Hampi Express: ಹಂಪಿ ಎಕ್ಸ್‌ಪ್ರೆಸ್‌ಗೆ 46 ವರ್ಷ! ಇದೀಗ ಬಳ್ಳಾರಿ-ಹೊಸಪೇಟೆ ಮಾರ್ಗದಲ್ಲಿ ವಂದೇ ಭಾರತ್‌ಗೆ ಬೇಡಿಕೆ!
ಬಳ್ಳಾರಿ/ಬೆಂಗಳೂರು; ಕರ್ನಾಟಕದ ಎರಡು ಪ್ರಮುಖ ಭಾಗಗಳಲ್ಲಿ ಸಂಪರ್ಕಿಸುವ ಸುದೀರ್ಘ ಇತಿಹಾಸ ಹೊಂದಿರುವ ಹಂಪಿ ಎಕ್ಸ್ ರೈಲಿಗೆ ಬರೋಬ್ಬರಿ 46 ವರ್ಷಗಳು ಪೂರ್ಣಗೊಂಡಿವೆ. ಕರ್ನಾಟಕ ಆಂಧ್ರ ಮೂಲಕ ಪ್ರಮುಖ ನಗರಗಳ ಪ್ರಯಾಣಿಕರಿಗೆ ಸೇವೆ ನೀಡುತ್ತಾರೆ. ಈ ರೈಲು ಹಳೇ ಮೈಸೂರು ಭಾಗ, ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ಬೆಸೆಯುವ ಪ್ರಮುಖ ರೈಲಾಗಿದೆ. ಇದೀಗ ನಿರ್ದಿಷ್ಟ ಮಾರ್ಗ ರೈಲ್ವೆ ಬಳಕೆದಾರರು ವಂದೇ ಭಾರತ್ ರೈಲಿಗೆ ಬೇಡಿಕೆ ಇಟ್ಟಿದ್ದಾರೆ.
ದಶಕಗಳಿಂದ ಬಳ್ಳಾರಿ-ಹೊಸಪೇಟೆ ಪ್ರದೇಶದ ರೈಲು ಪ್ರಯಾಣದ ಅವಿಭಾಜ್ಯ ಅಂಗವಾಗಿರುವ ರೈಲು ಹಂಪಿ ಎಕ್ಸ್‌ಪ್ರೆಸ್ ರೈಲು ನಾಲ್ಕೂವರೆ ದಶಕ ಪೂರೈಸಿದೆ. ಜನರನ್ನು ನಗರಗಳೊಂದಿಗೆ ಬೆಸೆಯುವುದರಿಂದ ಹಿಡಿದು, ಸಾವಿರಾರು ಪ್ರಯಾಣಿಕರಿಗೆ ಸೇವೆ ಸಲ್ಲಿಸುವವರೆಗೆ, ಹಂಪಿ ಎಕ್ಸ್‌ಪ್ರೆಸ್ ನಮ್ಮ ಈ ಭಾಗದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಪ್ರಯಾಣಿಕರು ಹಂಪಿ ಎಕ್ಸ್‌ಪ್ರೆಸ್ ರೈಲಿನ ಸೇವೆ ಕುರಿತು ಧನ್ಯತಾ ಭಾವ ಅರ್ಪಿಸಿದ್ದಾರೆ.

ಜನರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದಮಾತ್ರಕ್ಕೆ ಸಾರಿಗೆ ವಿಚಾರದಲ್ಲಿ ಸಂತೃಪ್ತರಾಗಿದ್ದಾರೆ ಎಂದಲ್ಲ. ಅವರು ಇನ್ನಷ್ಟು ಬೇಡಿಕೆಗಳನ್ನು ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಮುಂದಿಟ್ಟಿದ್ದಾರೆ. ಇಂದಿನ ಐತಿಹಾಸಿಕ ಕ್ಷಣದಲ್ಲಿ ಭಾರತೀಯ ರೈಲ್ವೆಯಿಂದ ನಮ್ಮ ಪ್ರದೇಶಕ್ಕೆ ಇನ್ನಷ್ಟು ಹೆಚ್ಚಿನ ಗಮನ ಮತ್ತು ಆದ್ಯತೆ ಸಿಗಬೇಕಿದೆ ಎಂದು ಬಳ್ಳಾರಿ, ಹೊಸಪೇಟೆ ರೈಲು ಬಳಕೆದಾರರು ಆಗ್ರಹಿಸಿದ್ದಾರೆ.
