Petrol-Diesel Price Hike: ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ 5 ದಿನದಲ್ಲಿ ಎರಡನೇ ಬಾರಿ ಹೆಚ್ಚಳ, ಇಂದು ಎಷ್ಟು ಹೆಚ್ಚಾಗಿದೆ
Petrol-Diesel Price Hike: ಬೆಂಗಳೂರು - ಕರ್ನಾಟಕ ಸೇರಿದಂತೆ ದೇಶದಾದ್ಯಂತ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಹೆಚ್ಚಳವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರು ಯುದ್ಧ - ಸಂಘರ್ಷವು ಮುಕ್ತಾಯ ಆಗದೆ ಇರುವುದು ಹಲವು ಸಂಕಷ್ಟಗಳಿಗೆ ಕಾರಣವಾಗಿದೆ. ಕಳೆದ ಐದು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಎಷ್ಟು ಹೆಚ್ಚಳವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕಳೆದ ಐದು ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ, ಮೇ 19 ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳವಾಗಿದೆ. ನಾಲ್ಕು ವರ್ಷಗಳ ನಂತರ ಮೇ 15ರ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ನಂತರ ಎರಡು ಇಂಧನಗಳ ಬೆಲೆಯು ಲೀಟರ್‌ಗೆ ಸುಮಾರು 3.90 ರೂಪಾಯಿ ಹೆಚ್ಚಳವಾದಂತೆ ಆಗಿದೆ. ಮಂಗಳವಾರದಿಂದಲೇ ಜಾರಿಗೆ ಬರುವಂತೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 87 ಪೈಸೆಯಿಂದ 98.64 ಕ್ಕೆ ಹೆಚ್ಚಿಸಲಾಗಿದ್ದು, ಡೀಸೆಲ್ ಅನ್ನು ಲೀಟರ್‌ಗೆ 91 ಪೈಸೆಯಿಂದ 91.58 ಕ್ಕೆ ಹೆಚ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಎಚ್ಚರಿಕೆಯ ಸಂದೇಶಗಳ ನಡುವೆ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇದೀಗ ಕೇವಲ 5 ದಿನಗಳ ಅಂತರದಲ್ಲಿ ಗ್ರಾಹಕರಿಗೆ ಎರಡನೇ ಬಾರಿ ಶಾಕ್ ನೀಡಿದೆ. ಪೆಟ್ರೋಲ್, ಡೀಸೆಲ್ (Petrol, Diesel) ದರ ಪ್ರತಿ ಲೀಟರ್ಮೇಲೆ ಸರಾಸರಿ 90 ಪೈಸೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ
ಇನ್ನು ಬೆಂಗಳೂರಿನಲ್ಲಿ ಮೇ 19ರ ಮಂಗಳವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಪ್ರತಿ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ. ಇದರಿಂದ 4 ದಿನಗಳ ಹಿಂದೆ 106.17 ರೂ. ಬೆಲೆ ಇದ್ದ ಪೆಟ್ರೋಲ್ ಬೆಲೆಯು ಇಂದಿನಿಂದ 107.16 ರೂಪಾಯಿ ಹಾಗೂ 94.10 ರೂಪಾಯಿ ಇದ್ದ ಡೀಸೆಲ್ ಬೆಲೆಯು 95.03 ರೂಪಾಯಿ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸ್ಥಿತಿಯು ವಿಷಮವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.












Click it and Unblock the Notifications