ಪ್ರತಿ ಕೃಷಿ ಚಟುವಟಿಕೆಗೆ ಪ್ರತಿ ಎಕರೆಗೆ 500 ರೂ. ಪ್ರೋತ್ಸಾಹಧನ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್!

ಪ್ರತಿ ಕೃಷಿ ಚಟುವಟಿಕೆಗೆ ಪ್ರತಿ ಎಕರೆಗೆ 500 ರೂ. ಪ್ರೋತ್ಸಾಹಧನ ಸೇರಿದಂತೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್ ಕೊಡಲಾಗಿದೆ. ಈ ವಿಷಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿದ್ದಾರೆ. ಅನ್ನದಾತ ದೇಶದ ಬೆನ್ನೆಲುಬು ಎನ್ನುವುದು ಸಾರ್ವಕಾಲಿಕ ಸತ್ಯ, ಇಂತಹ ಬೆನ್ನಲುಬಿಗೆ ಬೆನ್ನೆಲುಬಾಗುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ನಮ್ಮ ಸರ್ಕಾರ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ "ಮುಖ್ಯಮಂತ್ರಿ ನೇಗಿಲ ಯೋಗಿ" ಕಾರ್ಯಕ್ರಮದ ಅನುಷ್ಠಾನಕ್ಕೆ ಅನುಮೋದಿಸಲಾಗಿದೆ. ಕರ್ನಾಟಕದಲ್ಲಿ ಕೃಷಿ ಕಾರ್ಮಿಕರ ಕೊರತೆಯನ್ನು ತಗ್ಗಿಸಿ, ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಕೃಷಿ ಯಾಂತ್ರೀಕರಣವನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಇದರೊಂದಿಗೆ ಅರ್ಹ ರೈತರಿಗೆ ಯಾಂತ್ರೀಕೃತ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಯಾಂತ್ರೀಕೃತ ವೆಚ್ಚದ ಭಾಗವಾಗಿ ಪ್ರೋತ್ಸಾಹಧನ ಒದಗಿಸಲಾಗುವುದು ಎಂದಿದ್ದಾರೆ.

Karnataka Farmers 152 27 Crore CM Negila Yogi Scheme Up to 4 500 Incentive for Farmers

ನೋಂದಣಿ ಮಾಡಿಕೊಳ್ಳುವ ಅರ್ಹ ರೈತರು ನೋಂದಾಯಿತ ಸೇವಾ ಪೂರೈಕೆದಾರರಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆದು, ಕೈಗೊಂಡ ಯಾಂತ್ರೀಕೃತ ಕೃಷಿ ಚಟುವಟಿಕೆಗಳ ವೆಚ್ಚದ ಭಾಗವಾಗಿ ಪ್ರೋತ್ಸಾಹಧನ ಪಡೆಯುತ್ತಾರೆ. ಈ ಹೊಸ ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಗೆ ಒಂದು ತಾಲೂಕಿನಂತೆ ಆಯ್ಕೆ ಮಾಡಿ 31ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಹಣಕಾಸು ವರ್ಷದಲ್ಲಿ ಒಟ್ಟು ₹152.278 ಕೋಟಿ ಅನುದಾನದಲ್ಲಿ ಅನುಷ್ಠಾನ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.

ಪ್ರತಿ ಕೃಷಿ ಚಟುವಟಿಕೆಗೆ ಪ್ರತಿ ಎಕರೆಗೆ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಒಂದು ವರ್ಷದಲ್ಲಿ ಪ್ರತಿ ಎಕರೆಗೆ ಗರಿಷ್ಠ ಮೂರು ಅರ್ಹ ಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಪ್ರತಿ ಎಕರೆಗೆ ಗರಿಷ್ಠ 1,500 ರೂ. ಪ್ರೋತ್ಸಾಹಧನ ನೀಡಲಾಗುವುದು.

ಪ್ರತಿ ರೈತನಿಗೆ ವರ್ಷಕ್ಕೆ ಗರಿಷ್ಠ 3 ಎಕರೆ ಪ್ರದೇಶಕ್ಕೆ ಮಾತ್ರ ಸಹಾಯಧನ ಸೀಮಿತವಾಗಿದ್ದು, ಪ್ರತಿ ರೈತನಿಗೆ ಗರಿಷ್ಠ 4500 ರೂ. ಪ್ರೋತ್ಸಾಹಧನ ನೀಡಲಾಗುವುದು.

ಕನಿಷ್ಠ 20ಗುಂಟೆ ಜಮೀನು ಇರುವ ಪ್ರದೇಶಕ್ಕೆ ಮಾತ್ರ ಯಾಂತ್ರೀಕೃತ ಕೃಷಿ ಚಟುವಟಿಕೆಗೆ ನೊಂದಣಿ ಮಾಡಲು ಅರ್ಹತೆ ಇರುತ್ತದೆ.

ಮುಖ್ಯಮಂತ್ರಿ ನೇಗಿಲ ಯೋಗಿ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲೆಯಿಂದ ಚಿತ್ತಾಪುರ ತಾಲೂಕು ಆಯ್ಕೆಯಾಗಿದ್ದು, ತಾಲೂಕಿನ ರೈತರ ಕೃಷಿ ಚಟುವಟಿಕೆಗಳ ಉತ್ತೇಜನಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಸಂಕಷ್ಟದಲ್ಲಿದ್ದ 51 ಕುಟುಂಬಗಳಿಗೆ ಅನುಕಂಪದ ಉದ್ಯೋಗದ ಆಸರೆ

ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಬೆನ್ನೆಲುಬಾಗಿ ನಿಂತಿದೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೇಳಿದೆ. ಸಚಿವರಾದ ಯು.ಟಿ ಖಾದರ್‌ ಅವರ ನೇತೃತ್ವದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ 51 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ ಎಂದು ಹೇಳಲಾಗಿದೆ.

ಅನುಕಂಪದ ಉದ್ಯೋಗದ ಮೂಲಕ ಅರ್ಹ ಕುಟುಂಬಗಳಿಗೆ ನೆರವು, ಭದ್ರತೆ ಮತ್ತು ಹೊಸ ಭರವಸೆ ಮೂಡಿಸಲಾಗಿದೆ. ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲುವುದು, ಅವರ ನೋವಿಗೆ ಸ್ಪಂದಿಸುವುದು ಹಾಗೂ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸುವುದೇ ಜನಪರ ಸರ್ಕಾರದ ನಿಜವಾದ ಕಾಳಜಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+