ಬೆಲೆ ಏರಿಕೆಯ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳಿಗೂ ಬೀಳಲಿದೆಯೇ ಕೊಕ್ಕೆ: ಗೃಹಲಕ್ಷ್ಮಿ ಯೋಜನೆ 9 ಬ್ಯಾಂಕ್‌ಗಳಿಗೆ ಸರ್ಕಾರ ಪತ್ರ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇವೆ. ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಗೂ ಮುಂದಾಗಿದೆ. ಈಗಾಗಲೇ ನಂದಿನಿ ಹಾಲು - ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಉತ್ತರಿಸಿದ್ದಾರೆ. ಗ್ಯಾರೆಂಟ್ ಯೋಜನೆಗಳನ್ನು ನಿಭಾಯಿಸುವ ಉದ್ದೇಶದಿಂದಲೇ ಕರ್ನಾಟಕ ಸರ್ಕಾರವು ಬೆಲೆ ಏರಿಕೆಯು ಮೊರೆ ಹೋಗಿದೆ ಎಂದು ವಿರೋಧ ಪಕ್ಷದ ನಾಯಕರು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್‌ ಬಂದಿದೆ.

ಕರ್ನಾಟಕ ಸರ್ಕಾರವು ಈಚೆಗೆ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಮಾಡಿತ್ತು. ಇದೀಗ ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆ ಮಾಡುವುದಕ್ಕೆ ಮುಂದಾಗಿದೆ. ಕರ್ನಾಟಕ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಭಾರವಾಗಿದೆ ಎನ್ನುವ ಮಾತಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆಗೆ ಸರ್ಕಾರ ಮುಂದಾಗುವುದರೊಂದಿಗೆ ಈ ಬಗ್ಗೆ ಹೊಸ ಅಪ್ಡೇಟ್ಸ್‌ ಹಂಚಿಕೊಂಡಿದೆ.

Karnataka Guarantee Schemes Will Price Rise Affect Benefits Govt Writes to 9 Banks on Gruha Lakshmi

ಶೀಘ್ರದಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಮರು-ಪರಿಶೀಲನೆ ಕಾರ್ಯವನ್ನು ಪ್ರಾರಂಭಿಸಲಾಗುವುದು. ಮರು-ಪರಿಶೀಲನೆಯ ಮೂಲ ಉದ್ದೇಶದ ಹಿಂದೆ 2 ಪ್ರಮುಖ ಕಾರಣಗಳು ಇರುವುದಾಗಿ ಹೇಳಲಾಗಿದೆ. ಅದರಲ್ಲಿ ಮೊದಲನೆಯದಾಗಿ ಮರಣ ಹೊಂದಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿರುವ ಹಣವನ್ನು ತಡೆಗಟ್ಟುವುದು ಹಾಗೂ ಮತ್ತೊಂದು ಕರ್ನಾಟಕದ ಮಹಿಳೆಯರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳುವುದು ಎಂದು ಹೇಳಿದೆ.

ಇನ್ನು ಗೃಹಲಕ್ಷ್ಮಿ ಯೋಜನೆಯ ಪರಿಶೀಲನೆಯನ್ನು ಮೊದಲ ಹಂತದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ನಡೆಸಲಾಗುತ್ತಿದೆ.

ಜಿಬಿಎ ವ್ಯಾಪ್ತಿಯಲ್ಲಿ ಮರಣ ಹೊಂದಿರುವ ಫಲಾನುಭವಿಗಳ ವಿವರ

ಮರಣ ಹೊಂದಿರುವ ಫಲಾನುಭವಿಗಳು - 18,522

ಪಾವತಿಯಾಗಿರುವ ಅಂದಾಜು ಮೊತ್ತ - 7.18 ಕೋಟಿಗಳು

ಬ್ಯಾಂಕ್‌ಗಳಿಂದ ಹಿಂಪಡೆದಿರುವ ಮೊತ್ತ - 9.22 ಲಕ್ಷಗಳು

ಗೃಹಲಕ್ಷ್ಮಿ ಹಣ ಹಿಂದಿರುಗಿಸಲು ಬ್ಯಾಂಕ್‌ಗಳಿಗೆ ಮನವಿ

ಇನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಕೆಲವು ನಿರ್ದಿಷ್ಟ ಖಾತೆಗಳಿಗೆ ಹಂಚಿಕೆ ಆಗಿರುವ ಹಣವನ್ನು ಹಿಂದಿರುಗಿಸುವಂತೆ ಪ್ರಮುಖ 9 ಬ್ಯಾಂಕ್‌ಗಳಿಗೆ ಮನವಿ ಮಾಡಲಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಬ್ಯಾಂಕ್ ಖಾತೆಯಿಂದ ಸರ್ಕಾರದ ಖಜಾನೆಗೆ ಹಣವನ್ನು ಹಿಂದಿರುಗಿಸುವಂತೆ 9 ಪ್ರಮುಖ ಬ್ಯಾಂಕ್‌ಗಳಿಗೆ ಮನವಿ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪ ಅವರು ಮಾಹಿತಿ ನೀಡಿದ್ದಾರೆ.

ರೇಷನ್ ಕಾರ್ಡ್ - ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಅಪ್ಡೇಟ್ಸ್‌

ಇನ್ನು ಇದೇ ಸಂದರ್ಭದಲ್ಲಿ ರೇಷನ್ ಕಾರ್ಡ್ ಹಾಗೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆಯೂ ಅಪ್ಡೇಟ್ಸ್‌ ನೀಡಲಾಗಿದೆ. ಜಿಬಿಎ ವ್ಯಾಪ್ತಿಯ 1,060 ನ್ಯಾಯ ಬೆಲೆ ಅಂಗಡಿಗಳಿಂದ ಒಟ್ಟು (AAY+BPL) 5,48,038 ಪಡಿತರ ಚೀಟಿಗಳಿದ್ದು, ಒಟ್ಟು (AAY+BPL) 18,83,817 ಫಲಾನುಭವಿಗಳು ಇದ್ದಾರೆ.

1. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವ 25ಕ್ಕೂ ಅಧಿಕ ಗೋದಾಮುಗಳಲ್ಲಿ CCTV ಅಳವಡಿಸಲು ಆಹಾರ ಇಲಾಖೆಯ ಸಚಿವರು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದು, ಶೀಘ್ರದಲ್ಲೇ ಗೋದಾಮುಗಳಿಗೆ ಸಿಸಿಟಿವಿ ಅಳವಡಿಸುವ ಪ್ರಕ್ರಿಯೆ ಶುರುವಾಗಲಿದೆ.

2. ಆಹಾರ ಧಾನ್ಯ ಸಾಗಿಸುವ ವಾಹನಗಳಿಗೆ GPS ಅಳವಡಿಸಿ ಕೇಂದ್ರ ಕಚೇರಿಯ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ನಿಂದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ.

3. ನ್ಯಾಯಬೆಲೆ ಅಂಗಡಿಗಳಲ್ಲಿ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ ಮತ್ತು IRIS scanner ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

4. ಸರ್ವರ್ (Servor) ಸಮಸ್ಯೆ ಬಗೆಹರಿಸಲು, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ (KMEA) ನೀಡಿರುವ ವರದಿಯ ಆಧಾರದ ಮೇಲೆ ಮೂರನೇ ಏಜೆನ್ಸಿ ಮೂಲಕ ಸರ್ವರ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

5. ಸದ್ಯಕ್ಕೆ ಯಾವುದೇ ಪಡಿತರ ಚೀಟಿ ರದ್ದು ಮಾಡುವುದಿಲ್ಲ ಎಂದು ಆಹಾರ ಇಲಾಖೆಯ ನೂತನ ಸಚಿವರು ಭರವಸೆ ನೀಡಿದ್ದಾರೆ.

6. ಈಗಾಗಲೇ 85% ಇ-KYC ಪೂರ್ಣಗೊಂಡಿದ್ದು, ನವೆಂಬರ್ 10, 2026ರ ವರೆಗೆ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

7. ಅಕ್ಟೋಬರ್ 1 ರಿಂದ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲು ಸೂಚನೆ ನೀಡಲಾಗಿದೆ ಎಂದೂ ಜಿ. ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆ

ಗೃಹಜ್ಯೋತಿ ಮರು-ಪರಿಶೀಲನೆಗೆ ರೂಪುರೇಷೆಗಳು ಸಿದ್ಧವಾಗುತ್ತಿದ್ದು, ಫಲಾನುಭವಿಗಳ ಬಯೋಮೆಟ್ರಿಕ್/ಮುಖಚರ್ಯೆ ಗುರುತಿಸುವಿಕೆ (Facial Authentication) ದೃಢೀಕರಣದ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮರು-ಪರಿಶೀಲನೆ ನಡೆಸಲು ಯೋಜನೆ ರೂಪಿಸಲಾಗಿದೆ. ಮರು-ಪರಿಶೀಲನೆ ಪ್ರಕ್ರಿಯೆಯನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (EDCS) ಅಭಿವೃದ್ಧಿ ಪಡಿಸಿರುವ ವೆಬ್ ಅಪ್ಲಿಕೇಶನ್/ಮೊಬೈಲ್ ಅಪ್ಲಿಕೇಶನ್ ತಂತ್ರಾಂಶದ ಮೂಲಕ ಮರು-ಪರಿಶೀಲನೆಯನ್ನು ಮನೆ ಮನೆ ಸಮೀಕ್ಷೆ ಹಾಗೂ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ (CSC)ಗಳ ಮೂಲಕ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಅಂದಾಜು 20 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಯುವನಿಧಿ ಯೋಜನೆ: ಯಾವುದೇ ಪ್ರಮುಖ ಬದಲಾವಣೆ ಇಲ್ಲ

ಶಕ್ತಿ ಯೋಜನೆ

ರಾಜ್ಯದ ಮಹಿಳೆಯರಿಗೆ ಮಾತ್ರ ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲು ತಯಾರಿ, ಇದಕ್ಕೆ ಒಟ್ಟು 150 ಕೋಟಿ ಸರ್ಕಾರ ನೀಡಲಿದೆ. PPP ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+