ಹಂಪಿ ಎಕ್ಸ್‌ಪ್ರೆಸ್ ರೈಲು (16591/16592) ಸಂಚಾರ
ಈ ರೈಲು ಮೈಸೂರನ್ನು ಸಂಜೆ 06.15ಕ್ಕೆ ಬಿಡುತ್ತದೆ. ಅಲ್ಲಿಂದ ಮಂಡ್ಯ, ಮದ್ದೂರು ಮೂಲಕ ರಾತ್ರಿ ಕೆಎಸ್ ಆರ್ ಬೆಂಗಳೂರಿಗೆ 9.40ಕ್ಕೆ ಆಗಮಿಸುತ್ತದೆ. ಅಲ್ಲಿಂದ ಯಶವಂತಪುರ, ಹಿಂದೂಪುರ, ಧರ್ಮಾವರಂ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೋಪ್ಪಳ ಸೇರಿ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಹುಬ್ಬಳ್ಳಿ ಜಂಕ್ಷನ್ ತಲುಪುತ್ತದೆ. ಒಟ್ಟು ಸುಮಾರು 680 ಕಿಲೋ ಮೀಟರ್ ದೂರವನ್ನು ಇದು ಕ್ರಮಿಸುತ್ತದೆ. ಇದೇ ಮಾರ್ಗದಲ್ಲಿ ಎರಡು ದಿಕ್ಕಿನಲ್ಲೂ ರೈಲು ಸಂಚರಿಸುತ್ತದೆ.
ವಂದೇ ಭಾರತ್ ರೈಲಿಗೆ ಬೇಡಿಕೆ
ಬಹುದಿನಗಳಿಂದ ಬಳ್ಳಾರಿ, ಹೊಸಪೇಟೆ ಮಾರ್ಗವಾಗಿ ವಂದೇ ಭಾರತ್ ರೈಲಿಗೆ ಬೇಡಿಕೆ ಇದೆ. ವಿಜಯಪುರದಿಂದ ಹೊಸಪೇಟೆ, ಬಳ್ಳಾರಿ, ಧರ್ಮಾವರಂ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಬಿಡುಗಡೆಗೆ ಪ್ರಯಾನಿಕರು ಒತ್ತಾಯಿಸಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ, ಕೈಗಾರಿಕೆ, ಶಿಕ್ಷಣಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಮೇಲ್ದರ್ಜೆಯ ಸಾರಿಗೆ ಸೇವೆಯು ಈ ಭಾಗದ ಜನರಿಗೆ ಲಭಿಸುತ್ತದೆ ಎಂದಿದ್ದಾರೆ. ವರ್ಷಗಳಿಂದ ಈ ಬೇಡಿಕೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಸಂಸತ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂಬ ಉತ್ತರಗಳು ಕೇಳಿ ಬಂದಿವೆ.
ರೈಲ್ವೆ ಬಳಕೆದಾರರ ಇತರ ಬೇಡಿಕೆಗಳು
* ಬಳ್ಳಾರಿ ಮತ್ತು ಹೊಸಪೇಟೆ ಪ್ರದೇಶಕ್ಕೆ 'ವಂದೇ ಭಾರತ್' ರೈಲು
* ಉತ್ತಮ ಸೌಲಭ್ಯಗಳೊಂದಿಗೆ ಸುಸಜ್ಜಿತ ಬೋಗಿಗಳು (Coaches) ಒದಗಿಸಬೇಕು
* ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ರೈಲು ಸಂಪರ್ಕ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕು.
ಈ ಭಾಗದಲ್ಲಿ ಅಗತ್ಯ ರೈಲು ಮೂಲಸೌಲಭ್ಯಗಳು ನೀಡಿದರೆ, ನಮ್ಮ ಬೇಡಿಕೆ ಈಡೇರಿದಲ್ಲಿ 46 ವರ್ಷಗಳ ಸೇವೆಗೆ ಮೆರವು ಬರುತ್ತದೆ. ಮುಂದೆಯೂ ಇಂತಹ ಇನ್ನೂ ಅನೇಕ ಮೈಲಿಗಲ್ಲುಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಬಳಕೆದಾರರು ತಿಳಿಸಿದ್ದಾರೆ.
🚆 46 Years of Hampi Express!A train that has been part of the railway journey of the Ballari–Hosapete region for decades! ❤️From connecting people to cities to serving thousands of passengers, Hampi Express holds a special place in our region.On this occasion, our region deserves more attention from Indian Railways!🙏 Requesting:• Need Vande bharath to Ballari and Hosapete region• Good Coaches along with Good Facilities.• Improved railway connectivity for Ballari & Vijayanagara districts.46 years of service, and many more milestones to come! 🚆@drmubl@SWRRLY @RailwaySeva @AshwiniVaishnaw#HampiExpress #Ballari #Hosapete
— Ballari Tweetz (@TweetzBallari) November 1, 2026


Click it and Unblock the Notifications
