KRS Dam Water Level: 104 ಅಡಿಗೆ ಕುಸಿದ ನೀರಿನ ಮಟ್ಟ, ಮಂಡ್ಯ, ಬೆಂಗಳೂರು, ಮೈಸೂರು ಜಿಲ್ಲೆಗಳ ಜನರಿಗೆ ಆತಂಕ
ಕರ್ನಾಟಕ, ಆಗಸ್ಟ್, 23: ಮಳೆರಾಯ ಕರುಣೆ ತೋರದ ಹಿನ್ನೆಲೆ ಆಗಸ್ಟ್ ತಿಂಗಳ ಆರಂಭದಿಂದಲೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರುತ್ತಲೇ ಇದೆ. ಅಲ್ಲದೆ ಪ್ರಮುಖ ಜಲಾಶಯಗಲ್ಲಿ ನೀರಿನ ಮಟ್ಟವೂ ಕೂಡ ಕುಸಿಯುತ್ತಿದೆ. ಅದರಲ್ಲೂ ಇಂದು (ಆಗಸ್ಟ್ 23) ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ (KRS)ದಲ್ಲಿ ನೀರಿನ ಮಟ್ಟ 104 ಅಡಿಗೆ ಕುಸಿದಿದೆ.
ಇದೀಗ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗತ್ತಲೇ ಇದ್ದು, ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇದನ್ನು ಗಮನಿಸಿದೆ ಬೇಸಿಗೆ ಕಣ್ಣಮುಂದೆ ಬಂದಾಂತಾಗುತ್ತದೆ. ಮತ್ತೊಂದೆಡೆ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳ ಕೊನೆಯಲ್ಲಿ ಮಳೆಯಾಗದಿದ್ದರೆ ಭರದ ಛಾಯೆ ಆವರಿಸುವುದಂತೂ ಖಚಿತ ಎನ್ನುವಂತಾಗಿದೆ.

ಇಂದು (ಬುಧವಾರ) ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 104.62 ಅಡಿಗೆ ಕುಸಿತ ಕಂಡಿದೆ. ಇದರಿಂದ ಇದನ್ನೇ ನಂಬಿಕೊಂಡು ಕುಳಿತಿದ್ದ ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿ ನಗರಿ ಮೈಸೂರು, ರಾಜ್ಯದ ರಾಜಧಾನಿ ಬೆಂಗಳೂರಿನ ಜನರಲ್ಲಿ ಆತಂಕ ಮನೆ ಮಾಡಿದೆ. ಹಾಗಾದರೆ ಇನ್ನುಳಿದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 104.62 ಅಡಿ
* ಒಳಹರಿವು - 4,986 ಕ್ಯೂಸೆಕ್
* ಹೊರಹರಿವು - 11,797 ಕ್ಯೂಸೆಕ್
2. ಆಲಮಟ್ಟಿ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 519.60 ಮೀಟರ್
* ಒಳಹರಿವು - 901 ಕ್ಯೂಸೆಕ್
* ಹೊರಹರಿವು - 901 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,627.06 ಅಡಿ
* ಒಳಹರಿವು - 1,098 ಕ್ಯೂಸೆಕ್
* ಹೊರಹರಿವು - 10,325 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಇಂದಿನ ನೀರಿನ ಮಟ್ಟ - 2,067.20 ಅಡಿ
* ಒಳಹರಿವು - 194 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,790.25 ಅಡಿ
* ಒಳಹರಿವು - 4,745 ಕ್ಯೂಸೆಕ್
* ಹೊರಹರಿವು - 7,852.70 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,276.40 ಅಡಿ
* ಒಳಹರಿವು - 3,659 ಕ್ಯೂಸೆಕ್
* ಹೊರಹರಿವು - 4,825 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 166 ಅಡಿ
* ಒಳಹರಿವು - 3,467 ಕ್ಯೂಸೆಕ್
* ಹೊರಹರಿವು - 3,224 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,164.75 ಅಡಿ
* ಒಳಹರಿವು - 1,798 ಕ್ಯೂಸೆಕ್
* ಹೊರಹರಿವು - 3,955 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,912.15 ಅಡಿ
* ಒಳಹರಿವು - 2,747 ಕ್ಯೂಸೆಕ್
* ಹೊರಹರಿವು - 6,450 ಕ್ಯೂಸೆಕ್
10. ಸೂಪಾ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 546.38 ಮೀಟರ್
* ಒಳಹರಿವು - 3,927 ಕ್ಯೂಸೆಕ್
* ಹೊರಹರಿವು - 5,341 ಕ್ಯೂಸೆಕ್
11. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,858.50 ಅಡಿ
* ಒಳಹರಿವು - 1,310 ಕ್ಯೂಸೆಕ್
* ಹೊರಹರಿವು - 2,100 ಕ್ಯೂಸೆಕ್
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications