ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

MSIL ಅದ್ವಿತೀಯ ಸಾಧನೆ: ಐಪಿಎಸ್ ಅಧಿಕಾರಿ ವಿಕಾಶ್ ಕುಮಾರ್‌ಗೆ ಜಾಗತಿಕ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಆ. 28: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. ಒಂದು ವರ್ಷದಲ್ಲಿ 91 ಕೋಟಿ ರೂ. ಲಾಭ ಗಳಿಸಿ ಕಾರ್ಯಕ್ಷಮತೆ ತೋರಲು ಕಾರಣವಾದ ಐಪಿಎಸ್ ಅಧಿಕಾರಿ ವಿಕಾಶ್ ಕುಮಾರ್ ವಿಕಾಶ್ ಅವರಿಗೆ ಏಷ್ಯಾದ ಪ್ರತಿಷ್ಠಿತ ಏಷಿಯಾ ಒನ್ ಗ್ಲೋಬಲ್ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಓಪನ್ ಮ್ಯಾಗಜಿನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ವಿವಿಧ ದೇಶದ ರಾಯಬಾರ ಪ್ರತಿನಿಧಿಗಳು, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಮಾಲೀಕರು ಮತ್ತು ಹೂಡಿಕೆದಾರರು ಪಾಲ್ಗೊಂಡಿದ್ದರು.

ದೆಹಲಿಯ ಜಂತರ್‌ ಮಂತರ್‌ನಲ್ಲಿ ರೈತರ ಬೃಹತ್‌ ಪ್ರತಿಭಟನೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ರೈತರ ಬೃಹತ್‌ ಪ್ರತಿಭಟನೆ

ಐಪಿಎಸ್ ಅಧಿಕಾರಿ ವಿಕಾಶ್ ಕುಮಾರ್ ವಿಕಾಶ್ ಅವರನ್ನು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ಗೆ ವ್ಯವಸ್ಥಾಪಕ ನಿರ್ದೇಕರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು.

MSIL MD Vikash kumar Vikash awarded to Asia One Global India of the Year

ಆರು ದಶಕದ ಇತಿಹಾಸ ಹೊಂದಿದ್ದ ಎಂಎಸ್ಐಎಲ್, ಚಿಟ್ ಫಂಡ್, ಮದ್ಯ ಮಾರಾಟ, ವಿದ್ಯಾ ಮತ್ತು ಲೇಖಕ್ ನೋಟ ಪುಸ್ತಕ ಲೇಖನ ಸಾಮಗ್ರಿ, ಸೋಲಾರ್ ವಾಟರ್ ಹೀಟರ್, ಪ್ರವಾಸ ಮತ್ತು ಪ್ರಯಾಣ, ಜನರಿಕ್ ಔಷಧಿ, ಇನ್ನಿತರೆ ಉತ್ಪನ್ನಗಳ ಮಾರಾಟ ಸೇವೆಯಲ್ಲಿ ಎಂಎಸ್ಐಎಲ್ ತೊಡಗಿಸಿಕೊಂಡಿದೆ.

ಅನಧಿಕೃತ ಚಿಟ್ ವ್ಯವಹಾರ ನಿಯಂತ್ರಿಸುವ ನಿಟ್ಟಿನಲ್ಲಿ ಎಂಎಸ್ಐಎಲ್ 26 ಚಿಟ್ ಶಾಖೆಗಳನ್ನು ಹೊಂದಿದ್ದು, ಎರಡು ಲಕ್ಷಕ್ಕೂ ಅಧಿಕ ಚಂದಾದಾರರು ಇದರ ಅನುಕೂಲ ಪಡೆದಿದ್ದಾರೆ. ಎಂಎಸ್ಐಎಲ್ ರಾಜ್ಯದಲ್ಲಿ 980 ಮದ್ಯ ಮಳಿಗೆಗಳನ್ನು ಒಗೊಂಡಿದ್ದು, ಗ್ರಾಹಕರಿಗೆ ಗುಣಮಟ್ಟದ ಮದ್ಯ ಪೂರೈಕೆ ಮಾಡುತ್ತಿದೆ.

ಎಂಎಸ್ಐಎಲ್ ವ್ಯವಸ್ಥಾಪಕರಾಗಿ ವಿಕಾಶ್ ಕುಮಾರ್ ವಿಕಾಶ್ ಅಧಿಕಾರ ವಹಿಸಿಕೊಂಡ ಬಳಿಕ ಸಂಸ್ಥೆ ಹೆಚ್ಚು ಲಾಭ ಗಳಿಸುತ್ತಿದೆ. 2021-22 ನೇ ಸಾಲಿನಲ್ಲಿ 2901 ಕೋಟಿ ರೂ. ವಹಿವಾಟು ನಡೆಸಿ, 91 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ. 33 ರಷ್ಟು ಹೆಚ್ಚುಲಾಭ ಗಳಿಸಿದೆ. 2022-23 ನೇ ಸಾಲಿನಲ್ಲಿ 3350 ಕೋಟಿ ರೂ. ವಹಿವಾಟು ತಲುಪುವ ನಿರಿಕ್ಷೆ ಹೊಂದಿದ್ದು, 110 ಕೋಟಿ ರೂ ಲಾಭ ಗಳಿಸುವ ನಿರೀಕ್ಷೆ ಹೊಂದಿದೆ.

MSIL MD Vikash kumar Vikash awarded to Asia One Global India of the Year

ಹೀಗೆ ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ವಹಿವಾಟು ನಡೆಸಿದ ಹಿನ್ನೆಲೆಯಲ್ಲಿ ಎಂಎಸ್ಐಎಲ್ ದಾಖಲಿಸಿದ ಪ್ರಗತಿ ಗಮನಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

English summary
MSIL MD Vikash kumar vikash awarded to Asia One Global India of the Year know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X