Bank Holiday: ಮೇ ಕೊನೆ ವಾರ ಬ್ಯಾಂಕ್‌ಗಳು ಬಂದ್, ಬಕ್ರೀದ್ ಸೇರಿ ಎಷ್ಟು ದಿನ ರಜೆ?

Bank Holiday Updates: ಬಡ, ಮಧ್ಯಮ ವರ್ಗದ ಜನರು, ಉದ್ಯಮ, ದೊಡ್ಡ ಕಂಪನಿಗಳವರೆಗೆ ಹಣಕಾಸು ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಹಬ್ಬಗಳು, ಎರಡು ಮತ್ತು ನಾಲ್ಕನೇ ಶನಿವಾರ ಸೇರಿ ವಿವಿಧ ದಿನಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತವೆ. ಮೇ ತಿಂಗಳ ಮುಂದಿನ ಎರಡು ವಾರಗಳಲ್ಲಿ ಬ್ಯಾಂಕ್‌ಗಳು ಯಾವೆಲ್ಲ ದಿನ ರಜೆ ಇರುತ್ತವೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಬಕ್ರೀದ್ ಹಬ್ಬದ ರಜೆ ಯಾವಾಗ? ಸಂಪೂರ್ಣ ಪಟ್ಟಿ ಇಲ್ಲಿದೆ.

ನಿಯಮಿತ ವಾರಾಂತ್ಯದ ರಜಾದಿನಗಳು ಮತ್ತು ಈ ತಿಂಗಳ ಕೊನೆಯಲ್ಲಿ ಹಬ್ಬದ ಪ್ರಯುಕ್ತ ಬ್ಯಾಂಕ್‌ಗಳು ರಜೆ ಇರಲಿವೆ. ಅಂದು ಯಾವುದೇ ಭೌತಿಕ ವಹಿವಾಟು ಇರುವುದಿಲ್ಲ. ಹೀಗಾಗಿ ಮೇ 31ರವರೆಗೆ 'ನಗದು ಠೇವಣಿ, ದಾಖಲೆ ಸಲ್ಲಿಕೆ, ಲಾಕರ್ ಪ್ರವೇಶ ಅಥವಾ ಇತರ ವೈಯಕ್ತಿಕ ಸೇವೆಗಳಿಗಾಗಿ ಶಾಖೆಗಳಿಗೆ ಭೇಟಿ ನೀಡುವ ಗ್ರಾಹಕರು ಈ ರಜೆಗಳ ಬಗ್ಗೆ ತಿಳಿದಿದ್ದರೆ ಒಳಿತು.

Bank Holidays in May 2026

ಮೇ ಕೊನೆ ಎರಡು ವಾರದಲ್ಲಿ ಬ್ಯಾಂಕ್‌ಗಳು ಒಟ್ಟು ನಾಲ್ಕು ದಿನ ಬಂದ್ ಆಗಿರಲಿವೆ. ಯಾವ ದಿನಾಂಕ, ಯಾವ ವಾರದಂದು ರಜೆ? ಇಲ್ಲಿದೆ ಪಟ್ಟಿ..

Gold Price: ಒಂದೇ ದಿನಕ್ಕೆ ಬಂಗಾರ ಬೆಲೆ ಭರ್ಜರಿ ಕುಸಿತ, ಗಗನಕ್ಕೇರಿದ ಬೆಳ್ಳಿ; ಬೆಂಗಳೂರಿನಲ್ಲಿ ಎಷ್ಟಿದೆ ದರ?
Gold Price: ಒಂದೇ ದಿನಕ್ಕೆ ಬಂಗಾರ ಬೆಲೆ ಭರ್ಜರಿ ಕುಸಿತ, ಗಗನಕ್ಕೇರಿದ ಬೆಳ್ಳಿ; ಬೆಂಗಳೂರಿನಲ್ಲಿ ಎಷ್ಟಿದೆ ದರ?

