ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೇನಿದೆ?

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್ 15: 2017-18 ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆ, ಮಕ್ಕಳ ಅಪೌಷ್ಠಿಕತೆ ನಿವಾರಣೆ, ಗರ್ಭಿಣಿಯರಿಗೆ ಅನುಕೂಲವಾಗುವ ಮಾತೃಪೂರ್ಣ ಯೋಜನೆ, ಸ್ವಾವಲಂಬನೆಗೆ ಒತ್ತು ನೀಡುವ ಯೋಜನೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರ ಜನಪರ ಬಜೆಟ್ ಎನ್ನುತ್ತಿರುವ ಈ ಆಯವ್ಯಯ ಮಹಿಳಾ ಮತ್ತು ಮಕ್ಕಳ ಪರವೇ? ಮಹಿಳೆ ಮತ್ತು ಮಕ್ಕಳಿಗಾಗಿ ಯಾವೆಲ್ಲ ಯೋಜನೆಗಳನ್ನು ಘೋಷಿಸಲಾಗಿದೆ? ಇದಕ್ಕಾಗಿ ಎಷ್ಟು ಹಣ ವಿನಿಯೋಗಿಸಲಾಗಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ. [LIVE: ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಯೋಜನೆ]

Budget 2017-18: What are the govt's gifts for women and children

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಯೊಜನೆಯ ವೆಚ್ಚ 4926 ಕೋಟಿ ರೂ.

* ಲೈಂಗಿಕ ದೌಜನ್ಯಕ್ಕೊಳಗಾದ ಮಹಿಳೆಯರಿಗಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ 145 ಚಿಕಿತ್ಸಾ ಘಟಕ ಸ್ಥಾಪನೆ. [ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?]

* ಮಹಿಳೆಯರು ಸ್ವಸಹಾಯ ಸಂಘಗಳಿಂದ ಪಡೆಯುವ ಸಾಲ ಇನ್ನು ಮೇಲೆ ಶೂನ್ಯ ಬಡ್ಡಿದರದಲ್ಲಿ ಲಭ್ಯವಾಗಲಿದೆ.

* ಗರ್ಭಿಣಿಯರು ಮತ್ತು ಬಾಣಂತಿಯರ ಅನುಕೂಲಕ್ಕಾಗಿ ಜಾರಿಯಾದ ಮಾತೃಪೂರ್ಣ ಯೋಜನೆಗೆ ೩೦೨ ಕೋಟಿ ಮಂಜೂರು. ಈ ಯೋಜನೆಯಡಿಯಲ್ಲಿ ಜುಲೈ ತಿಂಗಳಿನಿಂದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಪೂರೈಕೆ. [ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ]

* ಅಂಗನವಾಡಿ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸಲುವಾಗಿ ವಾರದ ಎರಡು ದಿನ ಮೊಟ್ಟೆ ವಿತರಣೆ

* ಜುಲೈ ತಿಂಗಳಿನಿಂದ ಸರ್ಕಾರಿ ಶಾಲೆಗಳಲ್ಲಿ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿವಾರದ ಐದು ದಿನ ಹಾಲು ವಿತರಣೆ. [ಬಜೆಟ್ 2017: ಬಳ್ಳಾರಿ ಜಿಲ್ಲೆಯಲ್ಲಿ ಕುರಿ ಸಂವರ್ಧನಾ ಕೇಂದ್ರ]

*ಪಾಲನೆ ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಹಾಗೂ ಬಾಧಿತ 25,000 ಮಕ್ಕಳಿಗೆ ನೀಡಲಾಗುವ ಧನ ಸಹಾಯ ಮಾಸಿಕ 800 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ

* ಅಂಗನವಾಡಿ, ಆಶಾಕಾರ್ಯಕರ್ತೆಯರಿಗೆ ಅಪಘಾತ ವಿಮೆ

* ಸಾಧನಾ ಯೋಜನೆಯಡಿಯಲ್ಲಿ ನೀಡುವ ಆರ್ಥಿಕ ನೆರವು 30000 ದಿಂದ 50000 ಕ್ಕೆ ಏರಿಕೆ.

* ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ 148.74 ಕೋಟಿ ರೂ.ಗಳ ಅನುದಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾರ್ಯಕ್ರಮಗಳ ಜೊತೆಗೆ ಹೊಸ ಕಾರ್ಯಕ್ರಮಗಳ ಅನುಷ್ಠಾನ.

* ಶಿಶು ಕೇಂದ್ರ ಯೋಜನೆಯಡಿಯಲ್ಲಿ ವಿಕಲ ಚೇತನರಿಗೆ ನೀಡುತ್ತಿದ್ದ ದ್ವಿಚಕ್ರ ವಾಹನ ಸೌಲಭ್ಯವನ್ನು 2000 ದಿಂದ 4000 ಕ್ಕೆ ಏರಿಕೆ.[ಹಾಸನ, ಚಾಮರಾಜ ನಗರ, ಯಾದಗಿರಿಯಲ್ಲಿ ಡಿಪ್ಲೊಮಾ ಕಾಲೇಜು]

* ಸವಿರುಚಿ ಕ್ಯಾಂಟಿನ್ ಅನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ, ಆಯಾ ಜಿಲ್ಲೆಯ ಮಹಿಳಾ ಸಂಘಗಳೇ ಇದರ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡುವುದು. [ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]

* ಮಕ್ಕಳ ವಿಶೇಷ ನ್ಯಾಯಾಲಯವನ್ನು ಬಾಲ ಸ್ನೇಹಿಯಾಗಿಸಲು ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ನ್ಯಾಯಾಲಯ ನಿರ್ಮಿಸಲು 4 ಕೋಟಿ ರೂ. ಅನುದಾನ.

*ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 1000 ರೂ ವಿಶೇಷ ಗೌರವಧನ

* ದೇವದಾಸಿ ಪದ್ಧತಿಯಿಂದ ಹೊರಬಂದವರಿಗೆ 25,000 ರೂ. ಪ್ರೋತ್ಸಾಹ ಧನ, 25,000 ಸಾವಿರದ ವರೆಗೆ ಸಾಲ ಸೌಲಭ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Budget 2017-18 : Chief Minister and Finance Minister Siddaramaiah presenting 2017-18 budget on Wednesday, March 15, 2017. Here are some benificial shcemes for women and children.
Please Wait while comments are loading...