ಪ್ರಥಮ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಫೆ.10ರಿಂದ 23ರವರೆಗೆ ಪರೀಕ್ಷೆ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಬಹುನಿರೀಕ್ಷಿತ ಪ್ರಥಮ ಪಿಯುಸಿ 2027ರ ಪರೀಕ್ಷಾ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದ್ದು, ಫೆಬ್ರವರಿ 10, 2027ರಿಂದ ವಾರ್ಷಿಕ ಪರೀಕ್ಷೆಗಳು ಆರಂಭವಾಗಿ ಫೆಬ್ರವರಿ 23, 2027ರಂದು ಮುಕ್ತಾಯಗೊಳ್ಳಲಿವೆ.
ರಾಜ್ಯ ಪಠ್ಯಕ್ರಮಕ್ಕೆ ಒಳಪಡುವ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೆನ್ ಮತ್ತು ಪೇಪರ್ (ಆಫ್‌ಲೈನ್) ಮಾದರಿಯಲ್ಲಿ ಪರೀಕ್ಷೆಗಳನ್ನ ನಡೆಸಲಾಗುತ್ತದೆ.

ಪ್ರಥಮ ಪಿಯುಸಿ ಪರೀಕ್ಷೆ ದಿನಾಂಕ ಮತ್ತು ಸಮಯ: ವಿಷಯವಾರು ಸಂಪೂರ್ಣ ವೇಳಾಪಟ್ಟಿ
ಮಂಡಳಿ ಬಿಡುಗಡೆ ಮಾಡಿರುವ ಪ್ರಥಮ ಪಿಯುಸಿ ಪರೀಕ್ಷೆ ದಿನಾಂಕದ ಪ್ರಕಾರ, ಪರೀಕ್ಷೆಗಳು ಒಂದೇ ಪಾಳಿಯಲ್ಲಿ ಅಂದರೆ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ 3 ಗಂಟೆಗಳ ಅವಧಿಯಲ್ಲಿ ನಡೆಯಲಿವೆ. ಕನ್ನಡ ಮತ್ತು ಅರೇಬಿಕ್ ಭಾಷಾ ವಿಷಯಗಳೊಂದಿಗೆ ಪರೀಕ್ಷೆ ಆರಂಭವಾಗಲಿದ್ದು, ಫೆಬ್ರವರಿ 14 ಮತ್ತು ಫೆಬ್ರವರಿ 21ರಂದು ರಜೆ ನೀಡಲಾಗಿದೆ.
ವಿಷಯವಾರು ಸಂಪೂರ್ಣ ವೇಳಾಪಟ್ಟಿ ಹೀಗಿದೆ:
* ಫೆಬ್ರವರಿ 10 - ಕನ್ನಡ, ಅರೇಬಿಕ್
* ಫೆಬ್ರವರಿ 11 - ಹಿಂದಿ
* ಫೆಬ್ರವರಿ 12 - ಇಂಗ್ಲೀಷ್
* ಫೆಬ್ರವರಿ 13 - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಅಪಾರೆಲ್ಸ್ ಮೇಡ್-ಅಪ್ಸ್ ಮತ್ತು ಹೋಮ್ ಫರ್ನಿಶಿಂಗ್, ಮಾಹಿತಿ ತಂತ್ರಜ್ಞಾನ (IT), ರಿಟೇಲ್, ಆಟೋಮೊಬೈಲ್, ಬ್ಯೂಟಿ ಮತ್ತು ವೆಲ್‌ನೆಸ್
* ಫೆಬ್ರವರಿ 14 - ರಜೆ
* ಫೆಬ್ರವರಿ 15 - ಭೂಗೋಳಶಾಸ್ತ್ರ , ಭೌತಶಾಸ್ತ್ರ
* ಫೆಬ್ರವರಿ 16 - ಇತಿಹಾಸ, ಕಂಪ್ಯೂಟರ್ ಸೈನ್ಸ್
* ಫೆಬ್ರವರಿ 17 - ರಸಾಯನಶಾಸ್ತ್ರ, ಬೇಸಿಕ್ ಗಣಿತ
* ಫೆಬ್ರವರಿ 18 - ವ್ಯವಹಾರ ಅಧ್ಯಯನ, ಮನೋವಿಜ್ಞಾನ, ಶಿಕ್ಷಣ
* ಫೆಬ್ರವರಿ 19 - ಸಮಾಜಶಾಸ್ತ್ರ, ಗಣಿತ, ಗೃಹ ವಿಜ್ಞಾನ
* ಫೆಬ್ರವರಿ 20 - ಅರ್ಥಶಾಸ್ತ್ರ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್
* ಫೆಬ್ರವರಿ 21 - ರಜೆ
* ಫೆಬ್ರವರಿ 22 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
* ಫೆಬ್ರವರಿ 23 - ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ
ಪಿಯುಸಿ ವೇಳಾಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?
1. ಮೊದಲಿಗೆ ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ.
2. ಮುಖಪುಟದಲ್ಲಿರುವ 'Karnataka timetable for I PUC annual examination - February 2027' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಈಗ ಪರದೆಯ ಮೇಲೆ ವೇಳಾಪಟ್ಟಿಯ ಪಿಡಿಎಫ್ ತೆರೆದುಕೊಳ್ಳುತ್ತದೆ.
4. ಮುಂದಿನ ಬಳಕೆಗಾಗಿ ಈ ಪಿಡಿಎಫ್ ಅನ್ನಾ ಡೌನ್‌ಲೋಡ್ ಮಾಡಿ ಸೇವ್ ಮಾಡಿಕೊಳ್ಳಿ ಅಥವಾ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.
ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ
ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ವಿಷಯಗಳ ದಿನಾಂಕಗಳನ್ನ ಸರಿಯಾಗಿ ಪರಿಶೀಲಿಸಿಕೊಂಡು ಅಧ್ಯಯನ ಯೋಜನೆ ರೂಪಿಸಿಕೊಳ್ಳಬೇಕು. ಪ್ರಾಯೋಗಿಕ ಪರೀಕ್ಷೆಗಳ ದಿನಾಂಕವನ್ನ ಆಯಾ ಕಾಲೇಜುಗಳ ಹಂತದಲ್ಲಿ ಪ್ರಕಟಿಸಲಾಗುತ್ತದೆ.




Click it and Unblock the Notifications
