ಕನಕದಾಸ ಜಯಂತಿ, ಗುರುವಾರ ಬ್ಯಾಂಕ್ ರಜಾ ಇಲ್ಲ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16 : ಕರ್ನಾಟಕದ ಜನತೆಗೆ ಹಣಕಾಸಿನ ತೀವ್ರ ಅಗತ್ಯವಿರುವ ಕಾರಣ, ಕನಕದಾಸ ಜಯಂತಿ ಪ್ರಯುಕ್ತ ಗುರುವಾರ ಘೋಷಿಸಲಾಗಿದ್ದ ರಜಾವನ್ನು ಕರ್ನಾಟಕ ರದ್ದುಪಡಿಸಿದೆ. ಹೀಗಾಗಿ, ಎಲ್ಲ ಬ್ಯಾಂಕ್ ಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.

ಹಿಂದಿನ ಸುದ್ದಿ : ನಾಳೆ (ನವೆಂಬರ್ 17, ಗುರುವಾರ) ಅಪ್ಪಿತಪ್ಪಿಯಾದರೂ ಬ್ಯಾಂಕ್ ಗಳ ಕಡೇ ಹೋಗ್ಬಿಟ್ಟೀರಿ. ಯಾಕೆಂದರೆ ಕನಕ ದಾಸ ಜಯಂತಿ ಇರುವುದರಿಂದ ಬ್ಯಾಂಕ್ ಗಳಿಗೆ ರಜಾ ಇದೆ. ಆದ್ದರಿಂದ ಯಾವುದೇ ನೋಟು ಬದಲಾವಣೆ ಸಾಧ್ಯವಿಲ್ಲ ಅನ್ನೋದು ಗಮನದಲ್ಲಿ ಇರಲಿ.

ಕಳೆದ ಒಂಬತ್ತು ದಿನಗಳಿಂದ ಸರಕಾರಿ ರಜಾ ಹಾಗೂ ವಾರಾಂತ್ಯದ ದಿನಗಳಲ್ಲೂ ಭಯಂಕರ ಒತ್ತಡದ ಮಧ್ಯೆ ಕೆಲಸ ಮಾಡಿದ ನೌಕರರಿಗೆ ಒಂದಿಷ್ಟು ನೆಮ್ಮದಿ ಸಿಕ್ಕಂತಾಗಿದೆ. ಈ ರಜಾ ಕರ್ನಾಟಕಕ್ಕೆ ಮಾತ್ರ ಅನ್ವಯಿಸುತ್ತದೆ. ಈ ಬಗ್ಗೆ ಒನ್ ಇಂಡಿಯಾ ಜತೆಗೆ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ವಾಹಕಿ ಹೇಮವಲ್ಲಿ ಆವರು, ಸಂಜೆ 4.30ರವರೆಗೆ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಆದರೆ ರಜಾ ನೀಡುವ ಸಾಧ್ಯತೆ ಇದೆ ಎಂದರು.[ದುಡ್ಡು ಸಿಗ್ತಿಲ್ಲ, ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು?]

Kanaka jayanti: Banks holiday on Thursday

ಈ ಬಗ್ಗೆ ಮತ್ತೊಂದು ಬ್ಯಾಂಕ್ ನ ನಿರ್ವಾಹಕರು ಮಾತನಾಡಿ, ಸತತವಾಗಿ ಕೆಲಸ ಮಾಡಿ ಬ್ಯಾಂಕ್ ನೌಕರರು ದಣಿದಿದ್ದಾರೆ. ಜತೆಗೆ 50, 100 ರುಪಾಯಿ ನೋಟು ಅಗತ್ಯದಷ್ಟು ಲಭ್ಯವಿಲ್ಲ. ಆದ್ದರಿಂದ ರಜಾ ನೀಡುತ್ತಾರೆ. ಜತೆಗೆ ಕಾರ್ಮಿಕ ಕಾನೂನಿನ ಪ್ರಕಾರ ರಜಾ ನೀಡದೆ ಸತವಾಗಿ ಇಂತಿಷ್ಟು ದಿನ ಕೆಲಸ ಮಾಡಿಸುವಂತಿಲ್ಲ ಎಂಬ ನಿಯಮವಿದೆ ಎಂದರು.[ಹಣ ವಿನಿಮಯಕ್ಕೆ ಗುರುತಿನ ಚೀಟಿ ತೋರಿಸಿದರೆ ಸಾಕು]

ಆದರೆ, ಗುರುವಾರ ಆರ್ ಬಿಐ ಕೆಲಸ ನಿರ್ವಹಿಸುವುದರಿಂದ ಇತರ ಬ್ಯಾಂಕ್ ಗಳ ನೌಕರರು ಆರ್ ಬಿಐಗೆ ಸಂಬಂಧಿಸಿದ ವ್ಯವಹಾರಗಳನ್ನು ಪೂರ್ಣಗೊಳಿಸುವುದಕ್ಕೆ ಕೆಲಸ ಮಾಡಬೇಕಾಗುತ್ತದೆ ಎಂದು ಕೂಡ ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Banks holiday on Thursday in Karnataka on account of Kanaka jayanti. It's a welcome break to Bank staffs who have been worked relentlessly after November 8th, demonetisation.
Please Wait while comments are loading...