Karnataka Reservoir: ಮಳೆ ಹುಸಿ! ಕೆಆರ್‌ಎಸ್, ಹೇಮಾವತಿ ಡ್ಯಾಂ ನೀರಿನ ಸಂಗ್ರಹ?: ರಾಜ್ಯದ ಪ್ರಮುಖ ಜಲಾಶಯಗಳ ಮಟ್ಟ
ಬೆಂಗಳೂರು: ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದ್ದು, ಇತ್ತೀಚೆಗೆ ಉಂಟಾದ ಹವಾಮಾನ ಬದಲಾವಣೆಯಿಮದ ಕೇರಳ ಭಾಗದಲ್ಲಿ ಮಳೆ ಆಗುತ್ತಿತ್ತು. ಇನ್ನಷ್ಟು ಮಳೆ ಸುರಿದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ನದಿ, ಅಲ್ಲಿಂದ ಮುಂದೆ ಕರ್ನಾಟಕದ ಜಲಾಶಯಗಳಲ್ಲಿ ನೀರು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಎಲ್ಲ ಆಸೆ ನಿರಾಸೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೊರ ಹರಿವು ಹೆಚ್ಚಾಗಿದೆ. ನೀರಿನ ಸಂಗ್ರದಲ್ಲಿ ಇಳಿಕೆ ಆಗುತ್ತಿದೆ.
ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಮಳೆ ಸಂಪೂರ್ಣ ಮಾಯವಾಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲು, ಬೆಳಗ್ಗೆ ತೀವ್ರ ಮಂಜು ಕವಿಯುತ್ತಿದೆ. ಇಲ್ಲಿ ಮಳೆ ಆಗದೇ ಹಿಂಗಾರು ಬೆಳೆಗಳು ಒಣಗಿದ್ದು, ರೈತರು ಪರಿತಪಿಸುವಂತಾಗಿದೆ. ಇನ್ನು ನೀರಾವರಿ ಭಾಗದಲ್ಲಿ ನದಿ, ಜಲಾಶಯಗಳಲ್ಲಿ ನೀರು ಕಡಿಮೆ ಆಗುತ್ತಿರುವುದು ಸಹ ಆತಂಕ ಸೃಷ್ಟಿಸಿದೆ.

ತುಂಗಭದ್ರಾ, ಹಾರಂಗಿ, ಕೃಷ್ಣ ರಾಜ ಸಾಗರ, ವಾಣಿವಾಲಯ, ಭದ್ರಾ, ಹೇಮಾವತಿ ಸೇರಿದಂತೆ ಆಯಾ ಜಲಾಶಯಗಳು, ನದಿಗಳ ಜಲಾನಯನ ಪ್ರದೇಶದಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಸಿಗೆ ಮುನ್ನವೇ ನೀರಿನ ಪ್ರಮಾಣ ತೀವ್ರವಾಗಿ ಇಳಿಕೆ ಆಗುತ್ತಿದೆ. ಇಂದು ಭಾನುವಾರ (ನವೆಂಬರ್ 29) ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಅಂಕಿ ಸಂಖ್ಯೆ ಇಲ್ಲಿದೆ..
ಪ್ರಮುಖ ಜಲಾಶಯಗಳ ನೀರಿನ ಸಂಗ್ರಹ
KRS ಜಲಾಶಯ ನೀರಿನ ಮಟ್ಟ
ಡ್ಯಾಂ ಒಟ್ಟು ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಮಟ್ಟ: 18.166 ಟಿಎಂಸಿ
ಇಂದಿನ ಒಳ ಹರಿವು: 1309 ಕ್ಯೂಸೆಕ್
ಹೊರ ಹರಿವು : 2161 ಕ್ಯೂಸೆಕ್
ಸದ್ಯದ ಸ್ಥಿತಿ: ಶೇ.36ರಷ್ಟು ಭರ್ತಿ
ಹೇಮಾವತಿ ಅಣೆಕಟ್ಟು ಇಂದಿನ ವಿವರ
ಡ್ಯಾಂ ಒಟ್ಟು ಸಾಮರ್ಥ್ಯ: 37.103 ಟಿಎಂಸಿ
ಇಂದಿನ ನೀರಿನ ಮಟ್ಟ: 17.554 ಟಿಎಂಸಿ
ಇಂದಿನ ಒಳ ಹರಿವು: 156 ಕ್ಯೂಸೆಕ್
ಹೊರ ಹರಿವು : 300 ಕ್ಯೂಸೆಕ್
ಸದ್ಯದ ಸ್ಥಿತಿ: ಶೇ.47ರಷ್ಟು ಭರ್ತಿ
ಭದ್ರಾ ಅಣೆಕಟ್ಟು ವಿವರ
ಡ್ಯಾಂ ಒಟ್ಟು ಸಾಮರ್ಥ್ಯ: 71.535 ಟಿಎಂಸಿ
ಇಂದಿನ ನೀರಿನ ಮಟ್ಟ: 54.255 ಟಿಎಂಸಿ
ಇಂದಿನ ಒಳ ಹರಿವು: 98 ಕ್ಯೂಸೆಕ್
ಹೊರ ಹರಿವು : 100 ಕ್ಯೂಸೆಕ್
ಸದ್ಯದ ಸ್ಥಿತಿ: ಶೇ. 75 ಭರ್ತಿ
ಹಾರಂಗಿ ಅಣೆಕಟ್ಟು
ಡ್ಯಾಂ ಒಟ್ಟು ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರಿನ ಮಟ್ಟ: 4.233 ಟಿಎಂಸಿ
ಇಂದಿನ ಒಳ ಹರಿವು: 118 ಕ್ಯೂಸೆಕ್
ಹೊರ ಹರಿವು : 200 ಕ್ಯೂಸೆಕ್
ಸದ್ಯದ ಸ್ಥಿತಿ: ಶೇ.49 ಭರ್ತಿ
ತುಂಗಭದ್ರಾ ಡ್ಯಾಂ ನೀರಿನ ಸ್ಥಿತಿ
ಡ್ಯಾಂ ಒಟ್ಟು ಸಾಮರ್ಥ್ಯ: 105.788 ಟಿಎಂಸಿ
ಇಂದಿನ ನೀರಿನ ಮಟ್ಟ: 21.265 ಟಿಎಂಸಿ
ಇಂದಿನ ಒಳ ಹರಿವು: 00 ಕ್ಯೂಸೆಕ್
ಹೊರ ಹರಿವು : 00 ಕ್ಯೂಸೆಕ್
ಇಂದಿನ ಸ್ಥಿತಿ: ಶೇ.20 ಭರ್ತಿ
ನಾರಾಯಣಪುರ ಅಣೆಕಟ್ಟು
ಡ್ಯಾಂ ಒಟ್ಟು ಸಾಮರ್ಥ್ಯ: 33.313 ಟಿಎಂಸಿ
ಇಂದಿನ ನೀರಿನ ಮಟ್ಟ: 19.529 ಟಿಎಂಸಿ
ಇಂದಿನ ಒಳ ಹರಿವು: 167 ಕ್ಯೂಸೆಕ್
ಹೊರ ಹರಿವು : 00 ಕ್ಯೂಸೆಕ್
ಸದ್ಯದ ಸ್ಥಿತಿ: ಶೇ.58 ಭರ್ತಿ




Click it and Unblock the Notifications
