ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್ ತಡೆಗೆ ನಾಳೆ ಸಭೆ ಉನ್ನತಮಟ್ಟದ ಸಭೆ- ಸಿಎಂ ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು ಆಗಸ್ಟ್ 1: ಇತ್ತೀಚಿನ ಮಳೆಯಿಂದಾದ ಹಾನಿ ಕುರಿತು ವಿವರಗಳನ್ನು ಪಡೆದುಕೊಳ್ಳಲು ಹಾಗೂ ಮಂಕಿಪಾಕ್ಸ್ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವರು ಹಾಗೂ ಇಲಾಖೆಯೊಂದಿಗೆ ನಾಳೆ (ಆ.2) ಎರಡು ಸಭೆಗಳನ್ನು ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಮಂಕಿಪಾಕ್ಸ್ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವರು ಹಾಗೂ ಇಲಾಖೆಯೊಂದಿಗೆ ನಾಳೆ ಎರಡು ಸಭೆಗಳನ್ನು ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

'ಸಿದ್ದರಾಮೋತ್ಸವದಿಂದ ನಮಗೆ ಆಪತ್ತಿಲ್ಲ. ನಾವು ಸಿದ್ದರಾಮ ದೇವರ ಆರಾಧಕರು. ದೇವರ ಉತ್ಸವವನ್ನು ನಿತ್ಯ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, 'ಜಿಲ್ಲಾ ಮಟ್ಟದಲ್ಲಿ ಜನೋತ್ಸವ ಆಚರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದು, ಎಲ್ಲಿಲ್ಲಿ ಮಾಡಬೇಕೆಂದು ನಿರ್ಧಾರ ಮಾಡಲಾಗುತ್ತಿದೆ. ವಿದೇಶಿಕ ಹಾಗೂ ಜಿಲ್ಲಾ ಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ವಿವರಗಳನ್ನು 3-4 ದಿನಗಳಲ್ಲಿ ಪಕ್ಷ ಪ್ರಕಟಿಸಲಿದೆ ಎಂದರು.

ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿರುವ ಬೆನ್ನಲ್ಲೇ ಒಳಚರಂಡಿ ಕಣ್ಗಾವಲು ತಕ್ಷಣ ಪ್ರಾರಂಭಿಸುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಭಾರತದಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಮತ್ತು ಬೆಂಗಳೂರಿನಲ್ಲಿ ಎರಡು ಶಂಕಿತ ಪ್ರಕರಣಗಳು ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ-TAC) ಸಭೆ ನಡೆಸಿದ್ದು, ಮಂಗನ ಕಾಯಿಲೆ ವೈರಸ್ ಡಿಎನ್‌ಎ ಪತ್ತೆಗೆ ಅಮೆರಿಕದಲ್ಲಿ ಮಾಡಿದಂತೆ ಒಳಚರಂಡಿ ಕಣ್ಗಾವಲು ತಕ್ಷಣ ಪ್ರಾರಂಭಿಸುವಂತೆ, ದಿನನಿತ್ಯದ ತ್ಯಾಜ್ಯನೀರು ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

TAC ಅಭಿಪ್ರಾಯಪಟ್ಟಿರುವಂತೆ ಒಂದು ಪ್ರಕರಣವನ್ನು ಸಹ ಏಕಾಏಕಿ ಎಂದು ಪರಿಗಣಿಸಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕ್ಷಿಪ್ರ ಪ್ರತಿಕ್ರಿಯೆ ತಂಡಗಳಿಂದ ವಿವರವಾದ ತನಿಖೆಯನ್ನು ಮಾಡಲಾಗುವುದು ಎಂದು ಹೇಳಿದೆ.

BMRCI ಯ ವೈರಸ್ ಸಂಶೋಧನೆ

BMRCI ಯ ವೈರಸ್ ಸಂಶೋಧನೆ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಮಾದರಿಗಳನ್ನು ಪರೀಕ್ಷಿಸುವ ಮೂಲಕ ಒಳಚರಂಡಿ ಕಣ್ಗಾವಲು ಪ್ರಾರಂಭಿಸಲು ಟಿಎಸಿ ಶಿಫಾರಸು ಮಾಡಿದೆ. BMRCI ಯ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದಿಂದ ತಾಂತ್ರಿಕ ಬೆಂಬಲದೊಂದಿಗೆ ಪ್ರಸ್ತುತ ಬೆಂಗಳೂರು ನಗರದಲ್ಲಿ ಕೋವಿಡ್ -19 ಗಾಗಿ ಒಳಚರಂಡಿ ಕಣ್ಗಾವಲು ನಡೆಸುತ್ತಿರುವ ಸಾಂಕ್ರಾಮಿಕ ರೋಗ ಸಂಶೋಧನಾ ಪ್ರತಿಷ್ಠಾನದ (IDRFRF) ಮೂಲಕ ಇದನ್ನು ಮಾಡಬೇಕು ಎಂದು ಹೇಳಿದೆ.

