IPL 2026 Playoff: ಆರ್‌ಸಿಬಿ, ಗುಜರಾತ್, ಎಸ್‌ಆರ್‌ಎಚ್‌ ಪ್ಲೇಆಫ್‌ ಪ್ರವೇಶ: ಒಂದು ಸ್ಥಾನಕ್ಕಾಗಿ 5 ತಂಡಗಳಿಂದ ಭಾರಿ ಪೈಪೋಟಿ

IPL 2026 Playoff Scenarios: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್‌ ಜೊತೆಗೆ ಗುಜರಾತ್ ಟೈಟಾನ್ಸ್‌ ಕೂಡ ಪ್ಲೇಆಫ್‌ ಟಿಕೆಟ್ ಪಡೆದುಕೊಂಡವು. ಇದಕ್ಕೂ ಮುನ್ನ ಆರ್‌ಸಿಬಿ ಪ್ಲೇಆಫ್ ಪ್ರವೇಶ ಮಾಡಿತ್ತು. ಇನ್ನೊಂದು ಸ್ಥಾನಕ್ಕಾಗಿ ಯಾವೆಲ್ಲಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸದ್ಯ ಸಿಎಸ್‌ಕೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇಆಫ್‌ಗೆ ಲಗ್ಗೆ ಇಟ್ಟಿವೆ. ಈಗ ಪ್ಲೇಆಫ್‌ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ.

IPL 2026 Playoff Race CSK RR PBKS KKR amp amp Delhi Capitals Battle for Final Spot Know details

ಐಪಿಎಲ್‌ 2026 ಪ್ಲೇಆಫ್ ಲೆಕ್ಕಾಚಾರ

ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಪ್ಲೇಆಫ್ ಅರ್ಹತೆಯ ಹಾದಿ ಈಗ ಸಂಪೂರ್ಣವಾಗಿ ಅವರ ಕೈಯಲ್ಲಿಲ್ಲ. ಅವರು ತಮ್ಮ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇಬೇಕು ಹಾಗೂ ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬನೆಯಾಗಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಇನ್ನೂ ಪ್ಲೇಆಫ್ ರೇಸ್‌ನಲ್ಲಿದ್ದು, ಕೆಕೆಆರ್ ವಿರುದ್ಧದ ಒಂದು ಪಂದ್ಯ ಬಾಕಿ ಇರುವಾಗಲೇ 12 ಅಂಕಗಳನ್ನು ಗಳಿಸಿದೆ.

ಅಂತಿಮ ಸ್ಥಾನಕ್ಕಾಗಿ ಸಿಎಸ್‌ಕೆ, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅಂಕಗಳ ಸಮಬಲ ಏರ್ಪಡುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ನೆಟ್ ರನ್ ರೇಟ್ ನಿರ್ಣಾಯಕವಾಗಲಿದ್ದು, ಈ ವಿಚಾರದಲ್ಲಿ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಮುನ್ನಡೆಯಲ್ಲಿದೆ. ಮುಂದಿ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೆ ಆರ್‌ಆರ್‌ಗೆ ಈ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

ಒಂದು ಸ್ಥಾನಕ್ಕಾಗಿ 5 ತಂಡಗಳಿಂದ ಭಾರಿ ಪೈಪೋಟಿ

ರಾಜಸ್ಥಾನ್ ರಾಯಲ್ಸ್‌:‌ ಕಳೆದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದರೂ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಹಾದಿ ಇನ್ನೂ ಅವರ ಕೈಯಲ್ಲೇ ಇದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ರಾಯಲ್ಸ್‌ಗೆ ಒಟ್ಟು 16 ಅಂಕಗಳನ್ನು ಗಳಿಸಲಿದೆ. ಒಂದು ವೇಳೆ ರಾಯಲ್ಸ್ ಈ ಸಾಧನೆ ಮಾಡಿದರೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬಹುದು.

