Reservoirs water level: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಮಟ್ಟ, ಇಲ್ಲಿದೆ ವಿವರ

ಕರ್ನಾಟಕ, ಜುಲೈ, 12: ರಾಜ್ಯದ ಹಲವೆಡೆ ಮುಂಗಾರು ಆರ್ಭಟ ಹೆಚ್ಚಾಗಿದ್ದು, ಇದರಿಂದ ಜಲಾಶಯಗಳಿಗಳ ನೀರಿನ ಮಟ್ಟ ಸುಧಾರಿಸುತ್ತಿದೆ. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಅದರಲ್ಲೂ ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದು, ಇಂದು ಒಂದು ದಿನ ಮಾತ್ರ ಬಿಡುವು ನೀಡಿದ್ದಾನೆ. ಇಂದು ಬೆಳಗ್ಗೆಯಿಂದಲೂ ಮಂಗಳೂರಿನ ಕೆಲವೆಡೆ ಬಿಸಿಲಿನ ವಾತಾವರಣ ಇದ್ದರೆ, ಇನ್ನು ಹಲವೆಡೆ ಮೋಡ ಕವಿದ ವಾತಾರಣ ಇದೆ. ನಗರದಲ್ಲಿ ರಾತ್ರಿ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Reservoirs water level

ಹಾಗೆಯೇ ಮಂಗಳೂರು, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಹೀಗೆ ಮಳೆ ಮುಂದುವರೆದರೆ ರಾಜ್ಯದ ಜಲಾಶಯಗಳ ಒಳಹರಿವಿನ ಪ್ರಮಾಣವೂ ಹೆಚ್ಚಾದಂತೆ ಆಗಲಿದೆ. ಹಾಗಾದರೆ ಪ್ರಮುಖ ಜಲಾಶಯಗಳ ಪ್ರಸ್ತುತ ನೀರಿನ ಪ್ರಮಾಣದ ಎಷ್ಟಿದೆ ಅನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

