PGCET 2026 ಮೊದಲ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟ: MBA, MCA, M.tech ಸೇರಿ 23,164 ಸೀಟು ಅಲಾಟ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದ ವಿವಿಧ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಿದ್ದ ಪಿಜಿಸಿಇಟಿ 2026ರ ಪರೀಕ್ಷೆಯ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಇದೀಗ ಅಧಿಕೃತವಾಗಿ ಪ್ರಕಟಿಸಿದೆ.

ಕರ್ನಾಟಕದಾದ್ಯಂತ ಎಂಬಿಎ, ಎಂಸಿಎ , ಎಂ.ಇ, ಎಂ.ಟೆಕ್ ಹಾಗೂ ಎಂ.ಆರ್ಕ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈ ಫಲಿತಾಂಶ ನಿರಾಳತೆ ತಂದಿದೆ. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಅಭ್ಯರ್ಥಿಗಳು ಇದೀಗ ತಮ್ಮ ಸೀಟು ಹಂಚಿಕೆ ವಿವರವನ್ನು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.

KEA PGCET 2026 First Round Seat Allotment Results Declared Over 23 000 Seats Allotted

ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಈ ಪಿಜಿಸಿಇಟಿ 2026ರ ಸೀಟು ಹಂಚಿಕೆ ಪ್ರಕ್ರಿಯೆ ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು, ತಮ್ಮ ಭವಿಷ್ಯದ ವೃತ್ತಿಜೀವನ ರೂಪಿಸಿಕೊಳ್ಳಲು ಇದೊಂದು ಪ್ರಮುಖ ಮೆಟ್ಟಿಲಾಗಿದೆ.

KEA ಎಂಬಿಎ ಪ್ರವೇಶ ಮತ್ತು ಸೀಟು ಹಂಚಿಕೆಯ ಸಮಗ್ರ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಬಿಡುಗಡೆ ಮಾಡಿರುವ ಅಧಿಕೃತ ಪತ್ರಿಕಾ ಪ್ರಕಟಣೆ ಮತ್ತು ಮಾಹಿತಿಯ ಪ್ರಕಾರ, ಈ ಮೊದಲ ಸುತ್ತಿನಲ್ಲಿ ಒಟ್ಟು 23,164 ಸೀಟುಗಳನ್ನ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ.

ಈ ಪೈಕಿ ವಾಣಿಜ್ಯ ಮತ್ತು ಆಡಳಿತ ವಿಭಾಗದ ಅತಿ ಹೆಚ್ಚು ಬೇಡಿಕೆಯ ಕೋರ್ಸ್ ಆದ ಎಂಬಿಎ (MBA) ಕೋರ್ಸ್‌ಗೆ ಗರಿಷ್ಠ ಪ್ರಮಾಣದಲ್ಲಿ, ಅಂದರೆ 11,462 ವಿದ್ಯಾರ್ಥಿಗಳಿಗೆ ಸೀಟುಗಳನ್ನು ಅಲಾಟ್ ಮಾಡಲಾಗಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ಮ್ಯಾನೇಜ್‌ಮೆಂಟ್ ವೃತ್ತಿಪರರಿಗೆ ಇರುವ ಬೇಡಿಕೆಯನ್ನ ಇದು ತೋರಿಸುತ್ತದೆ.

ಅದೇ ರೀತಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನ ಒದಗಿಸುವ ಎಂಸಿಎ ಕೋರ್ಸ್‌ಗೆ 8,093 ವಿದ್ಯಾರ್ಥಿಗಳು ಸೀಟು ಪಡೆದುಕೊಂಡಿದ್ದಾರೆ.

ಇನ್ನು ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ಹಾಗೂ ಸಂಶೋಧನೆಗೆ ಬೇಕಾದ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಯಾದ ಎಂ.ಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್‌ಗಳಿಗೆ ಒಟ್ಟು 3,609 ಸೀಟುಗಳನ್ನ ಮೆರಿಟ್, ವಿದ್ಯಾರ್ಥಿಗಳ ಆಪ್ಷನ್ ಎಂಟ್ರಿ ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಆಧಾರದ ಮೇಲೆ ಪಾರದರ್ಶಕವಾಗಿ ಹಂಚಿಕೆ ಮಾಡಲಾಗಿದೆ.