ಅಷ್ಟೇ ಅಲ್ಲದೆ ಲೀಗ್ ಹಂತದ ಕೊನೆಯಲ್ಲಿ ಏನು ಬೇಕಾದರೂ ಆಗಬಹುದು. ಕೇವಲ 14 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿದರೂ ಪ್ಲೇಆಫ್ ಪ್ರವೇಶಿಸಲು ಅವಕಾಶವಿದೆ. ಆದರೆ ಅಂತಹ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಬೇಕಾಗುತ್ತದೆ.

ಚೆನ್ನೈ ಸೂಪರ್ ಕಿಗ್ಸ್‌: ಎಸ್‌ಆರ್‌ಎಚ್‌ ವಿರುದ್ಧದ ಸೋಲು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತಳ್ಳಿದೆ. ಇದರಿಂದಾಗಿ ಅವರ ಪ್ಲೇಆಫ್ ಕನಸು ಅನಿಶ್ಚಿತವಾಗಿದೆ. ಆದರ 14 ಅಂಕಗಳೊಂದಿಗೆ ಅರ್ಹತೆ ಪಡೆಯುವ ಅವಕಾಶ ಇನ್ನೂ ಜೀವಂತವಾಗಿದೆ. ಅದು ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಲೇಬೇಕು.

ಇದನ್ನು ಹೊರತುಪಡಿಸಿ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಉಳಿದ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲಬೇಕು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಬೇಕು. ಆದರೆ ನಂತರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಸೋಲಬೇಕು. ಒಂದು ವೇಳೆ ಇದು ಸಂಭವಿಸಿದರೆ ಅಂತಿಮವಾಗಿ ಪ್ಲೇಆಫ್‌ನ ನಾಲ್ಕನೇ ಸ್ಥಾನಕ್ಕಾಗಿ ಸಿಎಸ್‌ಕೆ ಮತ್ತು ಡಿಸಿ ನಡುವೆ ಪೈಪೋಟಿ ಏರ್ಪಡಲಿದ್ದು, ಆಗ ನೆಟ್ ರನ್ ರೇಟ್ ನಿರ್ಣಾಯಕವಾಗಲಿದೆ.

ಪಂಜಾಬ್ ಕಿಂಗ್ಸ್: ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ ಕನಸಿಗೆ ಮತ್ತಷ್ಟು ಹೊಡೆತ ಬಿದ್ದಿದೆ. ಈಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೂ ಪಂಜಾಬ್ 15 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಇದರ ಹೊರತಾಗಿಯೂ ಅವರು ಬೇರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಿದೆ.

ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಉಳಿದ ಪಂದ್ಯಗಳಲ್ಲಿ ಒಂದನ್ನು ಸೋತರೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಒಂದು ಪಂದ್ಯದಲ್ಲಿ ಎಡವಿದರೆ ಆಗ ಪಂಜಾಬ್ 15 ಅಂಕಗಳೊಂದಿಗೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಕೆಕೆಆರ್ ಜೊತೆ 15 ಅಂಕಗಳ ಸಮಬಲ ಏರ್ಪಟ್ಟರೆ, ನೆಟ್ ರನ್ ರೇಟ್ ನಿರ್ಣಾಯಕವಾಗಲಿದೆ.

ಪಂಜಾಬ್ ಕಿಂಗ್ಸ್ ಕೇವಲ 13 ಅಂಕಗಳೊಂದಿಗೆ ಕೂಡ ಪ್ಲೇಆಫ್ ತಲುಪಬಹುದು. ಆದರೆ ಈ ಹಾದಿ ಅತ್ಯಂತ ಕಠಿಣವಾಗಿದೆ. ರಾಜಸ್ಥಾನ್ ರಾಯಲ್ಸ್ ತನ್ನ ಎರಡೂ ಪಂದ್ಯಗಳನ್ನು ಸೋಲಬೇಕು. ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಬೇಕು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ, ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು. ಈ ಎಲ್ಲಾ ಲೆಕ್ಕಾಚಾರಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವು ಕೆಕೆಆರ್‌ಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.

