SWR: ಬೆಂಗಳೂರು SMVTಯಿಂದ ಹೊರಡುವ ರೈಲು ಸಂಚಾರ ರದ್ದು, ದೀಪಾವಳಿ ಪ್ರಯಾಣಿಕರಿಗೆ ವಿಶೇಷ ರೈಲು ಸೇವೆ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರೈಲ್ವೆ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನೂ ಕಾರಣಾಂತರಗಳಿಂದ ಚರ್ಲಪಲ್ಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ ಬೆಂಗಳೂರು) ನಡುವಿನ ವಾರದ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ನೈಋತ್ಯ ರೈಲ್ವೆಯು ಚಾರ್ಲಪಲ್ಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ ಬೆಂಗಳೂರು) ನಡುವೆ ಸಂಚರಿಸುವ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ನಿಗದಿತ ಸಂಚಾರ ನವೆಂಬರ್ ಮತ್ತು ಡಿಸೆಂಬರ್ 2026ರ ನಿರ್ದಿಷ್ಟ ದಿನಾಂಕಗಳಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದರು.

Diwali Special Trains 2026

ರದ್ದಾದ ಬೆಂಗಳೂರು ರೈಲುಗಳ ಪಟ್ಟಿ ಇಲ್ಲಿದೆ

* ಚರ್ಲಪಲ್ಲಿ-ಎಸ್‌ಎಂವಿಟಿ ಬೆಂಗಳೂರು ವಾರದ ವಿಶೇಷ ಎಕ್ಸ್‌ಪ್ರೆಸ್‌ ರೈಲು (07065) ಸೋಮವಾರ ನವೆಂಬರ್ 2, 9, 16, 23 ಮತ್ತು 30ರಂದು ಸಂಚರಿಸಬೇಕಿದ್ದ ಈ ರೈಲಿನ ಎಲ್ಲಾ ಐದು ಪ್ರಯಾಣ ರದ್ದುಗೊಳಿಸಲಾಗಿದೆ.

* ಎಸ್‌ಎಂವಿಟಿ ಬೆಂಗಳೂರು - ಚರ್ಲಪಲ್ಲಿ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು (07066) ಮಂಗಳವಾರ 2026 ನವೆಂಬರ್ 3, 10, 17, 24 ಮತ್ತು ಡಿಸೆಂಬರ್ 1 ರಂದು ಸಂಚರಿಸಬೇಕಿದ್ದ ಈ ರೈಲಿನ ಎಲ್ಲಾ ಐದು ಪ್ರಯಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ರೈಲುಗಳ ಸಂಚಾರ ರದ್ದತಿಯನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳುವಂತೆ ಅವರು ವಿನಂತಿಸಿಕೊಂಡಿದ್ದಾರೆ.

ದೀಪಾವಳಿ-ಛತ್ ಹಬ್ಬ: ವಿಶೇಷ ರೈಲುಗಳ ಸಂಚಾರ

ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಸಂಚಾರ ದಟ್ಟಣೆ, ಅನುಕೂಲ ಒದಗಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಖಾತಿಪುರ ನಡುವೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತದೆ. ವಿಶೇಷ ರೈಲುಗಳ ವೇಳಾಪಟ್ಟಿ ಇಲ್ಲಿದೆ.

ಹುಬ್ಬಳ್ಳಿ - ಖಾತಿಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (07371) 2026 ಅಕ್ಟೋಬರ್ 31 ರಿಂದ ಡಿಸೆಂಬರ್ 05 ರವರೆಗೆ ಸಂಚರಿಸಲಿದೆ. ಖಾತಿಪುರ - ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (07372) 2026 ನವೆಂಬರ್ 02 ರಿಂದ ಡಿಸೆಂಬರ್ 07ರವರೆಗೆ ಸಂಚರಿಸಲಿವೆ ಎಂದು ಮಂಜುನಾಥ್ ಕನಮಡಿ ಅವರು ತಿಳಿಸಿದರು.

ಎರಡು ದಿಕ್ಕುಗಳಲ್ಲಿ ತಲಾ 6 ಟ್ರಿಪ್

ಹುಬ್ಬಳ್ಳಿಯಿಂದ ಖಾತಿಪುರಕ್ಕೆ ಎರಡೂ ದಿಕ್ಕುಗಳಲ್ಲಿ ರೈಲು ತಲಾ 6 ಟ್ರಿಪ್‌ಗಳ ಸೇವೆ ಒದಗಿಸಲಿವೆ. ಹುಬ್ಬಳ್ಳಿಯಿಂದ ಈ ರೈಲುಗಳು ಗದಗ, ಬಾದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಪುಣೆ, ವಸೈ ರೋಡ್, ವಡೋದರಾ, ಅಜ್ಮೀರ್ ಮತ್ತು ಜೈಪುರ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ. ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ಜನರಲ್ ಸೇರಿ ಒಟ್ಟು 20 ಬೋಗಿಗಳನ್ನು ಹೊಂದಿವೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ, ಟಿಕೆಟ್ ಬುಕ್ಕಿಂಗ್‌ಗೆ IRCTC ಆಪ್ ವ ಈ ರೈಲಿನ ವೇಳಾಪಟ್ಟಿ ಮತ್ತು ಹೆಚ್ಚಿನ ವಿವರಗಳಿಗಾಗಿ ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ (https://enquiry.indianrail.gov.in/mntes/) ಅಥವಾ NTES ಅಪ್ಲಿಕೇಶನ್ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+