ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಿಮ ವರ್ಷದ ಎಂ. ಬಿ. ಬಿ. ಎಸ್.‌ ಪರೀಕ್ಷೆ ಮುಂದೂಡಲು ಪತ್ರ

|
Google Oneindia Kannada News

ಬೆಂಗಳೂರು, ಜನವರಿ 24; ಅಂತಿಮ ವರ್ಷದ ಎ. ಬಿ. ಬಿ. ಎಸ್. ಪರೀಕ್ಷೆಯನ್ನು ಮುಂದೂಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ಗೆ ಪತ್ರ ಬರೆದಿದ್ದಾರೆ.

ಸೋಮವಾರ ಈ ಕುರಿತು ಆಯನೂರು ಮಂಜುನಾಥ ಪತ್ರ ಬರೆದಿದ್ದಾರೆ. ಮೇಲ್ಕಂಡ ವಿಷಯಕ್ಕಾಗಿ ಸಂಬಂಧಿಸಿದಂತೆ ಈ ಬಾರಿ ಅಂತಿಮ ವರ್ಷದ ಎಂ. ಬಿ. ಬಿ. ಎಸ್. ತರಗತಿಗಳು ಆಗಸ್ಟ್‌ನಿಂದ ಪ್ರಾರಂಭವಾಗಿ ಕೇವಲ 5 ತಿಂಗಳು ಮಾತ್ರ ತರಗತಿಗಳು ನಡೆದಿವೆ ಎಂದು ಹೇಳಿದ್ದಾರೆ.

ESICನಲ್ಲಿ ಉದ್ಯೋಗ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶESICನಲ್ಲಿ ಉದ್ಯೋಗ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ

ಹಲವು ಕಾಲೇಜುಗಳಲ್ಲಿ ನಿಗದಿಪಡಿಸಿರುವ ಪಠ್ಯಕ್ರಮವನ್ನೇ ಮುಗಿಸಿರುವುದಿಲ್ಲ. ಆದರೆ ಈಗ ರಾಜೀವ್‌ಗಾಂಧಿ ವಿವಿ ತರಾತುರಿಯಲ್ಲಿ ಫೆಬ್ರವರಿ 22ರಿಂದಲೇ ಪರೀಕ್ಷೆಯನ್ನು ನಿಗದಿಪಡಿಸಿರುವುದರಿಂದ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 Breaking: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ Breaking: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

Postpone Final Year MBBS Exam Ayanur Manjunath Letter To Dr K Sudhakar

ಅಂತಿಮ ವರ್ಷದ ಎಂ. ಬಿ. ಬಿ. ಎಸ್. ತರಗತಿಗಳು ಕೇವಲ 5 ತಿಂಗಳು ಮಾತ್ರ ನಡೆದಿರುತ್ತವೆ. ಸಿಲಬಸ್ ಮುಗಿದಿರುವುದಿಲ್ಲ. ಇನ್ನೂ ಹಲವು ಕಾಲೇಜುಗಳು ತರಗತಿಗಳನ್ನು ನಡೆಸುತ್ತಲೇ ಇದ್ದಾರೆ. ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇಸ್ ಕೊಟ್ಟಿಲ್ಲ. ಕಳೆದ ಬಾರಿ ಮಾರ್ಚ್, ಏಪ್ರಿಲ್‌ನಲ್ಲಿ ಪರೀಕ್ಷೆಗಳು ನಡೆದಿರುತ್ತವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆ, ಹೋಮ್ ಐಸೋಲೇಷನ್ ಮಾರ್ಗಸೂಚಿಗಳು ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆ, ಹೋಮ್ ಐಸೋಲೇಷನ್ ಮಾರ್ಗಸೂಚಿಗಳು

ಅಂತಿಮ ವರ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳಾಗಿದ್ದರಿಂದ ನಿಗದಿಪಡಿಸಿರುವ ಸಿಲಬಸ್ ಸಂಪೂರ್ಣ ಮನನ ಮಾಡಿಕೊಳ್ಳದೇ ಪರೀಕ್ಷೆಯನ್ನು ಒತ್ತಡದಲ್ಲಿ ಎದುರಿಸಬೇಕಾಗುತ್ತದೆ ಅಲ್ಲದೇ ಮುಂದಿನ ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೂ ಇದು ಮಾರಕವೆನಿಸಿದೆ.

ಆದ ಕಾರಣ ದಯಮಾಡಿ ಅಂತಿಮ ವರ್ಷದ ಎಂ. ಬಿ. ಬಿ. ಎಸ್. ಪರೀಕ್ಷೆಗಳನ್ನು ಮಾರ್ಚ್ ಕೊನೆಯ ವಾರ ಅಥವ ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಆಯನೂರು ಮಂಜುನಾಥ ಮನವಿ ಮಡಿದ್ದಾರೆ.

English summary
In a letter BJP MLC Ayanur Manjunath request the medical education minster Dr. K. Sudhakar to postpone final year MBBS exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X