ಎಂಸಿಎ ಸೀಟು ಫಲಿತಾಂಶ ಹಾಗೂ ಹಂಚಿಕೆಯಾಗದೆ ಉಳಿದಿರುವ ಸೀಟುಗಳು

ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆಯ ಬಳಿಕವೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಗಣನೀಯ ಪ್ರಮಾಣದ ಸೀಟುಗಳು ಭರ್ತಿಯಾಗದೆ ಉಳಿದುಕೊಂಡಿವೆ ಎಂಬ ಅಂಶವನ್ನ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಎಂಸಿಎ ಕೋರ್ಸ್‌ನಲ್ಲಿ ಅತಿ ಹೆಚ್ಚು ಅಂದರೆ ಬರೋಬ್ಬರಿ 9,574 ಸೀಟುಗಳು ಹಂಚಿಕೆಯಾಗದೆ ಉಳಿದಿವೆ. ಎಂಸಿಎ ಕೋರ್ಸ್‌ಗೆ ಬೇಡಿಕೆ ಇದ್ದರೂ, ಕೆಲವು ನಿರ್ದಿಷ್ಟ ಕಾಲೇಜುಗಳಿಗೆ ವಿದ್ಯಾರ್ಥಿಗಳು ಒಲವು ತೋರದ ಕಾರಣ ಈ ಸೀಟುಗಳು ಖಾಲಿ ಉಳಿದಿರುವ ಸಾಧ್ಯತೆಯಿದೆ.

ಅಂತೆಯೇ, ಎಂಬಿಎ ವಿಭಾಗದಲ್ಲಿ 2,195 ಸೀಟುಗಳು ಹಾಗೂ ಎಂ.ಟೆಕ್, ಎಂ.ಇ ಮತ್ತು ಎಂ.ಆರ್ಕ್ ನಂತಹ ತಾಂತ್ರಿಕ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 1,821 ಸೀಟುಗಳು ಯಾರಿಗೂ ಹಂಚಿಕೆಯಾಗದೆ ಹಾಗೆಯೇ ಉಳಿದುಕೊಂಡಿವೆ.

ಈ ಖಾಲಿ ಉಳಿದಿರುವ ಸೀಟುಗಳನ್ನ ಎರಡನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಮೊದಲ ಸುತ್ತಿನಲ್ಲಿ ಸೀಟ್‌ ಪಡೆಯದ ಅಥವಾ ತಮಗೆ ಸಿಕ್ಕಿರುವ ಕಾಲೇಜು ಬದಲಾಯಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಮುಂದಿನ ಸುತ್ತಿನಲ್ಲಿ ಮತ್ತೊಂದು ಅವಕಾಶ ದೊರೆಯಲಿದೆ.

ಎಂ.ಟೆಕ್ ಕೋರ್ಸ್ ಮಾಹಿತಿ

ಮೊದಲ ಸುತ್ತಿನಲ್ಲಿ ತಮಗೆ ಇಷ್ಟವಾದ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿರುವ ಅಭ್ಯರ್ಥಿಗಳು, ಮುಂದಿನ ಪ್ರವೇಶ ಪ್ರಕ್ರಿಯೆಗಳ ಬಗ್ಗೆ ಗಮನಹರಿಸುವುದು ಮುಖ್ಯ. ಈ ಬಗ್ಗೆ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು, "ಸೀಟು ಪಡೆದ ಅಭ್ಯರ್ಥಿಗಳ ಪ್ರವೇಶ ಪ್ರಕ್ರಿಯೆಯ ಮುಂದಿನ ಹಂತದ ಸಂಪೂರ್ಣ ವೇಳಾಪಟ್ಟಿಯನ್ನ ಕೇವಲ ಒಂದೆರಡು ದಿನಗಳಲ್ಲಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು," ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕಟವಾಗಲಿರುವ ಈ ವೇಳಾಪಟ್ಟಿಯು ವಿದ್ಯಾರ್ಥಿಗಳು ಚಾಯ್ಸ್ ದಾಖಲಿಸುವ ವಿಧಾನ, ಶುಲ್ಕ ಪಾವತಿ ಮಾಡುವ ದಿನಾಂಕ, ಪ್ರವೇಶಾತಿ ಆದೇಶ ಡೌನ್‌ಲೋಡ್ ಮಾಡುವ ಪ್ರಕ್ರಿಯೆ, ಹಾಗೂ ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಖುದ್ದಾಗಿ ಭೇಟಿ ನೀಡಿ ರಿಪೋರ್ಟ್ ಮಾಡಿಕೊಳ್ಳಬೇಕಾದ ಕಡೆಯ ದಿನಾಂಕದ ಸಂಪೂರ್ಣ ವಿವರಗಳನ್ನ ಒಳಗೊಂಡಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+