ಮೇ ದ್ವಿತೀಯಾರ್ಧ ಬ್ಯಾಂಕ್ ರಜೆ ಪಟ್ಟಿ ಹೀಗಿದೆ

* 23 ಮೇ 2026 (ಶನಿವಾರ): ನಾಲ್ಕನೇ ಶನಿವಾರ ರಜೆ

* 24 ಮೇ 2026 (ಭಾನುವಾರ): ಸಾಪ್ತಾಹಿಕ ಭಾನುವಾರ ರಜೆ

* 27 ಮೇ 2026 (ಬುಧವಾರ): ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಬಕ್ರೀದ್ ಅಥವಾ ಈದ್ ಅಲ್-ಅಧಾ ಪ್ರಯುಕ್ತ ಅಂದು ಬ್ಯಾಂಕ್‌ಗಳು ರಜೆ

* 31 ಮೇ 2026 (ಭಾನುವಾರ): ಸಾಪ್ತಾಹಿಕ ಭಾನುವಾರ ರಜೆ

ಎಲ್ಲ ರಜೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಡಿ ಬರುತ್ತವೆ. ಕೆಲವು ರಜೆಗಳು ಆಯಾ ರಾಜ್ಯಗಳ ಪ್ರಾದೇಶಿಕ ಆಚರಣೆಗಳನ್ನು ಅವಲಂಬಿಸಿ ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿ ರಜೆಗಳ ದಿನಾಂಕ ಬದಲಾಗುತ್ತವೆ. ಗ್ರಾಹಕರು ನಿಮ್ಮ ಭಾಗದ ರಜೆಗಳ ದಿನ ನೋಡಿ ಹಣಕಾಸು ವಹಿವಾಟು ನಡೆಸಲು ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.

ಶನಿವಾರಗಳಂದು ಬ್ಯಾಂಕ್ ಕಾರ್ಯ ನಿರ್ವಹಣೆ

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ದೇಶದಲ್ಲಿ ಎಲ್ಲಾ ನಿಗದಿತ ಮತ್ತು ನಿಗದಿತವಲ್ಲದ ಬ್ಯಾಂಕುಗಳು ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ, ಎಲ್ಲ ಭಾನುವಾರ ಮುಚ್ಚಿರುತ್ತವೆ. ಹಬ್ಬ, ಜಯಂತಿ, ಆಚರಣೆಗಳು, ಮುಷ್ಕರದಂತಹ ಸಂದರ್ಭದಲ್ಲಿ ಮುಚ್ಚಿರುತ್ತವೆ. ಮೊದಲ, ಮೂರನೇ ಮತ್ತು ಐದನೇ ಶನಿವಾರ ಒಳಗೊಂಡು ಉಳಿದೆಲ್ಲ ದಿನಗಳು ಕಾರ್ಯ ನಿರ್ವಹಿಸುತ್ತವೆ.

ನಮ್ಮ ಮೆಟ್ರೋ ಇಂಧನ ಬಿಕ್ಕಟ್ಟು, ಟ್ರಾಫಿಕ್‌ಗೆ ಪರಿಹಾರ: 3 ನಿಮಿಷಕ್ಕೊಂದು ರೈಲು, 300 ಕಿಮೀ ಜಾಲ ವಿಸ್ತರಣೆ ಅಗತ್ಯ
ನಮ್ಮ ಮೆಟ್ರೋ ಇಂಧನ ಬಿಕ್ಕಟ್ಟು, ಟ್ರಾಫಿಕ್‌ಗೆ ಪರಿಹಾರ: 3 ನಿಮಿಷಕ್ಕೊಂದು ರೈಲು, 300 ಕಿಮೀ ಜಾಲ ವಿಸ್ತರಣೆ ಅಗತ್ಯ

ಚಿಂತೆ ಬಿಡಿ, ಡಿಜಿಟಲ್ ವಹಿವಾಟು ನಡೆಸಿ

ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ಎಲ್ಲ ರಂಗದಲ್ಲೂ ಚಾಲ್ತಿಯಲ್ಲಿದೆ. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ವರದಾನ ಎನ್ನಬಹುದು. ಬ್ಯಾಂಕ್‌ಗಳ ಭೌತಿಕ ಕಾರ್ಯ ನಿರ್ವಹಣೆ ಸ್ಥಗಿತವಾದರೂ ಸಹಿತ ಯುಪಿಐ ಪಾವತಿಗಳು, ಎಟಿಎಂ ಹಿಂಪಡೆಯುವಿಕೆಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಅಡಿಯಲ್ಲಿ ಸೇವೆ ನಿರಂತರವಾಗಿ ಲಭ್ಯವಿರುತ್ತದೆ. ಬ್ಯಾಂಕ್ ಮುಚ್ಚಿರುವಾಗ ಇದರ ಸೇವೆ ಪಡೆಯಬಹುದಾಗಿದೆ. ಗ್ರಾಹಕರು NEFT ಮತ್ತು RTGS ಮೂಲಕ ಹಣ ವರ್ಗಾವಣೆಗೆ ಯಾವುದೇ ತೊಂದರೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+