ಕೊಲ್ಕತ್ತಾ ನೈಟ್‌ ರೈಡರ್ಸ್‌: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ಲೇಆಫ್ ಹಾದಿ ತುಂಬಾ ಕಠಿಣವಾಗಿದೆ. ಆದರೂ 15 ಅಂಕಗಳೊಂದಿಗೆ ಅರ್ಹತೆ ಪಡೆಯುವ ಅವಕಾಶ ಇನ್ನೂ ಇದೆ. ರಾಜಸ್ಥಾನ್ ರಾಯಲ್ಸ್ ತನ್ನ ಉಳಿದ ಪಂದ್ಯಗಳಲ್ಲಿ ಒಂದನ್ನು ಸೋಲಬೇಕು. ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಬೇಕಾಗುತ್ತದೆ.

ಒಂದು ವೇಳೆ ಪಂಜಾಬ್ ತಂಡವು ಲಕ್ನೋವನ್ನು ಸೋಲಿಸಿದರೂ ಎರಡೂ ತಂಡಗಳು ಸಮಾನ ಅಂಕಗಳನ್ನು ಹೊಂದಿದಾಗ ಪಂಜಾಬ್ ಕಿಂಗ್ಸ್‌ಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಕೆಕೆಆರ್ ಮುಂದಿನ ಹಂತಕ್ಕೆ ಏರಬಹುದು. ಕೆಕೆಆರ್ ತಂಡವು ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಬೇಕು. ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಬೇಕು. ರಾಜಸ್ಥಾನ್ ರಾಯಲ್ಸ್ ತನ್ನ ಉಳಿದ ಎರಡೂ ಪಂದ್ಯಗಳನ್ನು ಸೋಲಬೇಕು. ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ವಿರುದ್ಧ ಸೋಲಬೇಕು ಮತ್ತು ನೆಟ್ ರನ್ ರೇಟ್‌ನಲ್ಲಿ ಕೋಲ್ಕತ್ತಾಕ್ಕಿಂತ ಹಿಂದೆ ಇರಬೇಕು. ಆಗ ಮಾತ್ರ ಅವಕಾಶ ಇನ್ನೂ ಹೆಚ್ಚಿರಲಿದೆ.

ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸ್ತುತ -0.871 ರಷ್ಟು ಕಳಪೆ ನೆಟ್ ರನ್ ರೇಟ್ ಹೊಂದಿದ್ದು, ಪ್ಲೇಆಫ್ ರೇಸ್‌ನಲ್ಲಿ ಸಮಬಲದ ಲೆಕ್ಕಾಚಾರಗಳನ್ನು ಅವಲಂಬಿಸುವುದು ಅವರಿಗೆ ಅತ್ಯಂತ ಕಠಿಣವಾಗಿದೆ. ಹೀಗಾಗಿ ಮುಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಡೆಲ್ಲಿ ತಂಡ ಪ್ಲೇಆಫ್ ತಲುಪಲು ಪವಾಡವೇ ನಡೆಯಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಲೇಬೇಕು. ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಬೇಕು. ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಉಳಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕು. ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸಬೇಕು. ಒಂದು ವೇಳೆ ಎಲ್ಲವೂ ಈ ಯೋಜನೆಯಂತೆ ನಡೆದರೆ ಡೆಲ್ಲಿ ಕ್ಯಾಪಿಟಲ್ಸ್ ಯಾವುದೇ ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೆಯೇ ಆರ್‌ಸಿಬಿ, ಜಿಟಿ ಮತ್ತು ಎಸ್‌ಆರ್‌ಹೆಚ್ ತಂಡಗಳೊಂದಿಗೆ ಪ್ಲೇಆಫ್ ಹಂತವನ್ನು ಪ್ರವೇಶಿಸಲಿದೆ. ಒಟ್ಟಿನಲ್ಲಿ ಇನ್ನೊಂದು ಸ್ಥಾನಕ್ಕಾಗಿ ಭಾರಿ ಪೈಪೋಟಿ ಏರ್ಪಟ್ಟಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+