ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಬಳಿಕ 19 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ಎಲ್ಲರ ಗಮನ ಖಾತೆ ಹಂಚಿಕೆಯತ್ತ ನೆಟ್ಟಿದೆ. ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಆಗಸ್ಟ್‌ 03 ರಂದು ತರಾತುರಿಯಲ್ಲೇ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಕೂಡ ನಡೆಯಿತು. ನೂತನ ಸಚಿವರಿಗೆ ಯಾವ-ಯಾವ ಖಾತೆಗಳನ್ನ ಹಂಚಿಕೆ ಮಾಡಲಾಗುತ್ತೆ ಎನ್ನುವ ಬಗ್ಗೆ ರಾಜ್ಯದ ಜನರಿಗೂ ಕುತೂಹಲವಿದೆ. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲಿ 33 ಸಚಿವರಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಕೂಡ ಚರ್ಚೆ ನಡೆದಿದ್ದು, ಯಾರ್ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಸಂಭಾವ್ಯ ಪಟ್ಟಿ.

Karnataka Cabinet Expansion Likely Portfolios for 19 Newly Inducted Ministers here is the list

ನೂತನ ಸಚಿವರಿಗೆ ಸಂಭಾವ್ಯ ಖಾತೆಗಳು

* ಪಿ.ಎಂ. ನರೇಂದ್ರಸ್ವಾಮಿ - ಸಮಾಜ ಕಲ್ಯಾಣ ಇಲಾಖೆ

* ಬಸವರಾಜ ರಾಯರೆಡ್ಡಿ - ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಪ್ರವಾಸೋದ್ಯಮ

* ಎಸ್.ಎಸ್. ಮಲ್ಲಿಕಾರ್ಜುನ - ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ

* ಎನ್. ಚಲುವರಾಯಸ್ವಾಮಿ - ಕೃಷಿ

* ಕೆ.ಎಂ. ಶಿವಲಿಂಗೇಗೌಡ - ವಸತಿ

* ಲಕ್ಷ್ಮಣ ಸವದಿ - ಸಹಕಾರ ಮತ್ತು ಸಕ್ಕರೆ

* ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

* ಜಮೀರ್ ಅಹ್ಮದ್ ಖಾನ್ - ವಕ್ಫ್, ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ

* ಕೆ.ಎನ್. ಬಸವಂತಪ್ಪ - ಪೌರಾಡಳಿತ

* ವಿಜಯಾನಂದ ಕಾಶಪ್ಪನವರ್ - ಕೈಮಗ್ಗ, ಜವಳಿ ಹಾಗೂ ಕೃಷಿ ಮಾರುಕಟ್ಟೆ

* ಅಜಯ್ ಸಿಂಗ್ - ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು

* ರುದ್ರಪ್ಪ ಲಮಾಣಿ - ಅಬಕಾರಿ

* ಹೆಚ್.ಸಿ. ಬಾಲಕೃಷ್ಣ - ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ

* ರಿಜ್ವಾನ್ ಅರ್ಷದ್ - ಉನ್ನತ ಶಿಕ್ಷಣ

* ಪುಟ್ಟರಂಗಶೆಟ್ಟಿ - ಪಶುಸಂಗೋಪನೆ ಮತ್ತು ರೇಷ್ಮೆ

* ಬಿ. ನಾಗೇಂದ್ರ - ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ

* ಸಂತೋಷ್ ಎಸ್. ಲಾಡ್ - ಕಾರ್ಮಿಕ ಇಲಾಖೆ

* ಶಿವರಾಜ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ

* ಟಿ. ರಘುಮೂರ್ತಿ - ಪರಿಶಿಷ್ಟ ವರ್ಗಗಳ ಕಲ್ಯಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+