49 ಹೊಸ ತಾಲೂಕುಗಳು, ಅವುಗಳ ಹೆಸರುಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ರಾಜ್ಯದಲ್ಲಿ ಹೊಸದಾಗಿ 49 ತಾಲೂಕು ರಚನೆಗೆ ಸರ್ಕಾರ ಬದ್ಧವಾಗಿದ್ದು, ಹಣಕಾಸು ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 2017-18ನೇ ಸಾಲಿನ ಬಜೆಟ್ ಭಾಷಣದ ವೇಳೆ ಘೋಷಿಸಿದ್ದಾರೆ. 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳು ರಚನೆಯಾಗಲಿದ್ದು, ಬಹುಕಾಲದ ಬೇಡಿಕೆಗೆ ಕೊನೆಗೂ ಮಾನ್ಯತೆ ಸಿಕ್ಕಿದೆ.

ವಿ.ಶ್ರೀನಿವಾಸ್ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದ ಕಾಲದಲ್ಲಿ ಹೊಸ ತಾಲೂಕು ರಚನೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದರು. ಸದನದಲ್ಲೂ ಇದಕ್ಕೆ ಅಂಗೀಕಾರ ಸಿಕ್ಕಿತ್ತು. ಈಗ ಬಜೆಟ್ ನಲ್ಲಿ ಮತ್ತೊಮ್ಮೆ ಘೋಷಣೆಯಾಗಿದೆ.[ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ]

ನೂತನ ತಾಲೂಕು ರಚಿಸಲು ತಲಾ 25 ಕೋಟಿ ರೂ. ನಂತೆ 2000 ಕೋಟಿ ರೂ.ಗಳ ಅಗತ್ಯವಿದ್ದು, ಹಣಕಾಸಿನ ಲಭ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಹೊಸ ಯೋಜನೆಗಳು]

Budget 2017-18 Siddaramaiah announces 49 new taluks Karnataka

ಜಗದೀಶ್ ಶೆಟ್ಟರ್ ಅವರ ಸರ್ಕಾರ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು. ಈಗ ಇದೇ ತಂತ್ರ ಮುಂದುವರೆಸಿರುವ ಸಿದ್ದರಾಮಯ್ಯ ಸರ್ಕಾರ ಇದಕ್ಕೆ ಇನ್ನೂ 6 ಸೇರಿಸಿ ಹೊಸ ತಾಲೂಕುಗಳ ಉದಯಕ್ಕೆ ನಾಂದಿ ಹಾಡಿದೆ. ಬಜೆಟ್ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ.[LIVE: ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಯೋಜನೆ]

* ಬಾಗಲಕೋಟೆ - ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್
* ಬೆಳಗಾವಿ - ನಿಪ್ಪಾಣಿ, ಮೂಡಲಗಿ, ಕಾಗವಾಡ
* ಚಾಮರಾಜನಗರ - ಹನೂರು
* ದಾವಣಗೆರೆ - ನ್ಯಾಮತಿ[ಬಜೆಟ್ 2017: 58,000 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ]

* ಬೀದರ್ - ಚಿಟಗುಪ್ಪ, ಹುಲಸೂರು, ಕಮಲಾನಗರ
* ಬಳ್ಳಾರಿ - ಕುರುಗೋಡು, ಕೊಟ್ಟೂರು, ಕಂಪ್ಲಿ
* ಧಾರವಾಡ - ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
* ಗದಗ - ಗಜೇಂದ್ರಗಡ, ಲಕ್ಷ್ಮೇಶ್ವರ[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]

* ಕಲಬುರಗಿ - ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಭಾಗ್
* ಯಾದಗಿರಿ - ಹುಣಸಗಿ, ವಡಗೆರ, ಗುರುಮಿಟ್ಕಲ್
* ಕೊಪ್ಪಳ - ಕುಕನೂರು, ಕನಕಗಿರಿ, ಕಾರಟಗಿ
* ರಾಯಚೂರು - ಮಸ್ಕಿ, ಸಿರಾವರ[ಬಜೆಟ್ 2017: ರಾಮನಗರ, ದಾವಣಗೆರೆ, ಕೋಲಾರಗಳಲ್ಲಿ ಹೈಟೆಕ್ ಆಸ್ಪತ್ರೆ]

* ಉಡುಪಿ - ಬ್ರಹ್ಮಾವರ, ಕಾಪು, ಬೈಂದೂರು
* ದಕ್ಷಿಣ ಕನ್ನಡ - ಮೂಡಬಿದರೆ, ಕಡಬ
* ಬೆಂಗಳೂರು ನಗರ - ಯಲಹಂಕ
* ವಿಜಯಪುರ - ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ
* ಹಾವೇರಿ - ರಟ್ಟಿಹಳ್ಳಿ[ಕರ್ನಾಟಕ ಬಜೆಟ್ ನ ಪ್ರಮುಖಾಂಶಗಳು]

* ಮೈಸೂರು - ಸರಗೂರು
* ಚಿಕ್ಕಮಗಳೂರು - ಅಜ್ಜಂಪುರ
* ಉತ್ತರ ಕನ್ನಡ - ದಾಂಡೇಲಿ
* ಕೋಲಾರ - ಕೆಜಿಎಫ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramiah today in his Budget 2017-18 speech announced 49 new taluks for the Karnataka state. Yelahanka in Bengaluru will be among the 49 new taluks proposed and total number of taluks will be more than 220.
Please Wait while comments are loading...