ಜುಲೈನಲ್ಲಿ, IDRF KIA, ಅಪಾರ್ಟ್‌ಮೆಂಟ್ ಸಂಕೀರ್ಣಗಳು ಮತ್ತು ನಗರದ ಇತರೆಡೆಗಳಲ್ಲಿ 10 ಸೈಟ್‌ಗಳಲ್ಲಿ 56 ಮಾದರಿಗಳನ್ನು ಪರೀಕ್ಷಿಸಿತ್ತು. ಈ ಪೈಕಿ 46 ಮಾದರಿಗಳಲ್ಲಿ SARS-CoV-2 ಅನ್ನು ಪತ್ತೆಹಚ್ಚಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಮಂಗನ ಕಾಯಿಲೆಯ ನಿರ್ವಹಣೆ ಕುರಿತು RGUHS ನಿಂದ ಶೀಘ್ರದಲ್ಲೇ ತರಬೇತಿ ಕಾರ್ಯಕ್ರಮವನ್ನು ನಡೆಸಲು TAC ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

ಕೇರಳದಲ್ಲಿ ಮಂಕಿಪಾಕ್ಸ್ ತಡೆಗೆ ಕಟ್ಟೆಚ್ಚರ

ಕೇರಳದಲ್ಲಿ ಮಂಕಿಪಾಕ್ಸ್ ತಡೆಗೆ ಕಟ್ಟೆಚ್ಚರ

ಇತ್ತೀಚಿನ ದಿನಗಳಲ್ಲಿ ಮಂಕಿಪಾಕ್ಸ್‌ ಭೀತಿ ದೇಶದಲ್ಲಿ ಹೆಚ್ಚಾಗುತ್ತಿದೆ. ಕೇರಳ ಮತ್ತು ನವದೆಹಲಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಇನ್ನು ಈ ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿದೆ. ಈ ಮಧ್ಯೆ ಕೇರಳದಲ್ಲಿ ಮಂಕಿಪಾಕ್ಸ್‌ ಲಕ್ಷಣಗಳಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಎಲ್ಲೆಡೆ ಭಯವನ್ನು ಮೂಡಿಸಿದೆ.

ಕೇರಳದ ತ್ರಿಶೂರ್‌ನಲ್ಲಿ ಮಂಕಿಪಾಕ್ಸ್‌ ಗುಣಲಕ್ಷಣಗಳಿಂದ ಬಳಲುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 22 ವರ್ಷದ ಯುವಕ ಕಳೆದ ತಿಂಗಳು ಮಧ್ಯಪ್ರಾಚ್ಯ ದೇಶದಿಂದ ಬಂದಿದ್ದ. ಆ ಬಳಿಕ ಆತನ ಪ್ರಯಾಣದ ದಾಖಲೆಗಳನ್ನು ಕಲೆ ಹಾಕುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.

ಆರೋಗ್ಯ ಇಲಾಖೆಯಿಂದ ಪುನ್ನಯೂರಿನಲ್ಲಿ ಸಭೆ

ಆರೋಗ್ಯ ಇಲಾಖೆಯಿಂದ ಪುನ್ನಯೂರಿನಲ್ಲಿ ಸಭೆ

ಚಾವಕ್ಕಾಡ್ ಕುರಂಜಿಯೂರಿನಲ್ಲಿ ಮಂಕಿಪಾಕ್ಸ್‌ ಲಕ್ಷಣಗಳಿರುವ ವ್ಯಕ್ತಿಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿದೇಶದಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಪಾಸಿಟಿವ್‌ ಬಂದಿತ್ತು ಎಂದು ಈ ವೇಳೆ ಅವರು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯಲು ವಿಳಂಬವಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಅವರು, ಮಂಕಿಪಾಕ್ಸ್‌ನಿಂದ ಯುವಕ ಸಾವನ್ನಪ್ಪಿರುವ ಕುರಿತು ಆರೋಗ್ಯ ಇಲಾಖೆ ಪುನ್ನಯೂರಿನಲ್ಲಿ ಸಭೆ ಕರೆದಿದೆ.

Recommended Video

Basavaraj Bommai ಅವರಿಗೂ ತಟ್ಟಿದ ಮಳೆ ಎಫೆಕ್ಟ್ | *Politics | OneIndia Kannada

English summary
Chief Minister Basavaraja Bommai said that he will hold two meetings with the health minister and the department tomorrow to get details about the recent rains and about the measures that can be taken about monkeypox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X