ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ
ಬೆಂಗಳೂರು, ಮಾರ್ಚ್ 15: ಕರ್ನಾಟಕ ಬಜೆಟ್ 2017ರಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು ಎಂಬುದರ ಬಗ್ಗೆ ಪ್ರಮುಖ ಅಂಶಗಳು ಹೀಗಿವೆ.
* ಕರ್ನಾಟಕ ಶಾಲಾ ಶಿಕ್ಷಣ ನೀತಿ ರಚನೆ
* 1ರಿಂದ 10ನೇ ತರಗತಿವರೆಗೆ ಪರಿಷ್ಕೃತ ಪಠ್ಯಪುಸ್ತಕ, 9ರಿಂದ 12ನೇ ತರಗತಿವರೆಗೆ ಅಯ್ದ ವಿಷಯಗಳಿಗೆ NCERT ಪಠ್ಯಪುಸ್ತಕ ಅಳವಡಿಕೆ[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]
* 1ನೇ ತರಗತಿಯಿಂದ ಇಂಗ್ಲಿಷ್ ಬೋಧನೆ

* ಗ್ರಾ.ಪಂ. ಕೇಂದ್ರ ಸ್ಥಾನದಲ್ಲಿ ದ್ವಿತೀಯ ಪಿಯುವರೆಗೆ 176 ಸಂಯೋಜಿತ ಶಾಲೆಗಳು
* ಹೆಚ್ಚುವರಿ 1 ಸಾವಿರ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಐಟಿ@ಸ್ಕೂಲ್[LIVE: ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಯೋಜನೆ]
* ಮಾಹಿತಿ ತಂತ್ರಜ್ಞಾನ ಬಳಸಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳ ಸುಧಾರಣೆ
* ಶೂ, ಸಾಕ್ಸ್ ವಿತರಣೆ
* ಜುಲೈನಿಂದ ಜಾರಿಗೆ ಬರುವ ಹಾಗೆ ವಾರದಲ್ಲಿ 5 ದಿನ ಹಾಲು ವಿತರಣೆ[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]
* ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ, 4 ಜಿಲ್ಲೆಗೆ ವಿಸ್ತರಣೆ
* 8ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರ
* ದೃಷ್ಟಿ ಪರೀಕ್ಷೆ ಮತ್ತು ಕನ್ನಡಕ ವಿತರಣೆ
* 50 ಸಾವಿರ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ತರಬೇತಿ[ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?]
* 10 ಸಾವಿರ ಪದವೀಧರ ಶಿಕ್ಷಕರು, 1626 ಪ್ರೌಢಶಾಲೆ ಶಿಕ್ಷಕರು ಹಾಗೂ 1191 ಪಿಯು ಉಪನ್ಯಾಸಕರನ್ನು ಎರಡು ಹಂತದಲ್ಲಿ ನೇಮಕ
* ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ












Click it and Unblock the Notifications