1. ಕೆಆರ್​ಎಸ್​ ಜಲಾಶಯ

*ಗರಿಷ್ಠ ನೀರಿನ ಮಟ್ಟ - 124.80 ಅಡಿ

*ಒಟ್ಟು ಸಾಮರ್ಥ್ಯ - 124 ಅಡಿ

*ಇಂದಿನ ನೀರಿನ ಮಟ್ಟ- 87.70 ಅಡಿ

*ಒಳಹರಿವು - 5574 ಕ್ಯೂಸೆಕ್‌

*ಹೊರಹರಿವು - 390 ಕ್ಯೂಸೆಕ್‌

2. ಆಲಮಟ್ಟಿ ಜಲಾಶಯ

*ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

*ಒಟ್ಟು ಸಾಮರ್ಥ್ಯ- 123.08 ಟಿಎಂಸಿ

*ಇಂದಿನ ನೀರಿನ ಮಟ್ಟ - 18.94 ಟಿಎಂಸಿ

*ಕಳೆದ ವರ್ಷದ ನೀರಿನ ಮಟ್ಟ- 83.85 ಟಿಎಂಸಿ

*ಒಳಹರಿವು- 0 ಕ್ಯೂಸೆಕ್‌

*ಹೊರಹರಿವು - 561 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 497.71

*ಒಟ್ಟು ಸಾಮರ್ಥ್ಯ - 105.79

*ಇಂದಿನ ನೀರಿನ ಮಟ್ಟ- 5.42

*ಕಳೆದ ವರ್ಷದ ನೀರಿನ ಮಟ್ಟ - 88.36

*ಒಳಹರಿವು - 17761 ಕ್ಯೂಸೆಕ್‌

*ಹೊರಹರಿವು - 318 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 633.8

*ಒಟ್ಟು ಸಾಮರ್ಥ್ಯ - 37.73

*ಇಂದಿನ ನೀರಿನ ಮಟ್ಟ - 6.8

*ಕಳೆದ ವರ್ಷದ ನೀರಿನ ಮಟ್ಟ - 14.71

*ಒಳಹರಿವು - 0 ಕ್ಯೂಸೆಕ್‌

*ಹೊರಹರಿವು - 194 ಕ್ಯೂಸೆಕ್‌

5. ಲಿಂಗನಮಕ್ಕಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 554.44

*ಒಟ್ಟು ಸಾಮರ್ಥ್ಯ - 151.75

*ಇಂದಿನ ನೀರಿನ ಮಟ್ಟ - 19.89

*ಕಳೆದ ವರ್ಷದ ನೀರಿನ ಮಟ್ಟ - 54.41

*ಒಳಹರಿವು - 10 ಕ್ಯೂಸೆಕ್‌

*ಹೊರಹರಿವು - 11

6. ಕಬಿನಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 696.13

*ಒಟ್ಟು ಸಾಮರ್ಥ್ಯ - 19.52

*ಇಂದಿನ ನೀರಿನ ಮಟ್ಟ - 11

*ಕಳೆದ ವರ್ಷದ ನೀರಿನ ಮಟ್ಟ - 18.69

*ಒಳಹರಿವು - 4485 ಕ್ಯೂಸೆಕ್‌

*ಹೊರಹರಿವು - 800 ಕ್ಯೂಸೆಕ್‌

7. ಭದ್ರಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 657.73

*ಒಟ್ಟು ಸಾಮರ್ಥ್ಯ - 71.54

*ಇಂದಿನ ನೀರಿನ ಮಟ್ಟ - 27.46

*ಕಳೆದ ವರ್ಷದ ನೀರಿನ ಮಟ್ಟ - 57.82

*ಒಳಹರಿವು - 823 ಕ್ಯೂಸೆಕ್‌

*ಹೊರಹರಿವು - 226 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 662.91

*ಒಟ್ಟು ಸಾಮರ್ಥ್ಯ - 51

*ಇಂದಿನ ನೀರಿನ ಮಟ್ಟ - 5.59

*ಕಳೆದ ವರ್ಷದ ನೀರಿನ ಮಟ್ಟ - 15.53

*ಒಳಹರಿವು - 6905 ಕ್ಯೂಸೆಕ್‌

*ಹೊರಹರಿವು - 87

9. ಹೇಮಾವತಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 890.58

*ಒಟ್ಟು ಸಾಮರ್ಥ್ಯ - 37.1

*ಇಂದಿನ ನೀರಿನ ಮಟ್ಟ - 15.52

*ಕಳೆದ ವರ್ಷದ ನೀರಿನ ಮಟ್ಟ - 34.31

*ಒಳಹರಿವು - 2191 ಕ್ಯೂಸೆಕ್‌

*ಹೊರಹರಿವು - 200

10. ವರಾಹಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 594.36

*ಒಟ್ಟು ಸಾಮರ್ಥ್ಯ - 31.1

*ಇಂದಿನ ನೀರಿನ ಮಟ್ಟ - 4.03

*ಕಳೆದ ವರ್ಷದ ನೀರಿನ ಮಟ್ಟ - 8.36

*ಒಳಹರಿವು - 1283 ಕ್ಯೂಸೆಕ್‌

*ಹೊರಹರಿವು - 0

11. ಹಾರಂಗಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 871.38

*ಒಟ್ಟು ಸಾಮರ್ಥ್ಯ - 8.5

*ಇಂದಿನ ನೀರಿನ ಮಟ್ಟ - 4.11

*ಕಳೆದ ವರ್ಷದ ನೀರಿನ ಮಟ್ಟ - 6.75

*ಒಳಹರಿವು - 1343 ಕ್ಯೂಸೆಕ್‌

*ಹೊರಹರಿವು- 50 ಕ್ಯೂಸೆಕ್‌

ಈ ದತ್ತಾಂಶವನ್ನು ಗಮನಿಸಿದರೆ ಬಹುತೇಕ ಜಲಾಶಯಗಳ ನೀರಿನ ಪ್ರಮಾಣ ಮತ್ತೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಸಾಧಾರಣ ಮಳೆಯಾದರೂ ಕೂಡ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+