Get Updates
Get notified of breaking news, exclusive insights, and must-see stories!

ಆರ್‌ಟಿಇ ಅಡಿ ಪ್ರವೇಶಕ್ಕೆ ಜ.6ರಿಂದ ಅರ್ಜಿ ಸಲ್ಲಿಸಿ

ಬೆಂಗಳೂರು, ಡಿ. 23 : ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ )ಕಾಯ್ದೆಯಡಿ 2013-14 ಸಾಲಿನ ಪ್ರವೇಶಕ್ಕಾಗಿ ಜ.6ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವಾರ್ಷಿಕ ವರಮಾನ 3.50 ಲಕ್ಷ ರೂ. ಮಿತಿಯಲ್ಲಿರುವವರು ಈ ಯೋಜನೆಗೆ ಅರ್ಹರಾಗಿದ್ದು, ಎಲ್‌ಕೆಜಿ ಹಾಗೂ 1 ನೇ ತರಗತಿಗೆ ಈ ಯೋಜನೆಯಡಿ ಪ್ರವೇಶ ಪಡೆಯಬಹುದು.

ಭಾನುವಾರ ಬೆಂಗಳೂರಿನಲ್ಲಿ ಆರ್‌ಟಿಇ ಕಾರ್ಯಪಡೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಹಾಗೂ 'ಆರ್‌ಟಿಇ ಮಾಹಿತಿ ಕರಪತ್ರ' ಬಿಡುಗಡೆ ಸಮಾರಂಭದಲ್ಲಿ ಪೋಷಕರಿಗೆ ಆರ್‌ಟಿಇ ಕುರಿತ ಮಾಹಿತಿಗಳನ್ನು ನೀಡಲಾಗಿದೆ. ಆರ್‌ಟಿಇ ಅಡಿ ಅರ್ಜಿ ತುಂಬುವ ವಿಧಾನ ಮತ್ತು ಏನೇನು ದಾಖಲೆಗಳು ಬೇಕು ಎಂಬುದರ ಮಾಹಿತಿಯೂ ಅರ್ಜಿಯ ಹಿಂಭಾಗದಲ್ಲಿ ಲಭ್ಯವಿರಲಿದೆ ಎಂದು ಫೋಷಕರಿಗೆ ಮಾಹಿತಿ ನೀಡಲಾಯಿತು.

RTE

ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗಳಲ್ಲಿ ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಮತ್ತು ಸೀಟುಗಳ ಮಾಹಿತಿ ಜ.6ರಂದು ಪ್ರಕಟವಾಗಲಿದೆ. ಜ.6ರಿಂದ ಫೆ.8ರವರೆಗೆ ಪೋಷಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫೆ.17 ರಂದು ಎಲ್ಲಾ ಶಾಲೆಗಳ ಮುಖ್ಯಸ್ಥರು ಸ್ವೀಕರಿಸಿದ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಫೆ.28ರೊಳಗೆ ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ನೀಡಲಿದ್ದು, ಮಾ.3ರಿಂದ ಪೋಷಕರು ಆಯಾ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಆರಂಭ ಸೇರಿದಂತೆ ಇತರ ಚಟುವಟಿಕೆಗಳ ಮಾಹಿತಿ ಪಡೆಯಬಹುದಾಗಿದೆ. ವಾರ್ಷಿಕ ವರಮಾನ 3.50 ಲಕ್ಷ ರೂ. ಮಿತಿಯಲ್ಲಿರುವವರು ಈ ಯೋಜನೆಗೆ ಅರ್ಹರಾಗಿದ್ದು ಅರ್ಜಿ ಸಲ್ಲಿಸಬಹುದಾಗಿದೆ.

ಶಾಲೆಗಳಿಗೆ ನಷ್ಟವಿಲ್ಲ : ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳು ಬಡ ಮಕ್ಕಳಿಗೆ ಶೇ.25ರಷ್ಟು ಸೀಟುಗಳನ್ನು ನೀಡುವುದರಿಂದ ಅವುಗಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಒಬ್ಬ ವಿದ್ಯಾರ್ಥಿಗಳಿಗೆ ವರ್ಷಕ್ಕೆ 11,500 ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 65:35ರ ಅನುಪಾತದಲ್ಲಿ ಹಣ ನೀಡುತ್ತದೆ.

ಆದಾಯ ಮಿತಿ : ಆರ್‌ಟಿಇ ಕಾಯ್ದೆ ಪ್ರಕಾರ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವವರ ವಾರ್ಷಿಕ ವರಮಾನ 3.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೆ, ಪೋಷಕರ ಒತ್ತಾಯದ ಮೇರೆಗೆ 1 ಲಕ್ಷ ರೂ. ಮಿತಿಯಲ್ಲಿರುವವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ನಂತರ 3.50 ಲಕ್ಷ ರೂ.ವರೆಗಿನ ವರಮಾನ ಬರುವವರಿಗೆ ಅವಕಾಶ ದೊರೆಯುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+