Temple: ದೇವಸ್ಥಾನಗಳ ₹800 ಕೋಟಿ ಬಿಡುಗಡೆಗೆ ಆಗ್ರಹ, ಶ್ಲೋಕ ಹೇಳುವವರಿಂದ ಹಿಂದೂ ವಿರೋಧಿ ನಿಲುವು

ಬೆಂಗಳೂರು: ಭಕ್ತರು ಭಕ್ತಿಯಿಂದ ದೇವರ ಹುಂಡಿಗೆ ಸಮರ್ಪಿಸಿದ ಕಾಣಿಕೆ, ದೇವಾಲಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣ ಕಾಂಗ್ರೆಸ್ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬಳಕೆಯಾಗದೇ ಉಳಿದಿದೆ ಎಂದರೆ ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನಿಲುವಿಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಡ. ಹಿಂದೂ ದೇವಸ್ಥಾನಗಳ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಗೇ ವಿನಿಯೋಗವಾಗಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ) ದೇವಾಲಯಗಳಿಂದ ಸಂಗ್ರಹವಾದ 800 ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಧಾರ್ಮಿಕ ಇಲಾಖೆಗೆ ಸಂಬಂಧಿಸಿದ ಮಂದಿರ, ಚರ್ಚ್‌ಗಳಿಗೆ, ಮಸೀದಿಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ದೇಸ್ಥಾನಗಳಿಂದಳೇ ಸಂಗ್ರಹವಾದ ಹಣ ದೇವಾಲಯಗಳ ಅಭಿವೃದ್ಧಿ ಬಳಕೆ ಆಗದಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Karnataka Temple Funds

ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಸರ್ಕಾರ ಹಿಂದೂಗಳಿಗೆ ಚೊಂಬು ಕೊಟ್ಟಿದೆ' ಎಂಬ ಶಿರ್ಷಿಕೆಯಡಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಮುಂದುವರಿದು ಅವರು, 'ಬಾಯಿ ತೆಗೆದರೆ ಸಂಸ್ಕೃತ ಶ್ಲೋಕ ಹೇಳುವ, ನಾಮ ಎಳೆದುಕೊಂಡು ದೇವಸ್ಥಾನ ತಿರುಗುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ಎಂಬಂತೆ ನಡೆದುಕೊಂಡಿದ್ದಾರೆ. ಭಕ್ತರು ಭಕ್ತಿಯಿಂದ ದೇವರ ಹುಂಡಿಗೆ ಸಮರ್ಪಿಸಿದ ಕಾಣಿಕೆ, ದೇವಾಲಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾಗಿದೆ. ಅದನ್ನು ಬಾಯಿ ಬಿಟ್ಟು ಕೇಳುವಂತಾಗಿದೆ. ಇದು ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನಿಲುವು' ಎಂದು ದೂರಿದ್ದಾರೆ.

800 ಕೋಟಿ ರೂ. ಇದ್ದರೂ ಬಿಡುಗಡೆ ಏಕಿಲ್ಲ?

'ಮುಜರಾಯಿ ಇಲಾಖೆಯ ಸಾಮಾನ್ಯ ನಿಧಿಯಲ್ಲಿ 800 ಕೋಟಿಗೂ ರೂಪಾಯಿಗೂ ಅಧಿಕ ಹಣವಿದ್ದರೂ, ಅಗತ್ಯವಿರುವ ದೇವಾಲಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಒಂದೆಡೆ ಖಜಾನೆ ಖಾಲಿಯಾಗಿದೆ, ಮತ್ತೊಂದೆಡೆ ದೇವಾಲಯಗಳ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ವಿನಿಯೋಗಿಸದೆ ತಡೆಹಿಡಿದಿರುವುದು ಕಾಂಗ್ರೆಸ್ ನ ಹಿಂದೂ ವಿರೋಧಿ ಮುಖವನ್ನು ತೋರಿಸಿದೆ‌. ದೇವಾಲಯಗಳ ಜೀರ್ಣೋದ್ಧಾರ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಹಣ ಬಳಕೆಯಾಗಬೇಕಲ್ಲವೇ? ಅನುದಾನಕ್ಕಾಗಿ ದೇವಾಲಯಗಳು ಕಾಯುವ ಸ್ಥಿತಿ ನಿರ್ಮಾಣವಾಗಬೇಕೆ?

ಭಕ್ತರ ಭಕ್ತಿಯಿಂದ ನೀಡಿದ ಹಣ ಸದುದ್ದೇಶಕ್ಕಾಗಿ ಸಕಾಲದಲ್ಲಿ ಬಳಕೆಯಾಗಬೇಕು. ದೇವಾಲಯಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಬಿಡುಗಡೆ ಮಾಡಿ, ಬಾಕಿ ಇರುವ ವ್ಯವಸ್ಥಾಪನಾ ಸಮಿತಿಗಳ ರಚನೆಯನ್ನೂ ತ್ವರಿತಗೊಳಿಸಿ ಎಂದು ಆಗ್ರಹಿಸಿದರು.

ಅಭಿವೃದ್ಧಿಗೆ ಹಿನ್ನಡೆ ಹೇಗೆ?

ಕರ್ನಾಟಕದಲ್ಲಿ 'ಎ' ಗ್ರೇಡ್ ದೇವಸ್ಥಾನಗಳು ಬಹುತೇಕ ಎಲ್ಲವುಗಳು ಕರಾವಳಿ ಭಾಗದಲ್ಲೇ ಇವೆ. ಈ ವೇವಾಲಯಗಳಿಗೆ ವ್ಯವಸ್ಥಾಪನಾ ನ ಸಮಿತಿಯನ್ನು ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲೇ ನೇಮಕ ಮಾಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಈ ಭಾಗದ ಬೇಲೂರು ಚನ್ನಕೇಶವಸ್ವಾಮಿ, ಚಾಮರಾಜನಗರ ಜಿಲ್ಲೆ ಶಿವನಸಮುದ್ರ ರಂಗನಾಥಸ್ವಾಮಿ, ಯಾದಗಿರಿ ಮೈಲಾರಪುರ ಮೈಲಾರ ಲಿಂಗೇಶ್ವರ, ಕಾಟಿಪಳ್ಳ ಮಹಾಗಣಪತಿ, ವಾಮಂಜೂರು ಅಮೃತೇಶ್ವರ ಸೇರಿ ಹಲವು ಎ ಗ್ರೇಡ್ ದೇವಾಲಯ ಸಮಿತಿ ರಚನೆ ಬಾಕಿ ಉಳಿದಿದೆ. ಇದರಿಂದ ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಹಿನ್ನಡೆ ಆಗಿದ್ದು, ಹಣ ಬಿಡುಗಡೆ ಒತ್ತಾಯ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+