Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಶತಕ ದಾಟಿದ ಕೆಆರ್‌ಎಸ್
ಕರ್ನಾಟಕ, ಜುಲೈ, 26: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಲೇ ಇದೆ. ಇದರಿಂದ ಅನ್ನದಾತರ ಮುಖದಲ್ಲೂ ಕಳೆ ಬಂದಂತಾಗಿದೆ. ಅದರಲ್ಲೂ ಕೆಆರ್‌ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 102.35 ಅಡಿಗೆ ಏರಿಕೆಯಾಗಿದೆ. ಹಾಗಾದರೆ ಇನ್ನುಳಿದ ಜಲಾಶಯ ನೀರಿನ ಮಟ್ಟದ ವಿವರವನ್ನು ಇಲ್ಲಿ ಗಮನಿಸಿ
ಅಬ್ಬರದ ಮಳೆ ಹಿನ್ನೆಲೆ ಈಗಾಗಲೇ ಈಗಾಗಲೇ ದಿನದಿಂದ ದಿನಕ್ಕೆ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳ ಅಕ್ಕಪಕ್ಕದಲ್ಲಿ ವಾಸ ಮಾಡುವಂತಹ ಜನರಿಗೆ ಬೇರೆಡೆ ಸ್ಥಳಾಂತರವಾಗುವಂತೆಯೂ ಎಚ್ಚರಿಕೆ ಸಂದೇಶವನ್ನು ಸಹ ರವಾನೆ ಮಾಡಲಾಗಿದೆ.

ಮತ್ತೊಂದೆಡೆ ನೋಡುವುದಾದರೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ. ಅಲ್ಲದೆ ಇದೀಗ ಈ ಜಲಾಶಯದ ಮಟ್ಟ 102.35 ಅಡಿ ಆಗಿದೆ. ಹಾಗಾದರೆ ಕೆಆರ್‌ಎಸ್ ಸೇರಿದಂತೆ ಪ್ರಮುಖ ಇನ್ನುಳಿದ ಜಲಾಶಯಗಳ ನೀರಿನ ಪ್ರಮಾಣದ ವಿವರವನ್ನು ಇಲ್ಲಿ ತಿಳಿಯಿರಿ.
| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಮೀಟರ್) | ಒಟ್ಟು ಸಾಮರ್ಥ್ಯ | ಇಂದಿನ ನೀರಿನ ಮಟ್ಟ(ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) | ಒಳಹರಿವು | ಹೊರಹರಿವು |
| ಕೆಆರ್‌ಎಸ್ ಜಲಾಶಯ | 124.80 | 49452 | 97.50 | 124.65 | 49,280 | 5,067 |
| ಆಲಮಟ್ಟಿ ಜಲಾಶಯ | 519.6 | 123.08 | 71.81 | 100.05 | 11,16,263 | 8857 |
| ತುಂಗಭದ್ರಾ ಜಲಾಶಯ | 497.71 | 105.79 | 31.66 | 104.91 | 72,489 | 253 |
| ಮಲಪ್ರಭಾ ಜಲಾಶಯ | 633.8 | 37.73 | 14.33 | 24.42 | 19,106 | 194 |
| ಲಿಂಗನಮಕ್ಕಿ ಜಲಾಶಯ | 554.44 | 151.75 | 52.75 | 91.38 | 67,317 | 0 |
| ಕಬಿನಿ ಜಲಾಶಯ | 696.13 | 19.52 | 17.35 | 19.40 | 25,896 | 11,250 |
| ಭದ್ರಾ ಜಲಾಶಯ | 657.73 | 71.54 | 36.53 | 70.02 | 31425 | 175 |
| ಘಟಪ್ರಭಾ ಜಲಾಶಯ | 662.91 | 51 | 23.64 | 35.57 | 34,938 | 100 |
| ಹೇಮಾವತಿ ಜಲಾಶಯ | 890.58 | 37.1 | 23.95 | 37.10 | 25,888 | 200 |
| ವರಾಹಿ ಜಲಾಶಯ | 594.36 | 31.1 | 8.59 | 14.35 | 7,618 | 0 |
| ಸೂಫಾ ಜಲಾಶಯ | 871.38 | 8.5 | 60.89 | 66.33 | 43,560 | 0 |
| ಹಾರಂಗಿ ಜಲಾಶಯ | 871.38 | 8.5 | 6.60 | 7.61 | 19,343 | 21,166 |












Click it and Unblock the Notifications