ ಬೆಥೆಲ್ ಅವರನ್ನು ವಿರಾಟ್ ಕೊಹ್ಲಿ ಅವರ ಆರಂಭಿಕ ಜೊತೆಗಾರನಾಗಿ ಪ್ಲೇಯಿಂಗ್ 11ಗೆ ಸೇರಿಸಿಕೊಂಡಿತ್ತು.

ಟೂರ್ನಿಯಿಂದ ಹೊರನಡೆದ ಬೆಥೆಲ್

ಬಳಿಕ ಕೇಕಬ್ ಬೆಥೆಲ್ ಕೂಡ ಬೆರಳಿನ ಗಾಯಕ್ಕೆ ಒಳಗಾಗಿದ್ದು, ಈ ಬಾರಿಯ ಟೂರ್ನಿಯಿಂದಲೇ ಹೊರನಡೆದಿದ್ದಾರೆ. ಇದು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಟೂರ್ನಿಯ ನಿರ್ಣಾಯಕ ಹಂತದಲ್ಲಿ ಫಿಲ್ ಸಾಲ್ಟ್ ಅವರ ಫಿಟ್‌ನೆಸ್ ಮತ್ತು ಆರಂಭಿಕ ಜೋಡಿಯ ಸಂಯೋಜನೆಯ ಬಗ್ಗೆ ಮ್ಯಾನೇಜ್‌ಮೆಂಟ್ ಚಿಂತನೆಯಲ್ಲಿತ್ತು. ಆಗ ಆ ಸ್ಥಾನವನ್ನು ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ವಹಿಸಲಾಗಿದ್ದು, ಅವರು ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡುಬಂದಿದ್ದಾರೆ.

ಸಾಲ್ಟ್‌ ಸ್ಥಾನಕ್ಕೆ ವೆಂಕಟೇಶ್‌ ಅಯ್ಯರ್..

ಈಗಲೂ ಸಹ ಫಿಲ್‌ ಸಾಲ್ಟ್‌ ಫಿಟ್ನೆಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದ್ದರಿಂದ ಇಂದಿನ ಫೈನಲ್‌ ಪಂದ್ಯದಲ್ಲೂ ಸಹ ಅವರ ಸ್ಥಾನದಲ್ಲಿ ವೆಂಕಟೇಲ್ ಅಯ್ಯರ್ ಅವರೇ ಆಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಯಾಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಅವರಿಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.

ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್. ಇಂಪ್ಯಾಕ್ಟ್ ಪ್ಲೇಯರ್: ರೊಮಾರಿಯೋ ಶೆಫರ್ಡ್.

ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್ 11: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್. ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ತೆವಾಟಿಯಾ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೇಕಬ್ ಡಫಿ ಜೋಡಿ ಜಿಟಿ ತಂಡದ ಆರಂಭಿಕರಾದ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಬೇಗನೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಫೈನಲ್ ಪಂದ್ಯದಲ್ಲೂ ಆರ್‌ಸಿಬಿ ಬೌಲರ್‌ಗಳು ಗಿಲ್, ಸುದರ್ಶನ್ ಹಾಗೂ ಬಟ್ಲರ್ ಅವರನ್ನು ಪವರ್‌ಪ್ಲೇನಲ್ಲೇ ಪೆವಿಲಿಯನ್‌ಗೆ ಅಟ್ಟಿದರೆ, ಗುಜರಾತ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಸುಲಭವಾಗಿ ಟ್ರೋಫಿ ಗೆಲ್ಲಬಹುದು.

ಅಹಮದಾಬಾದ್‌ ಹವಾಮಾನ ವರದಿ

ಹವಾಮಾನ ಇಲಾಖೆ ಪ್ರಕಾರ ಇಂದು ಅಹಮದಾಬಾದ್‌ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ. ಇದು ಐಪಿಎಲ್‌ ಅಭಿಮಾನಿಗಳಿಗೆ ದೊಡ್ಡ ಸಮಾಧಾನದ ಸಂಗತಿಯಾಗಿದೆ. ಇಲ್ಲಿ ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು ಸುಮಾರು 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಪಂದ್ಯದ ಬಂತರ 39 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+