Kannada: ಶಿಕ್ಷಕರ ನೇಮಕಾತಿ ವಿವಾದ: ಕನ್ನಡ ಶಿಕ್ಷಕರಿಗೆ ಅವಕಾಶ ಇಲ್ಲವೇ, ಸರ್ಕಾರದ ವಿರುದ್ಧ ಕರವೇ ಆಕ್ರೋಶ

Kannada: ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಲೆ ಕೆಟ್ಟಿದೆಯೇ, ಕನ್ನಡ ಶಿಕ್ಷಕರ ನೇಮಕಾತಿಗೆ ಅವಕಾಶ ಇಲ್ಲ ಎಂದರೆ ಏನು ಅರ್ಥ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕದ ಸರ್ಕಾರದ ಶಿಕ್ಷಣ ಇಲಾಖೆಯು ಇತ್ತೀಚೆಗೆ ಪ್ರಕಟಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸದೆ, ಸಮಾಜ ವಿಜ್ಞಾನ ಶಿಕ್ಷಕರಿಂದಲೇ ಕನ್ನಡವನ್ನು ಬೋಧಿಸುವಂತೆ ನಿರ್ಧಾರ ಕೈಗೊಂಡಿರುವುದು ಯಾಕೆ ಎನ್ನುವುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಲೆ ಕೆಟ್ಟಿದೆಯೇ? ಕೂಡಲೇ ಈ ನಿರ್ಧಾರ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಎಚ್ಚರಿಸಿದ್ದಾರೆ.

ಕನ್ನಡ ಐಚ್ಛಿಕ ವಿಷಯದಲ್ಲಿ ಪದವಿ, ಬಿ.ಎಡ್., ಟಿಇಟಿ ಸೇರಿದಂತೆ ಅಗತ್ಯ ವಿದ್ಯಾರ್ಹತೆಗಳನ್ನು ಪಡೆದು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿರುವ ಲಕ್ಷಾಂತರ ಕನ್ನಡ ಪದವೀಧರರು ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಅರ್ಜಿ ಸಲ್ಲಿಸುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇವರೇನು ಅಧಿಕಾರಿಗಳೇ ಅಥವಾ ರಾಕ್ಷಸರೆ. ಇದು ಉದ್ಯೋಗದ ವಿಷಯ ಮಾತ್ರವಲ್ಲ, ಇವರು ನೇರವಾಗಿ ಕನ್ನಡದ ಕತ್ತು ಹಿಸುಕುತ್ತಿದ್ದಾರೆ. ರಾಜ್ಯ ಸರ್ಕಾರ ಇವರಿಗೆ ಸರ್ವಾಧಿಕಾರ ನೀಡಿದೆಯೇ ಎಂದೂ ಪ್ರಶ್ನೆ ಮಾಡಿದ್ದಾರೆ.

Kannada

ಮುಂದುವರಿದು ಕನ್ನಡವನ್ನು ಯಾವುದೇ ಶಿಕ್ಷಕರು ಪೂರಕ ವಿಷಯವಾಗಿ ಬೋಧಿಸುವ ಭಾಷೆಯಲ್ಲ. ಕನ್ನಡಕ್ಕೆ ತನ್ನದೇ ಆದ ಸಾಹಿತ್ಯ, ವ್ಯಾಕರಣ, ಭಾಷಾ ವೈಜ್ಞಾನಿಕ ನೆಲೆ ಮತ್ತು ಬೋಧನಾ ವಿಧಾನವಿದೆ. ಅದನ್ನು ಕನ್ನಡ ವಿಷಯದಲ್ಲಿ ಪರಿಣತಿ ಹೊಂದಿರುವ ಶಿಕ್ಷಕರೇ ಬೋಧಿಸಬೇಕು.

ಸಮಾಜ ವಿಜ್ಞಾನ ಶಿಕ್ಷಕರಿಗೆ ಕನ್ನಡ ಬೋಧನೆಯ ಜವಾಬ್ದಾರಿ ನೀಡುವುದು ಶಿಕ್ಷಣದ ಗುಣಮಟ್ಟವನ್ನೇ ಹಾಳು ಮಾಡುವ ನಿರ್ಧಾರವಾಗಿದೆ. ಆಕ್ಷೇಪಣೆ ಸಲ್ಲಿಸಲು ಇನ್ನೆರಡು ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು, ಕನ್ನಡ ಪದವೀಧರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸಿ ಈ ಅನ್ಯಾಯವನ್ನು ತಡೆಯಬೇಕು. ಇಂತಹ ಕನ್ನಡ ವಿರೋಧಿ ಆದೇಶ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದಿದ್ದಾರೆ.

ಸರ್ಕಾರ ಕನ್ನಡ ಶಿಕ್ಷಕರ ಹುದ್ದೆಗಳನ್ನು ಸಮಾಜ ವಿಜ್ಞಾನ ಶಿಕ್ಷಕರಿಗೆ ವರ್ಗಾಯಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ಕನ್ನಡ ವಿಷಯಕ್ಕೆ ಪ್ರತ್ಯೇಕ ಶಿಕ್ಷಕರ ನೇಮಕಾತಿಯನ್ನು ಕಡ್ಡಾಯಗೊಳಿಸಬೇಕು. ಕನ್ನಡ ಐಚ್ಛಿಕ ವಿಷಯ ಪದವೀಧರರಿಗೆ ನ್ಯಾಯ ಒದಗಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.

ಸರ್ಕಾರವು ಈ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ಯಾರಿಗೆ, ಹೇಗೆ ಪಾಠ ಕಲಿಸಬೇಕೋ ಕಲಿಸುತ್ತದೆ. ಕನ್ನಡವನ್ನು, ಕನ್ನಡಿಗರನ್ನು ಸರ್ವನಾಶ ಮಾಡುವ ಹುಚ್ಚಾಟ ಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+