ಸಿಐಡಿ ಪೊಲೀಸರಿಗೆ ಹೊಸ ಕಥೆ ಹೇಳಿದ ಗುರೂಜಿ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 05 : ಸಿಐಡಿ ಪೊಲೀಸರ ವಶದಲ್ಲಿರುವ ಶಿವಕುಮಾರ ಸ್ವಾಮಿ ಅಲಿಯಾಸ್ ಗುರೂಜಿ ಹೊಸ ಕಥೆ ಹೇಳುತ್ತಿದ್ದಾನೆ. ಹಿಂದೆ ಬಂಧನವಾದ ಬಳಿಕ ತಾನು ಪತ್ರಿಕೆ ಮಾರಾಟ ಮಾಡುವುದನ್ನು ಬಿಟ್ಟದ್ದೇನೆ. ಪತ್ರಿಕೆ ಸೋರಿಕೆಗೂ ನನಗೂ ಸಂಬಂಧವಿಲ್ಲ ಎಂದು ತನಿಖೆಯ ದಾರಿ ತಪ್ಪಿಸುತ್ತಿದ್ದಾನೆ.

ಹೊಸೂರು ರಸ್ತೆಯ ಗಾರ್ವೆಪಾಳ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಡಗಿ ಕುಳಿತಿದ್ದ ಟೊಮೆಟೊ ಅಲಿಯಾಸ್ ಶಿವಕುಮಾರ ಸ್ವಾಮಿ ಅಲಿಯಾಸ್ ಗುರೂಜಿಯನ್ನು ಸಿಐಡಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದರು. ಸದ್ಯ, ಸಿಐಡಿ ವಶದಲ್ಲಿರುವ ಆತನ ವಿಚಾರಣೆ ನಡೆಸಲಾಗುತ್ತಿದೆ. [ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!]

shivakumar

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಶಿವಕುಮಾರ ಸ್ವಾಮಿಯೇ ಕಿಂಗ್‌ಪಿನ್ ಎಂದು ಆತನ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಆತ ಪತ್ರಿಕೆ ಸೋರಿಕೆಗೂ ನನಗೂ ಸಂಬಂಧವಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾನೆ. [20 ಕಾಲೇಜುಗಳಿಗೆ ಪತ್ರಿಕೆ ಮಾರಿದ್ದ ಶಿವಕುಮಾರ ಸ್ವಾಮಿ]

ಕಿಂಗ್‌ಪಿನ್ ಕಿರಣ್ : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್‌ಪಿನ್ ಕಿರಣ್ ಎಂಬುವವನು. ನಾನು 2008ರಲ್ಲಿ ಸಿಕ್ಕಿಬಿದ್ದ ಬಳಿಕ ಆ ವ್ಯಾಪಾರನ್ನು ಬಿಟ್ಟಿದ್ದೇನೆ ಎಂದು ಗುರೂಜಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಈಗ ಕಿರಣ್ ಈ ವ್ಯಾಪಾರ ನೋಡಿಕೊಳ್ಳುತ್ತಿದ್ದಾನೆ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾನೆ. [10 ದಿನಗಳ ಕಾಲ ಟೊಮೆಟೊ ಸಿಐಡಿ ವಶಕ್ಕೆ]

ತೀವ್ರ ವಿಚಾರಣೆ : ಸಿಐಡಿ ಅಧಿಕಾರಿಗಳು ಗುರೂಜಿಯ ತೀವ್ರ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಆತನ ಕೈಗೆ ಪಿಯು ಮಂಡಳಿಯಿಂದ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನವಿದೆ. ಆದ್ದರಿಂದ ಪಿಯು ಮಂಡಳಿಯ ಕೆಲವು ಅಧಿಕಾರಿಗಳನ್ನು ವಿಚಾರಣೆ ನಡೆಸಲು ಪೊಲೀಸರು ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಶಿವಕುಮಾರ ಸ್ವಾಮಿ ಭಾಗಿಯಾಗಿಲ್ಲದಿದ್ದರೆ ಇಷ್ಟು ದಿನ ಅಡಗಿ ಕುಳಿತಿದ್ದು ಏಕೆ? ಎಂಬುದಕ್ಕೆ ಆತ ಉತ್ತರ ಕೊಟ್ಟಿಲ್ಲ. ಬೇರೆ-ಬೇರೆ ರೀತಿಯ ಹೇಳಿಕೆ ನೀಡುವ ಮೂಲಕ ಆತ ತನಿಖೆಯ ದಾರಿ ತಪ್ಪಿಸಲು ಪ್ರಯತ್ನ ನಡೆಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Criminal Investigation Department is having a tough time cracking Shivakumar the alleged kingpin in the II PU question paper leak case, Karnataka. During his questioning, he is leading the investigators on to his nephew and terming him as the real kingpin.
Please Wait while comments are loading...